ಜಿಂಕೆ ಕೊಂಬು ಸಾಗಾಟ: ಆರೋಪಿಗಳ ಸೆರೆ

ಕುಂದಾಪುರ, ಜ.೧೧- ಓಮ್ನಿ ಕಾರಿನಲ್ಲಿ ಸುಮಾರು ೨೧ ಜಿಂಕೆ ಕೊಂಬುಗಳನ್ನು ಸಾಗಿಸುತ್ತಿದ್ದ ಐವರನ್ನು ಕುಂದಾಪುರದ ಅರಣ್ಯಾಧಿಕಾರಿಗಳ ತಂಡ ಕೋಟೇಶ್ವರದ ಬೈಪಾಸ್ ಬಳಿ ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ.
ಹೆಂಗವಳ್ಳಿಯ ರವಿ (೩೫), ಕುಂದಾಪುರದ ದಿನೇಶ ಗಾಣಿಗ (೫೪), ಅಲ್ಬಾಡಿಯ ದೀಪಕ್(೩೨), ಉದಯ ನಾಯ್ಕ(೩೪), ರವಿಚಂದ್ರ ಶೆಟ್ಟಿ (೩೨) ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ ಲಕ್ಷಾಂತರ ರೂ. ಮೌಲ್ಯದ ೨೧ ಜಿಂಕೆ ಕೊಂಬುಗಳೊಂದಿಗೆ ಸಾಗಾಟಕ್ಕೆ ಬಳಸಿದ ಓಮ್ನಿ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಕುಂದಾಪುರ ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್ ನೇತೃತ್ವದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿಯಿಂದ ಈ ಕಾರ್ಯಾಚರಣೆ ನಡೆದಿದೆ.

Leave a Comment