ಜಾತೀಯತೆಗೆ ಒತ್ತು ಕೊಡದೇ ಭಾವೈಕ್ಯತೆಗೆ ಒತ್ತು ಕೊಡಿ:-ಮಲ್ಲಿಕಾರ್ಜುನಶ್ರೀ

ಧಾರವಾಡ ನ.8 – ಜಾತೀಯತೆಗೆ ಒತ್ತು ಕೊಡದೇ ಭಾವೈಕ್ಯತೆಗೆ ಒತ್ತು ಕೊಡಿ ಎಂದು ಮುರುಘಾಮಠದ ಶ್ರೀಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು. ಅವರು ಅಂಜುಮನ್ ಇಸ್ಲಾಂ ಸಂಸ್ಥೆಯ ಆವರಣದ ಸಭಾಭವನದಲ್ಲಿ ಆಯೋಜಿಸಿದ್ದ ಈದ್-ಎ-ಮಿಲಾದ್ ಉನ್ನಬಿ ಪ್ರಯುಕ್ತ ಆಯೋಜಿಸಿದ್ದ ಒಂದು ದಿನದ ಸರ್ವಧರ್ಮ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿದರು.  ಇವನಾರವ ಇವನಾರವ ಎನ್ನದೇ ಇವನಮ್ಮವ ಇವನಮ್ಮವ ಎಂದು ಬಸವಾದಿಶರಣರು 12ನೇಶತಮಾನದಲ್ಲಿ ಶರಣ ಕ್ರಾಂತಿ ಮಾಡಿ ಎಲ್ಲ ಧರ್ಮದವರೊಂದಿಗೆ ಭಾವೈಕ್ಯತೆಯೊಂದಿಗೆ ಇರಲು ನಾಂದಿ ಹಾಡಿದ್ದು ಸ್ಮರಿಸಿದರು. ಬರಿ ತತ್ವಜ್ಞಾನವನ್ನು ಓದಿದರೆ ಸಾಲದು. ಅದನ್ನು  ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದಾಗಮಾತ್ರ ಯಶಸ್ವಿಗಳಾಗಲುಸಾಧ್ಯ ಎಂದರು.
ನಿರ್ಮಲನಗರದಫಾದರ್ ಪ್ರಶಾಂತ ವಿಸ್ಲೆ ಡಿಸೋಜಾ ಮಾತನಾಡಿ ಧರ್ಮಗಳನ್ನು ಒಂದು ಹೂತೋಟಕ್ಕೆ ಹೋಲಿಸಿದಾಗ ತೋಟದಲ್ಲಿ ಬೇರೆ ಬೇರೆ ರೀತಿಯ ಹೂಗಳಿದ್ದು, ದುಂಬಿಯು ಅದರ ಮಕರಂದವನ್ನು ಹೀರಿ ಒಂದೆಡೆ ಸಂಗ್ರಹಿಸುತ್ತದೆ.
ಮೌಲಾನಾ ಅಲ್‍ಹಜ್ ಮಹಮ್ಮದ ಅಲಿ ಖಾಜಿ ಮಾತನಾಡಿ ಯಾವಾಗಲೂ ಒಳ್ಳೆಯ ಕರ್ಮಗಳನ್ನು ಮಾಡಿ ದೇವರುನಮ್ಮ ಕರ್ಮಗಳ ಅನುಸಾರವಾಗಿ ಫಲವನ್ನುನೀಡುತ್ತಾನೆ. ಎಲ್ಲರೊಂದಿಗೆ ಭ್ರಾತೃತ್ವದೊಂದಿಗೆ ಇರಿ. ಹಯಾತ್‍ಲೇಕೆ ಚಲೋ, ಕಾಯನಾತ್‍ಲೇಕೆ ಚಲೋ, ಚಲೋ ತೋಸಾರೆ ಜಹಾ ಕೋಲೇಕೆ ಚಲೋ. ಹಕ್ಕಿಯಂತೆ ಹಾರಾಡುವ, ಮೀನಿನಂತೆ ನೀರಿನಲ್ಲಿ ಈಜುವದನ್ನು ಕಲಿತಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಅಂಜುಮನ್ ಪ್ರೌಢಶಾಲೆಯ ಪ್ರಾಂಶುಪಾಲ ಆಯ್. ಎಂ. ಮುಲ್ಲಾವಹಿಸಿದ್ದರು. ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಪ್ರಾಂಶುಪಾಲ ಡಾ. ಎಮ್. ಎನ್.ಮೀರಾ ನಾಯಕ ಪಿಯು ಕಾಲೇಜ, ಪ್ರಾಂಶುಪಾಲ ಡಾ. ಜೆ. ಎ. ಜಾಗೀರದಾರ ಇನ್‍ಫಾರ್ಮೇಶನ್ ಸಾಯನ್ಸ್ ಮತ್ತು ಮ್ಯಾನೇಜಮೆಂಟ್ ಪ್ರಾಂಶುಪಾಲ ಪ್ರೊ. ಎಂ. ಎಲ್. ಕಿಲ್ಲೇದಾರ ಅಂಜುಮನ್ ಉರ್ದುಮತ್ತು ಇಂಗ್ಲೀಷ ಮೀಡಿಯಂ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಎ.ಎ. ಹರಿಹರ, ಕಛೇರಿ ಮೇಲ್ವಿಚಾರಕ ಎಸ್. ಎಸ್. ಸೈಯ್ಯದ, ಎಚ್. ಡಿ. ಶೇಖ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತಾಧಿಕಾರಿಎಸ್. ನಿಸಾರ ಅಹ್ಮದ್ ಕಾರ್ಯಕ್ರಮಕ್ಕೆ ಅನುಪಸ್ಥಿತಿಯಲ್ಲಿ ಶುಭ ಸಂದೇಶವನ್ನು ಕಳುಹಿಸಿದ್ದರು.
ಕುರಾನ್ ಪಠಣ, ಐಮಾನ್‍ಶೇಖ, ಅರ್ಶಿಯಾ, ನಾಥ (ದೇವರಸ್ತುತಿ) ಫಾತಿಮಾಬೆಟಗೇರಿ, ಸ್ವಾಗತ ಎ.ಎಂ. ಮುಲ್ಲಾ,ಕಾರ್ಯಕ್ರಮ ನಿರೂಪಣೆ ಡಾ:: ಎನ್. ಬಿ. ನಲತವಾಡ ಅತಿಥಿಗಳ ಪರಿಚಯ ಡಾ. ರಾಹತ್‍ಉನ್ನೀಸಾ,ವಂದನಾರ್ಪಣೆ ಅನೀಶ ತೊರಗಲ್ಲಮಾಡಿದರು.

Leave a Comment