ಜಾನಪದ ಪ್ರಾಚೀನ ಕಲೆ ನಿಂಬಣ್ಣವರ

ಧಾರವಾಡ ನ.18–ಭಾರತೀಯ ಸಾಂಸ್ಕೃತೀಕ ಕಲಾ ಪರಂಪರೆಯಲ್ಲಿ ಒಂದಾದ ನಮ್ಮ ಜಾನಪದ ಕಲಾ ಪ್ರಕಾರವೂ ಅತ್ಯಂತ ಪ್ರಾಚೀನ ಕಲೆಯಾಗಿದ್ದು, ನಮ್ಮ ದೇಶವುಭಾರತೀಯ ಸಾಂಸ್ಕೃತಿಕ ಕಲೆ ಹಾಗೂ ವಿಶೇಷವಾಗಿ ಜಾನಪದ ಕಲೆಗಳಿಂದ ಶ್ರೀಮಂತಿಕೆಯಾಗಿದ್ದು, ಮಹಾನ್ ಕಲಾವಿದರು ಉಳಿಸಿ ಬೆಳೆಸಿದಂತಹ ಕಲೆಯ ನಾಡು ನಮ್ಮ ಕರ್ನಾಟಕ ರಾಜ್ಯವಾಗಿದೆ. ನಾಡಿನ ಹೆಸರಾಂತ ಕಲಾವಿದರಾದ ಪಂಡಿತ ಭೀಮಸೇನ ಜೋಶಿ, ಪಂಡಿತ ಬಸವರಾಜ ರಾಜಗುರು, ಪಂಡಿತ ಮಲ್ಲಿಕಾರ್ಜುನ ಮನಸೂರ, ಮತ್ತು ಡಾ. ಗಂಗುಬಾಯಿ ಹಾನಗಲ್ ಅವರಂತೆ  ಈ ನಿಟ್ಟಿನತ್ತ ಇಂದಿನ ಯುವ ಜನತೆ ಜನಪದ ಕಲೆಗಳಿಗೆ ಆಸಕ್ತಿ ವಹಿಸಬೇಕು ಸರ್ಕಾರದಿಂದ ಸಿಗುವಂತ ಸೌಲಭ್ಯಗಳನ್ನು ಸದೂಪಯೋಗ ಪಡೆಸಿಕೊಳ್ಳಬೇಕೆಂದು ಕಲಘಟಗಿ ಕ್ಷೇತ್ರದ ಶಾಸಕರದ ಸಿ.ಎಮ್ ನಿಂಬಣ್ಣವರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಹಾಗೂ ದುಮ್ಮವಾಡ ಗ್ರಾಮ ಪಂಚಾಯತ ಸಹಯೋಗದಲ್ಲಿ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ಪಂಚಾಯತ ಆವರಣದಲ್ಲಿಏರ್ಪಡಿಸಿದ ಗಿರಿಜನ ಉತ್ಸವ  ಉದ್ಘಾಟಿಸಿ ಮಾತನಾಡಿದ ಅವರು  ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲಾ  ಪ್ರಕಾರಗಳಲ್ಲಿ ಇಂದಿನ ಯುವ ಜನತೆಗೆ ಆಸಕ್ತಿಯ ಕೊರತೆ ಉಂಟಾಗಿದ್ದು, ಆ ನಿಟ್ಟಿನತ್ತ ಶೈಕ್ಷಣಿಕ ಮಟ್ಟದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶೈಕ್ಷಣಿಕ ಮಟ್ಟದವರೆಗೆ ಸಂಸ್ಕೃತಿಕ ಕಲೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ಅವಶ್ಯವಿದೆ. ಈ ನಿಟ್ಟಿನತ್ತ ಸಂಘ ಸಂಸ್ಥೆಗಳು ಅರಿವು ಮೂಡಿಸುವಂತೆ ಕರೆ ನೀಡಿದರು. ಈ ಗಿರಿಜನ ಉತ್ಸವ  ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲ ಕಲಾವಿದರಿಗೆ ಶುಭ ಕೋರಿದರು.
ಮುಖ್ಯ ಅಥಿತಿಗಳಾಗಿ ದುಮ್ಮವಾಡ ಗ್ರಾಮ ಮಾಡಿ ಪಂಚಾಯತ ಅಧ್ಯಕ್ಷರಾದ  ಧನಪಾಲ ಬೆಟದೂರ ಅವರು ಮಕ್ಕಳಿಗಾಗಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತೀಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಅವುಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು ನಮ್ಮೆಲ್ಲ ಕಲಾವಿದರ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ದುಮ್ಮವಾಡ ಗ್ರಾಮ ಪಂಚಾಯತ ಅಧ್ಯಕ್ಷರಾದ ಸಂಕವ್ವ ಧನಪಾಲ ಬೆಟದೂರ ಅವರು ಮಾತನಾಡುತ್ತಾ, ದುಮ್ಮವಾಡ ಗ್ರಾಮದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಹಿರಿಯ ಕಲಾವಿದರು ಸೇವೆ ಸಲ್ಲಿಸುತ್ತಿದ್ದು ಇಂದಿನ ಯುವ ಜನತೆ ಅವರ ಮಾರ್ಗದರ್ಶನ ಪಡೆದು ಕಲಾ ಕ್ಷೇತ್ರದಲ್ಲಿ ಅತ್ಯುತ್ತಮ ಕಲಾವಿದರಾಗಲು ಮನವಿ ಮಾಡಿದರು. ಮಕ್ಕಳಿಗಾಗಿ ಸಂಗೀತ, ನೃತ್ಯ, ನಾಟಕ ಹಾಗೂ ವಿವಿಧ ಕಲಾ ಪ್ರಕಾರಗಳ ಯೋಜನೆಗಳನ್ನು ಇಲಾಖೆಯ ಮೂಲಕ ಪಡೆದುಕೊಳ್ಳುವಂತೆ ಕೋರಿದರು.
ವೇದಿಕೆ ಮೇಲೆ ಅತಿಥಿಗಳಾಗಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ  ದ್ರಾಕ್ಷಾಯಣಿ ಹೂಲಗೂರಮಠ, ಸದಸ್ಯರಾದ ಬಸಪ್ಪ ದೊಡ್ಡಮನಿ,  ಮೈಲಾರಪ್ಪ ಕಡ್ಡಿಪುಡಿ, ರಾಜಕುಮಾರ ಕಾಮಜಿ, ಕಮಲವ್ವ ಹುಬ್ಬಳ್ಳಿ, ಉಮೇಶ ಬಸರಿಕೊಪ್ಪ, ಶಕುಂತಲಾ ಹೊಸಮನಿ, ಪ್ರೇಮಾ ಬೆಳ್ಳಿಹುಲಿ, ದ್ಯಾಮಣ್ಣ ಸತ್ತೂರ. ಹಾಗೂ ಊರಿನ ಹಿರಿಯರಾದ ನಿಂಗಪ್ಪ ಹುಬ್ಬಳ್ಳಿ,  ಭೀಮಪ್ಪ ಬಸರಿಕೊಪ್ಪ,ಮಲ್ಲೇಶಪ್ಪ ಕರಲಿಂಗನ್ನವರ, ಮಲ್ಲೇಶಪ್ಪ ಬ್ಯಾಡರಕೊಪ್ಪ, ರಾಮಪ್ಪ ಮಾಳಗಿ, ಹಾಗೂ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.

Leave a Comment