ಜಾನಪದ ಸಾಹಿತ್ಯ ಅಭಿವೃದ್ಧಿಗೆ ಸಲಹೆ

ಚಿಕ್ಕನಾಯಕನಹಳ್ಳಿ, ಜು. ೧೭- ಜಾನಪದ ಸಾಹಿತ್ಯವನ್ನು ಪೂರ್ವಿಕರು ಮೌಖಿಕವಾಗಿ ಹಾಡಿದ್ದು ಬಿಟ್ಟರೆ, ಎಲ್ಲಿಯೂ ಲಿಖಿತ ರೂಪದ ದಾಖಲಿಸಿಲ್ಲ ಎಂದು  ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನ ಸಾ.ಶಿ.ಮ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್‍ನ 144ನೇ ತಾಲ್ಲೂಕು ಘಟಕ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಿಕರು ತಮ್ಮ ಅನುಭವದಿಂದ ಅನುಭವಿಸಿ ಯಾವ ಕಟ್ಟುನಿಟ್ಟಿಲ್ಲದೆ, ವ್ಯಾಕರಣ ಬದ್ದತೆ, ಮೀಮಾಂಸ ಇಲ್ಲದೆ ಹಾಡುಗಳನ್ನು ಮೌಖಿಕವಾಗಿ ಹಾಡುತ್ತಾ ಸಮಾಜದ ಎಲ್ಲಾ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು. ಅಂತಹ ಜನಪದ ಹಾಡುಗಳನ್ನು ಇಂದಿನ ಪೀಳಿಗೆಗೆ ಗೊತ್ತುಪಡಿಸಲು ಪೂರ್ವಿಕರು ಜಾನಪದ ಸಾಹಿತ್ಯವನ್ನು ಮೌಖಿಕವಾಗಿ ಹಾಡಿದ್ದು ಮಾತ್ರ ಹೊರತುಪಡಿಸಿದರೆ ಲಿಖಿತ ರೂಪದಲ್ಲಿ ಎಲ್ಲಿಯೂ ದಾಖಲೆಯನ್ನು ಸೃಷ್ಟಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಜಾನಪದ ಸಾಹಿತ್ಯ ಉಳಿವಿಗಾಗಿ ರಾಜ್ಯದಲ್ಲಿ ಕನ್ನಡ ಜಾನಪದ ಪರಿಷತ್ ಸ್ಥಾಪನೆಯಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಜಾನಪದದ ಕಲಾವಿದರನ್ನು ಗುರುತಿಸಿ ಸಮಾಜದಲ್ಲಿ ಜಾನಪದ ಕಲೆಯನ್ನು ಉಳಿಸಲು ಮುಂದಾಗಿದೆ. ಈ ಪೀಳಿಗೆಯಲ್ಲಿ ಕಾಲಕ್ಕೆ ತಕ್ಕಂತೆ ಅನ್ನುವ ಹಾಗೆ ಅಶ್ಲೀಲ ಹಾಗೂ ಅಪಂಭ್ರಂಶ ಸಾಹಿತ್ಯವು ತಲೆ ಎತ್ತಿ ಮೆರೆಯುತ್ತಿದೆ. ಇಂದಿನ ಮಕ್ಕಳಿಗೆ ಪುಸ್ತಕದ ವಿದ್ಯೆಯೇ ಶ್ರೇಷ್ಠ ಎಂದು ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಜೀವನದ ಅರಿವು ಮೂಡಿಸುವುದು ಅಗತ್ಯ. ಮಕ್ಕಳ ಪ್ರತಿಭೆ ಶಕ್ತಿಯನ್ನು ಗುರುತಿಸಿಕೊಂಡು ಬೆಳೆಸಿದರೆ ಅದೇ ಸಂಸ್ಕೃತಿಯಾಗುತ್ತದೆ ಎಂದರು.

ತಾಲ್ಲೂಕಿನಲ್ಲಿ ಖ್ಯಾತ ಸಾಹಿತ್ಯ ಸಾರ್ವಭೌಮರಾದ ಹಂಸಲೇಖರವರ ಸಮ್ಮುಖದಲ್ಲಿ ನನ್ನ ಅಧಿಕಾರಾವಧಿಯಲ್ಲಿ ಪಟ್ಟಣದಲ್ಲಿ ಜಾನಪದ ಸಮಾವೆಶವನ್ನು ನಡೆಸಲಾಗಿತ್ತು. ಅಂದು 700ಕ್ಕೂ ಹೆಚ್ಚು ಜಾನಪದ ಕಲಾವಿದರು ಭಾಗವಹಿಸಿದ್ದರು. ಅದಾದನಂತರ ಮತ್ತೆ ಅಂತಹ ಬೃಹತ್ ಸಮಾವೇಶಗಳು ನಡೆದಿಲ್ಲ. ತಾಲ್ಲೂಕು ಸಾಹಿತ್ಯ, ಕಲೆ, ಸಂಸ್ಕೃತಿಗೆ ಇತಿಹಾಸ ಹೊಂದಿದೆ. ಕ್ಷೇತ್ರದಲ್ಲಿ ಕ.ಜಾ.ಪ ಸಮೀಕ್ಷೆ ನಡೆಸಿ ಇರುವ ಜನಾಪದ ಕಲಾವಿದರನ್ನು ಗುರುತಿಸಿ ಒಟ್ಟುಗೂಡಿಸಿ ಜಾನಪದ ಸಾಹಿತ್ಯ ಅಭಿವೃದ್ದಿ ಪಡಿಸಬೇಕೆಂದು ಸಲಹೆ ನೀಡಿದರು.

