ಜಾತಿ ಧರ್ಮಕ್ಕೆ ಮರುಳಾಗದೇ ಅಭಿವೃದ್ದಿಗೆ ಶ್ರಮಿಸುವರನ್ನು ಗೆಲ್ಲಿಸಿ: ಸಾತಿ ಸುಂದರೇಶ್

ದಾವಣಗೆರೆ, ನ.೬: ಹಣ, ಹೆಂಡ, ಜಾತಿ, ಧರ್ಮದ ಆಧಾರದ ಮೇಲೆ ಮರುಳಾಗದೇ, ಆಸೆ-ಅಮಿಷಕ್ಕೆ ಒಳಗಾಗದೇ ನಗರದ ಅಭಿವೃದ್ದಿಗೆ ಶ್ರಮಿಸುವ ಭಾರತೀಯ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಜನರು ತಮ್ಮ ಪವಿತ್ರವಾದ ಮತದಾನ ಮಾಡುವ ಮೂಲಕ ನಗರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬೇಕೆಂದು ಕಮ್ಯೂನಿಷ್ಟ್ ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಕರೆ ನೀಡಿದರು.
ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ ೨೮ನೇ ವಾರ್ಡಿನಲ್ಲಿ ಕಮ್ಯೂನಿಷ್ಟ್ ಪಕ್ಷದಿಂದ ಸ್ಪರ್ಧಿಸಿರುವ ಕಾಂ.ಆವರಗೆರೆ ಉಮೇಶ್ ಪರವಾಗಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಕೆಂಪು ಧ್ವಜವನ್ನು ಹಾರಿಸುವ ಮೂಲಕ ಕಮ್ಯೂನಿಷ್ಟ್ ಪಕ್ಷವನ್ನು ಆರಿಸಿ ತರಬೇಕು. ಅಲ್ಲದೇ ದಾವಣಗೆರೆಯಲ್ಲಿ ೬ ವಾರ್ಡುಗಳಲ್ಲಿ ಸಿಪಿಐನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ವಾರ್ಡಿನ ಮತದಾರರು ತಮ್ಮ ಅಮೂಲ್ಯ ಮತವನ್ನು ಸಿಪಿಐನ ಚಿನ್ನೆಯಾದ ಕುಡುಗೋಲು ತೆನೆಗೆ ನೀಡುವ ಮೂಲಕ ಜಯಶೀಲರನ್ನಾಗಿ ಮಾಡಬೇಕೆಂದರು.
ಈ ಹಿಂದೆ ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ, ಈಗ ನಡೆಸುತ್ತಿರುವ ಪಕ್ಷಗಳು ಜನರಿಗೆ ಕೇವಲ ಆಸೆ, ಅಮಿಷಗಳನ್ನು ನೀಡುತ್ತಿದ್ದಾರೆಯೇ ವಿನಹ ಅವುಗಳನ್ನು ಪಾಲಿಸುವ ಗೋಜಿಗೆ ಹೋಗುತ್ತಿಲ್ಲ. ಬದಲಿಗೆ ಸ್ವಾರ್ಥ ರಾಜಕಾರಣ, ಹಣ ದುರುಪಯೋಗ, ಅಧಿಕಾರ, ಕುರ್ಚಿ ಆಸೆಗೆ ಬಲಿಯಾಗಿ ರೆಸಾರ್ಟ್ ರಾಜಕಾರಣ ಮಾಡುವ ಮೂಲಕ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ. ಇಂತಹ ಡೋಂಗಿ ರಾಜಕಾರಣಿಗಳಿಗೆ ಮತದಾರರು ಸೂಕ್ತ ಉತ್ತರ ನೀಡಬೇಕೆಂದು ಹೇಳಿದರು.
