ಜಾನ್ ಮಿಲ್ಟನ್ ಟೆಕ್ನೋ ಶಾಲೆ : ಶಿಕ್ಷಕರ ದಿನಾಚರಣೆ

ರಾಯಚೂರು.ಸೆ.07- ನಗರದ ಜಾನ್ ಮಿಲ್ಟನ್ ಟೆಕ್ನೋ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಶಾಲಾಧ್ಯಕ್ಷ ಎನ್.ರಾಮಾಂಜಿನೇಯ್ಯ ಅವರು, ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ, ಮಾತನಾಡುತ್ತಾ, ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ, ಮಹಾನ್ ವ್ಯಕ್ತಿಗಳನ್ನಾಗಿ ಮಾಡುತ್ತಾರೆಂದರು.
ಶಾಲಾ ಮುಖ್ಯಗುರುಗಳಾದ ಮಾಣಿಕಮ್ಮ ಮಾತನಾಡಿ, ಶಿಕ್ಷಕರು ತಾಯಿಯ ತಾಳ್ಮೆ ಬೆಳೆಸಿಕೊಂಡು ನೈತಿಕ ಬಲದೊಂದಿಗೆ ಪಾಠ-ಪ್ರವಚನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು. ಶಾಲಾಡಳಿತಾಧಿಕಾರಿ ವಿಜಯಲಕ್ಷ್ಮೀ, ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment