ಜಾನಪದ ಪರಂಪರೆ ಶ್ರೀಮಂತಿಕೆ ಹೊಂದಿದೆ

ಹನೂರು: ಜ.25- ರಾಜ್ಯದ ಜಾನಪದ ಸಂಸ್ಕೃತಿಯನ್ನು ದೇಶದಲ್ಲಿ ಪ್ರತಿನಿಧಿಸುವಲ್ಲಿ ಚಾಮರಾಜನಗರ ಜಿಲ್ಲೆಯ ಪಾತ್ರ ಹಿರಿದಾಗಿದೆ ಎಂದು ಹಿರಿಯ ಸಾಹಿತಿ ಬಸವರಾಜ ದೊಡ್ಡಟ್ಟಿ ತಿಳಿಸಿದರು.
ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಚಾಮರಾಜನಗರ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನ ಕಾರ್ಯಕ್ರಮದ ಕವಿಗೋಷ್ಠಿಯ ಅಧ್ಯಕ್ಷತೆನ್ನು ವಹಿಸಿ ಅವರು ಮಾತಾನಾಡಿದರು.
ಈ ನೆಲದಲ್ಲಿ ಜಾನಪದ ಪರಂಪರೆ ಶ್ರೀಮಂತಿಕೆಯನ್ನು ಹೊಂದಿದೆ. ಜೊತೆಗೆ ಶರಣ ಸಾಹಿತ್ಯ, ಪ್ರಾಕೃತಿಕ ಸಿರಿಯನ್ನು ಒಳಗೊಂಡಿದೆ. ಕವನದಲ್ಲಿನ ಶಕ್ತಿ ಸಂಸ್ಕಾರ ನೀಡಲಿ. ಮುಂದಿನ ದಿನಗಳಲ್ಲಿ ರಾಮಾಪುರ ಹೋಬಳಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಲಿ ಎಂದ ಅವರು ಪ್ರಸ್ತುತ ದೇಶದಲ್ಲಿ ವಿಷಮಯ ವಾತಾವರಣದ ಬಗ್ಗೆ ಯಾರಿಗೂ ಕಾಣಿಸುತ್ತಿಲ್ಲ ಎಂದು ತಮ್ಮ ಪ್ರಾರಂಭದ ನುಡಿಯಲ್ಲಿಯೇ ಹರಿಹಾಯ್ದ ಅವರು ಪ್ರಪಂಚವೇ ಡಾ.ಅಂಬೇಡ್ಕರ್‍ನ್ನು ಕೊಂಡಾಡುತ್ತಿದ್ದರೆ, ನಮ್ಮ ದೇಶದಲ್ಲಿ ಅವರನ್ನು ನೋಡುತ್ತಿಲ್ಲ, ಅವರ ಮಾತುಗಳು ಕೇಳುತ್ತಿಲ್ಲ. ರಾಮರಾಜ್ಯದ ಕನಸು ಕಂಡ ಗಾಂಧಿ ಬೇಡ, ಬಸವಣ್ಣ, ಅಂಬೇಡ್ಕರ್ ಬೇಡ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿರುವವರು ನಿಮಗೆ ಬೇಕು ಎಂದರು.
ಮ.ಮ.ಬೆಟ್ಟ ಪ್ರಾದೇಶಿಕ ಜಾನಪದ ಅಧ್ಯಯನ ಕೇಂದ್ರ ಪ್ರಾಧ್ಯಾಪಕ ಡಾ.ಮಹೇಶ್ ಚಿಕ್ಕಲ್ಲೂರು ಆಶಯ ನುಡಿಗಳನ್ನಾಡಿದರು. ಯುವ ಕವಿಗಳಾದ ಅಜ್ಜೀಪುರ ಸುರೇಶ್ ಸೇಲ್ಫಿ ಗೀಳು ಕವನ ವಾಚನ ಮಾಡಿದರು. ವಿಜಯ ಬಾಯಿ ಹನೂರು ಅವರು ವಾಚಿಸಿದ ಪಾಲಿಸು ರಸ್ತೆ ನಿಯಮ ಎಂಬ ಕವನ ಮೆಚ್ಚುಗೆಗೆ ಪಾತ್ರವಾಯಿತು. ಕೊಳ್ಳೇಗಾಲದ ಪಂಕಚ ರುದ್ರಸ್ವಾಮಿ ಬೇಧ ಬಾವ ಕವನದ ಮೂಲಕ ಭ್ರೂಣ ಹತ್ಯೆಯನ್ನು ತುಂಬಾ ಮಾರ್ಮಿಕವಾಗಿ ವಾಚಿಸಿದರು, ಶಾಕ್ಯ ಸುಂದರ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವ ಕವಿಗಳು ತಮ್ಮ ಕವನಗಳ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷ ಸಿ.ಚಾಮಶೆಟ್ಟಿ ಯುವ ಕವಿಗಳು ಉಪಸ್ಥಿತರಿದ್ದರು.

Leave a Comment