ಜಾರ್ಜ್ ಫರ್ನಾಂಡೀಸ್ ಆಗಿ ನವಾಜುದ್ದೀನ್!

ಮುಂಬೈ, ಜು 4 – ತಮ್ಮ ವಿಭಿನ್ನ ಅಭಿನಯದ ಮೂಲಕ ಜನಮೆಚ್ಚುಗೆ ಗಳಿಸಿದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದೀಖಿ, ಬೆಳ್ಳಿ ತೆರೆಯ ಮೇಲೆ ಸಮಾಜವಾದಿ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಶಿವಸೇನಾ ಮುಖಂಡ ಸಂಜಯ್ ರಾವತ್ ಅವರು ಶಿವಸೇನಾ ಪಕ್ಷದ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಜೀವನಾಧಾರಿತ ‘ಠಾಕ್ರೆ’ ಚಿತ್ರ ತೆರೆಗೆ ತಂದಿದ್ದು, ನವಾಜುದ್ದೀನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಸಂಜಯ್ ರಾವತ್, ಸಮಾಜವಾದಿ ಮುಖಂಡ ಜಾರ್ಜ್ ಫರ್ನಾಂಡೀಸ್ ಅವರ ಜೀವನಧಾರಿತ ಚಿತ್ರವೊಂದನ್ನು ಹೊರತರುವ ಯೋಜನೆಯಲ್ಲಿದ್ದಾರಂತೆ.

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಹಾಗೂ ಸಂಜಯ್ ರಾವತ್ ಆತ್ಮೀಯ ಸ್ನೇಹಿತರಾಗಿದ್ದರು. 1950-75ರ ವರ್ಷದೊಳಗಿನ ಫರ್ನಾಂಡೀಸ್ ಅವರ ಮುಂಬೈ ಜೀವನ ಕುರಿತಾದ ಚಿತ್ರ ಇದಾಗಿದೆ ಎಂಬ ಮಾತು ಬಿಟೌನ್ ಅಂಗಳದಲ್ಲಿ ಕೇಳಿ ಬರುತ್ತಿದೆ.

 

Leave a Comment