ಸಮಾರಂಭವ ಉದ್ಘಾಟಿಸಿದ ಬೆಂಗಳೂರಿನ ರಾಜ್ಯ ಕನ್ನಡ ಜಾನಪದ ಪರಿಷತ್ ಕಾರ್ಯಧ್ಯಕ್ಷ ಡಾ.ಎಸ್.ಬಾಲಾಜಿ ಮಾತನಾಡಿ, ಜಾನಪದ ಮೌಖಿಕ ಪರಂಪರೆಯಲ್ಲಿ ರೂಢಿಯಲ್ಲಿದೆ. ಗ್ರಾಮೀಣ ಭಾಗದಲ್ಲಿ ಹಿರಿಯರು ಮಾತುಗಳನ್ನೆ ಸಾಹಿತ್ಯವಾಗಿಸಿಕೊಂಡು ಜನಪದ ಸಾಹಿತ್ಯವನ್ನು ಹಾಡಿ ಮೆರೆದಿದ್ದಾರೆ. ಇಡಿ ವಿಶ್ವದಲ್ಲಿ 165 ಪಿ.ಹೆ.ಡಿ.ಪದವಿಯ ಪುರಸ್ಕಾರ ಪಡೆದಿದ್ದಾರೆ. ಕರ್ನಾಟಕದಲ್ಲಿ ಜುಂಜಪ್ಪ, ಮೈಲಾರಪ್ಪ, ಸವದತ್ತಿ ಎಲ್ಲಮ್ಮ ಸೇರಿದಂತೆ ಇನ್ನಿತರ ದೈವದ ಮೇಲೆ ಜಾನಪದ ಹಾಡುಗಳನ್ನು ಹೊರಸೂಸಿದ್ದಾರೆ. ಸರ್ಕಾರ ಕುರಿ, ಕೋಳಿ, ಶ್ವಾನಗಳ ಸಂಖ್ಯಾ ಸಮೀಕ್ಷೆ ನಡೆಸುತ್ತದೆ. ಆದರೆ ಜಾನಪದ ಕಲಾವಿದರನ್ನು ಗುರುತಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಾರಂಪರಿಕ ಜ್ಞಾನ ಹೊಂದಿರುವ ಬುಡಕಟ್ಟಿನ ಜನಾಂಗ ಸಾಹಿತ್ಯವನ್ನು ಮುಂದುವರಿಸಿಕೊಂಡು ಹೊಗುತ್ತಿರುವುದು ಈಗಲೂ ಕಂಡು ಬರುತ್ತದೆ .ಕ.ಜಾ.ಪ ವೇದಿಕೆ ಕಾರ್ಯಕ್ರಮಗಳ ಜತೆಗೆ ಗ್ರಾಮಗಳಿಗೆ ತೆರಳಿ ಎಲೆಮರೆ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಕಲೆಯ ಅಸ್ಥಿತ್ವವನ್ನು ಉಳಿಸಬೇಕೆಂದರು.

ಇದೇ ಸಂದರ್ಭದಲ್ಲಿ ತತ್ಪಪದಕಾರ ಸಿ.ಎಸ್. ದೊರೆಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ  ಶ್ರೀನಿವಾಸಮೂರ್ತಿ, ರಾಜ್ಯ ಸಂಚಾಲಕ ಡಾ.ಕನಕತಾರ, ತಾ. ಕ.ಜಾ.ಪ ಅಧ್ಯಕ್ಷ ಡಾ.ಸಿಕೆ.ಶೇಖರ್, ಕಾರ್ಯದರ್ಶಿ ರವಿಕುಮಾರ್, ನವೋದಯ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಎಲ್.ಶಿವಕುಮಾರಸ್ವಾಮಿ ,ಪ್ರೊ.ಹೆಚ್.ಎಸ್. ಶಿವಯೋಗಿ, ಕುಪ್ಪೂರು ಪಂಚಾಯ್ತಿ ಅಧ್ಯಕ್ಷ ಸೋಮಶೇಖರ್, ರಂಗ ಕಲಾವಿದರಾದ ಹನುಮಯ್ಯ, ಲಿಂಗದೇವರು, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ತಾ.ರಂಗ ಕಲಾವಿದರ ಸಂಘದ ಸಿದ್ದು ಜಿ.ಕೆರೆ ಮತ್ತಿತರರು ಉಪಸ್ಥಿತರಿದ್ದರು.

Leave a Comment