ಜಾಲಿ ಎಲ್‌ಎಲ್‌ಬಿಯಲ್ಲಿ ಮಾಜಿ ಪತಿ -ಪತ್ನಿ : ಹೃತೀಕ್, ಸುಸನ್ನೇ ಜೊತೆಯಾದ ಅಕ್ಷಯ್ ದಂಪತಿ

 

ಇತ್ತೀಚೆಗೆಷ್ಟೇ ದುಬೈನಲ್ಲಿ ತಮ್ಮ ಪುತ್ರರ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸದ್ದು ಮಾಡಿದ ಬಾಲಿವುಡ್ ನಟ ಹೃತೀಕ್ ರೋಷನ್ ಹಾಗೂ ಅವರ ವಿಚ್ಛೇದಿತ ಪತ್ನಿ ಸುಸನ್ನೇ ಖಾನ್ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.

ಅಕ್ಷಯ್ ಕುಮಾರ್ ನಟನೆಯ `ಜಾಲಿ ಎಲ್‌ಎಲ್‌ಬಿ-2` ಚಿತ್ರದಲ್ಲಿ ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ ದಂಪತಿ ಹಾಗೂ ಹೃತೀಕ್ ರೋಷನ್ ಹಾಗೂ ಮಾಜಿ ಪತ್ನಿ ಸುಸನ್ನೇ ಖಾನ್ ಜೊತೆಯಾಗಿ ಚಿತ್ರ ವೀಕ್ಷಿಸಿ ಸಂಭ್ರಮಿಸಿದ್ದಾರೆ.

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ 14 ವರ್ಷಗಳ ದಾಂಪತ್ಯ ಜೀವನ ನಡೆಸಿದ ಬಳಿಕ ವಿಚ್ಛೇದನ ಪಡೆಯುವ ಮೂಲಕ ಪರಸ್ಪರ ದೂರವಾಗಿ ನಾನೊಂದು ತೀರ ನೀನೊಂದು ತೀರ ಎಂದು ವಿರಹ ಗೀತೆ ಹಾಡುತ್ತಾ ತಮ್ಮದೇ ಆದ ದಾರಿ ಕಂಡುಕೊಂಡಿದ್ದರು.

ತಮ್ಮ ಪುತ್ರರ ಹುಟ್ಟುಹಬ್ಬ ನೆಪದಲ್ಲಿ ದೂರವಾಗಿದ್ದ ಈ ಜೋಡಿ ಮತ್ತೆ ಒಂದಾಗಿ ಕಾಣಿಸಿಕೊಂಡಿತ್ತು. ಇಬ್ಬರು ಪರಸ್ಪರ ಸಲುಗೆಯಿಂದ ಹಾಗೂ ಪ್ರೀತಿ, ವಿಶ್ವಾಸದಿಂದ ಮಾತನಾಡುತ್ತಿದ್ದನ್ನು ಗಮನಿಸಿದ ಅನೇಕರು ಮಾಜಿ ಪತಿ-ಪತ್ನಿ ಒಂದಾಗುವ ಲಕ್ಷಣ ಇರಬೇಕು ಎಂದು ಮಾತನಾಡಿಕೊಂಡಿದ್ದರು.

ಅದಕ್ಕೆ ಪೂರಕವೆನ್ನುವಂತೆ ಅಕ್ಷಯ್ ಕುಮಾರ್ ನಟನೆಯ `ಜಾಲಿ ಎಲ್‌ಎಲ್‌ಬಿ -2` ಚಿತ್ರದ ಪೂರ್ವಭಾವಿ ಪ್ರದರ್ಶನದಲ್ಲಿ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಜೊತೆಗೆ ಹೃತೀಕ್ ರೋಷನ್ ಹಾಗೂ ಅವರ ಮಾಜಿ ಪತ್ನಿ ಸುಸನ್ನೇ ಭಾಗವಹಿಸಿ ಚಿತ್ರ ವೀಕ್ಷಿಸಿದರು.

ಚಿತ್ರವನ್ನು ಒಟ್ಟಾಗಿ ವೀಕ್ಷಿಸುವ ಮೂಲಕ ಮತ್ತೆ ಒಂದಾಗುವ ಸೂಚನೆ ನೀಡಿದ್ದಾರೆ. ಹೃತೀಕ್ ರೋಷನ್ ಮತ್ತು ಸುಸನ್ನೇ ಖಾನ್ ಅವರ ಒಂದುಗೂಡಿಸುವಲ್ಲಿ ಅಕ್ಷಯ್ ಕುಮಾರ್ ಹಾಗೂ ಪತ್ನಿ ಟ್ವಿಂಕಲ್ ಖನ್ನಾ ಪ್ರಮುಖ ಪಾತ್ರ ವಹಿಸಿದ್ದಾರೆ.

ಒಟ್ಟಾಗಿ ಚಿತ್ರ ವೀಕ್ಷಿಸಿದ ಜೋಡಿ ಖುಷಿಪಟ್ಟು ಸಂಭ್ರಮಿಸಿದರು. ಅಕ್ಷಯ್ ಕುಮಾರ್ ನಟನೆಯ `ಜಾಲಿ ಎಲ್‌ಎಲ್‌ಬಿ -2` ಚಿತ್ರ ಇದೇ ವಾರ ದೇಶಾದ್ಯಂತ ತೆರೆಕಾಣುತ್ತಿದೆ.

ಹೃತೀಕ್ ರೋಷನ್, ಸುಸನ್ನೇ ಖಾನ್, ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ, ನಟಿ ಗಾಯಿತ್ರಿ ಜೋಶಿ, ವಿಕಾಸ್ ಒಬೆರಾಯ್ ಜೊತೆಯಾಗಿ ಸಂಭ್ರಮಿಸಿ ಖುಷಿಪಟ್ಟಿದ್ದಾರೆ.

ಮಾಜಿ ಪತ್ನಿಸು ಸನ್ನೇಖಾನ್ ಜೊತೆಗಿರುವ ಫೋಟೋಗಳನ್ನು ಹೃತೀಕ್ ರೋಷನ್ ತಮ್ಮ ಮಕ್ಕಳಾದ ಹೆರಾನ್ ಮತ್ತು ಹೃದಾನ್ ಅವರಿಗೆ ಕಳಿಸಿ ಸಂಭ್ರಮಿಸಿದ್ದಾರೆ.

* * *

 

Leave a Comment