ಜಾಧವ-ಪ್ರಿಯಾಂಕ ನಡುವಿನ ವಾಕ್ಸಮರ ತಾರಕಕ್ಕೆ

 

ಕಲಬುರಗಿ,ಮಾ.15-ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ ಜಾಧವ ಮತ್ತು ಸಚಿವ ಪ್ರಿಯಾಂಕ ಖರ್ಗೆ ಅವರ ನಡುವಿನ ವಾಕ್ಸಮರ ತಾರರಕ್ಕೇರಿದೆ.

ಪ್ರಿಯಾಂಕ ಖರ್ಗೆ ಅವರ ವಿರುದ್ಧ ಜಾಧವ, ಜಾಧವ ವಿರುದ್ಧ ಪ್ರಿಯಾಂಕ ಖರ್ಗೆ ದಿನಕ್ಕೊಂದು ಹೇಳಿಕೆ ನೀಡುವುದರ ಮೂಲಕ ತೆರೆಮರೆಯಲ್ಲಿ ಮುಗಿಸುಕಿನ ಗುದ್ದಾಟ ನಡೆಸಿದ್ದಾರೆ.

ಆಪರೇಷನ್ ಕಮಲಕ್ಕೆ ಒಳಗಾಗಿ ನಾನು ಮಾರಾಟವಾಗಿದ್ದೇನೆ ಎಂದು ಹೇಳುವುದರ ಮೂಲಕ ಸಚಿವ ಪ್ರಿಯಾಂಕ ಖರ್ಗೆ ಅವರು ನನ್ನ ತೇಜೋವಧೆ ಮಾಡುತ್ತಿದ್ದು, ನಾನು ಹಣ ಪಡೆದಿಲ್ಲ ಎಂದು ಯಾರ ಮೇಲಾದರೂ ಆಣೆ, ಪ್ರಮಾಣ ಮಾಡಲು ಸಿದ್ದವಿದ್ದೇನೆ. ಅವರು ಆಣೆ ಪ್ರಮಾಣ ಮಾಡಲು ಸಿದ್ದರಿದ್ದಾರಾ ಎಂಬ ಜಾಧವ ಹೇಳಿಕೆಗೆ, ಸಚಿವ ಪ್ರಿಯಾಂಕ ಖರ್ಗೆ ಅವರು ಆಣೆ ಪ್ರಮಾಣ ಮಾಡುವ ಪದ್ಧತಿ ನಮ್ಮನೆಯಲ್ಲಿ ಬೆಳೆಸಿಲ್ಲ. ಯಾವುದೇ ಕೆಲಸವಿದ್ದರೂ ಆದರೆ ” ಎಸ್” ಎನ್ನುತ್ತೇವೆ. ಆಗದೇ ಇದ್ದರೆ “ನೋ” ಎನ್ನುತ್ತೇವೆ ಹೊರತು ಹುಸಿ ಭರವಸೆ ನೀಡಿ, ಆಣೆ, ಪ್ರಮಾಣ ಮಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ

ಆಪರೇಷನ್ ಕಮಲಕ್ಕೆ ಒಳಗಾಗಿ ಮಾರಾಟವಾಗಿದ್ದೇನೆ ಎಂದು ಹೇಳುವುದರ ಮೂಲಕ ತೇಜೋವಧೆ ಮಾಡುತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಜಾಧವ ಎಚ್ಚರಿಕೆ ನೀಡಿದ ಬೆನ್ನಲ್ಲೆ ಸಚಿವ ಪ್ರಿಯಾಂಕ ಖರ್ಗೆ ಅವರು ಸಹ ಜಾಧವ ವಿರುದ್ಧ ನಾವೂ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಏಟಿಗೆ ಎದಿರೇಟು ನೀಡಿದ್ದಾರೆ.

Leave a Comment