ಚುನಾವಣಾ ಪ್ರಚಾರ ಕಾರ್ಯದ ನೇತೃತ್ವ ವಹಿಸಿದ್ದ ಕಾರ್ಮಿಕ ಮುಖಂಡ, ಜಿಲ್ಲಾ ಮಂಡಳಿ ಕಾರ್ಯದರ್ಶಿ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಹಿಂದೊಮ್ಮೆ ಇದೇ ಕ್ಷೇತ್ರದಿಂದ ಹುಟ್ಟಿದ ಕುಡುಗೋಲು ತೆನೆ ಚಿನ್ನೆಯ ಕಮ್ಯೂನಿಷ್ಟ್ ಪಕ್ಷವು ನಗರ ಸಭೆ ಮಾತ್ರವಲ್ಲದೇ ದಾವಣಗೆರೆಯ ಶಾಸಕ ಸ್ಥಾನವನ್ನು ಸತತ ಹಿಡಿದಂತಹ ಉದಾಹರಣೆಗಳು ಇವೆ. ಕಾರಣ ಇದೇ ೧೨ರಂದು ನಡೆಯುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ, ಎಲ್ಲಾ ವರ್ಗದೊಂದಿಗೆ ಬೆರೆತು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಏಕೈಕ ಪಕ್ಷ ಅದುವೇ ಭಾರತೀಯ ಕಮ್ಯೂನಿಷ್ಟ್ ಪಕ್ಷ. ಅದ ಕಾರಣ ದಾವಣಗೆರೆಯ ವಿವಿಧ ವಾರ್ಡುಗಳಲ್ಲಿ ಸ್ಪರ್ಧಿಸಿರುವ ೬ ಅಭ್ಯರ್ಥಿಗಳನ್ನು ಜನತೆ ಆರಿಸಿ ತರಬೇಕೆಂದರು ಮನವಿ ಮಾಡಿದರು.
ಪಾಲಿಕೆ ಚುನಾವಣೆಗೆ ಸ್ಪರ್ಥಿಸಿರುವ ಅಭ್ಯರ್ಥಿ ಆವರಗೆರೆ ಹೆಚ್.ಜಿ.ಉಮೇಶ್ ಮಾತನಾಡಿ, ಹಿಂದಿನಿAದಲೂ ದಾವಣಗೆರೆ ನಗರದ ಅಭಿವೃದ್ದಿಗೆ ಪೂರಕವಾದಂತ ಕೆಲಸವನ್ನು ಕಮ್ಯೂನಿಷ್ಟ್ ಪಕ್ಷ ಮಾಡಿಕೊಂಡು ಬಂದಿದೆ. ಪಕ್ಷದ ನಾಯಕರಾದ ಸುರೇಶಪ್ಪ, ಶೇಖರಪ್ಪ ಕಾರ್ಮಿಕರಿಗಾಗಯೇ ತಮ್ಮ ಪ್ರಾಣವನ್ನು ಬಲಿ ಕೊಟ್ಟರು. ನಗರ ಸಭೆ ಅಧ್ಯಕ್ಷರಾಗಿ, ಶಾಸಕರಾದ ಪಂಪಾಪತಿ ಕಾರ್ಮಿಕರು, ನಗರದ ಏಳಿಗೆಗೆ ಹಗಲಿರುಳು ದುಡಿದರು. ಅದರಂತೆ ಲಾವಣಿ ಬುಡೇನ್‌ಸಾಬ್, ಸೈಯದ್ ಜಿಕ್ರಿಯಾಸಾಬ್, ಹೆಚ್.ಕೆ.ರಾಮಚಂದ್ರಪ್ಪರAತಹ ನಾಯಕರು ನಗರದಲ್ಲಿ ಪಕ್ಷದಿಂದ ಗೆದ್ದು, ಉತ್ತಮ ಆಡಳಿತ ನೀಡಿ ನಗರಕ್ಕೆ ಮಾದರಿಯಾಗುವಂತ ಕೆಲಸ ಮಾಡಿದ್ದಾರೆ. ಕಾರಣ ಇದೇ ರೀತಿ ಸೇವೆ ಸಲ್ಲಿಸಲು ಮತದಾರರು ನನಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಈ ವೇಳೆ ಕಮ್ಯೂನಿಷ್ಟ್ ಪಕ್ಷದ, ಕಟ್ಟಡ ಕಾರ್ಮಿಕರ ಸಂಘದ ನಾಯಕರಾದ ಲಕ್ಷ್ಣ್, ಪಿ.ಕೆ.ಲಿಂಗರಾಜ್, ಸುರೇಶ್, ವಿಶಾಲಮ್ಮ, ಶಾರದಮ್ಮ, ಸರೋಜಮ್ಮ, ಬಾನಪ್ಪ, ಆವರಗೆರೆ ವಾಸು, ಜಯಪ್ಪ, ಶಿವಕುಮಾರ್, ರಂಗಪ್ಪ, ಹನುಮಂತಪ್ಪ, ಮೋಹನ್, ಮಂಜುನಾಥ್, ಬಿ.ದುಗಪ್ಪ, ದುರುಗೇಶ್, ಐರಣಿ ಚಂದ್ರು ಸೇರಿದಂತೆ ಇತರರು ಇದ್ದರು.

Leave a Comment