ಜಾನಿ

ಎರಡು ದಶಕಕ್ಕೂ ಹೆಚ್ಚು ಕಾಲ ಛಾಯಗ್ರಾಹಕರಾಗಿ ಗುರುತಿಸಿಕೊಂಡಿರುವ ಪಿ.ಕೆ.ಹೆಚ್.ದಾಸ್  ಮೊದಲಬಾರಿ  ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ’ಜಾನಿ’ ಈ ವಾರ ಬಿಡುಗಡೆಯಾಗಿದೆ.
ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್‌ರವರ  ೨೫ನೇ ಚಿತ್ರ, ಎಲ್ಲಾ ಹಾಡುಗಳಿಗೂ ಚಿನ್ನಿಪ್ರಕಾಶ್ ನೃತ್ಯ ಸಂಯೋಜನೆ, ಹಿರಿಯ ಡ್ಯಾನ್ಸರ್ ಮೂಗೂರು ಸುಂದರ್ ೮೨ನೇ ವಯಸ್ಸಿನಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿರುವುದು ಜಾನಿಯ ವಿಶೇಷ.
ಚಿತ್ರದಲ್ಲಿ  ನಾಯಕ ಸರಳ ರೀತಿಯಲ್ಲಿ ಬದುಕಿಗೊಂದು ಸಣ್ಣ ಕೆಲಸ ಮಾಡಿಕೊಂಡಿರುವಾತ. ಅನಾಥನಾಗಿದ್ದರೂ ಅವನಿಗೆ ಸಾಥ್ ಕೊಟ್ಟು ಆತನ ಜೀವನಕ್ಕೆ ಎಂಟ್ರಿ ಕೊಡುತ್ತಾರೆ. ಅವರ್‍ಯಾರು ಎಂಬುದು ಕುತೂಹಲವಾಗಿದೆ. ಮತ್ತೊಂದು ಪಾತ್ರದಲ್ಲಿ ಆತನ ಗೆಳಯನಾಗಿ ನಾಯಿ ಕಾಣಿಸಿಕೊಂಡಿದ್ದು ಅದು ಮಾತನಾಡುತ್ತೆ. ಮಂಗಳೂರು, ಊಟಿ ಹಾಗೂ ಹಾಡನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸಲಾಗಿದೆ. ವಿಜಯ್‌ರಾಘವೇಂದ್ರ ನಾಯಕ. ಇವರಿಗೆ ಜೋಡಿಯಾಗಿ ಮಿಲನನಾಗರಾಜ್, ಕೇರಳದ ಜನ್ನಿ ನಟನೆ ಇದೆ.
ಇನ್ಸೆಪೆಕ್ಟರ್ ಪಾತ್ರದಲ್ಲಿ ರಂಗಾಯಣರಘು, ನಗಿಸಲು ಸಾಧುಕೋಕಿಲ, ಉಳಿದಂತೆ ಸುಮನ್, ಸುಮಿತ್ರಾ, ಶೋಭರಾಜ್, ಪವನ್‌ಕುಮಾರ್, ಡ್ಯಾನಿ ಅಭಿನಯಿಸಿದ್ದಾರೆ. ಸಂಭಾಷಣೆ ಸಿರೀಶ್‌ನಾರಾಯಣ್, ಛಾಯಗ್ರಹಣ ಕುಮಾರ್‌ಚಕ್ರವರ್ತಿ, ಸಾಹಸ ಮಾಸ್‌ಮಾದ ಅವರದಾಗಿದೆ.
ಗೆಳಯರಾದ ಜೆ.ಜಾನಕಿರಾಮ್, ಎಂ.ಅರವಿಂದ್, ಪುರುಷೋತ್ತಮ್ ನಿರ್ಮಾಪಕರುಗಳಾಗಿ ಗಾಂಧಿನಗರದಲ್ಲಿ  ಗುರುತಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಿಲನ ನಾಗರಾಜ್ ನಾಯಕಿಯಾಗಿದ್ದರೆ, ಜನನಿ ಮರಿಯಾ ಆಂಟೋನಿ, ಸುಮನ್, ಸುಮಿತ್ರ, ರಂಗಾಯಣ ರಘು, ಸಾಧುಕೋಕಿಲ ಅಭಿನಯವಿದೆ.

Leave a Comment