ಜಾಗೀರ್ ನಂದಿಹಾಳ ನಿರಂತರ ಬಸಿನೀರಿನ ಕಾಟ

* ಮನೆ ತುಂಬುವ ನೀರು – ಜನ ಜೀವನ ಅಸ್ತವ್ಯಸ್ತ
ರಾಯಚೂರು.ಅ.21- ಲಿಂಗಸೂಗೂರು ತಾಲೂಕಿನ ಜಾಗೀರ್ ನಂದಿಹಾಳ ಗ್ರಾಮದಲ್ಲಿ ಬಸಿನೀರು ಜನ ಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ.
ನೀರಾವರಿ ಕಾಲುವೆಯ ಕೆಳಮಟ್ಟದಲ್ಲಿರುವ ಜಾಗೀರ್ ನಂದಿಹಾಳ ಗ್ರಾಮದಲ್ಲಿ ಭಾರೀ ಮಳೆಯಾದರೇ, ಮನೆಗಳ ಮಧ್ಯೆದಲ್ಲಿಯೇ ನೀರು ಬಸಿದು, ಜನ ವಾಸ ಮಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣಗೊಳ್ಳುತ್ತದೆ. ನಿನ್ನೆ ರಾತ್ರಿಯಿಂದ ಇಂದು ಮುಂಜಾನೆವರೆಗೂ ಸುರಿಯುತ್ತಿರುವ ಮಳೆಗೆ ಗ್ರಾಮದಲ್ಲಿ ನೀರಿನ ಬಸಿ ತೀವ್ರಗೊಂಡು ಜನ ಮನೆಗಳಲ್ಲಿ ತುಂಬಿದ ನೀರು ಎತ್ತಿ ಹಾಕುವುದನ್ನೇ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಸುಮಾರು 200-300 ಮನೆಗಳಿವೆ. ಬಹುತೇಕ ಹಳೆ ಮನೆಗಳಾಗಿದ್ದರಿಂದ ಬಸಿ ನೀರಿನಿಂದ ಈಗಾಗಲೇ ಎರಡು ಮನೆಗಳು ಕುಸಿದು ಬಿದ್ದಿವೆ. ಇದೇ ರೀತಿ ನೀರು ಬಸಿಯುವುದು ಮುಂದುವರೆದರೇ, ಮತ್ತಷ್ಟು ಮನೆಗಳು ಬೀಳಬಹುದೆಂಬ ಆತಂಕ ಅಲ್ಲಿಯ ನಿವಾಸಿಗಳದ್ದಾಗಿದೆ. ಪ್ರತಿ ಸಲ ಬಸಿ ನೀರಿನಿಂದ ಗ್ರಾಮದ ಜನ ವಿಪರೀತ ತೊಂದರೆಗೆ ಗುರಿಯಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಈ ಗ್ರಾಮವನ್ನು ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳುವ ಮೂಲಕ ಜನರಿಗೆ ಬಸಿ ನೀರಿನ ಕಾಟ ತಪ್ಪಿಸಬಹುದು. ಆದರೆ, ಗ್ರಾಮ ಸ್ಥಳಾಂತರಕ್ಕೆ ಸ್ಥಳೀಯರು ಸಹಮತಿಸದ ಕಾರಣ ಈ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುತ್ತದೆ. ಭಾರೀ ಪ್ರಮಾಣದಲ್ಲಿ ಮಳೆ ಬಂದರೇ ಜಾಗೀರ್ ನಂದಿಹಾಳ ಜಲಾವೃತಗೊಳ್ಳುತ್ತದೆ. ಗ್ರಾಮದ ಅಕ್ಕಪಕ್ಕದಲ್ಲಿರುವ ಹಳ್ಳ ಕೊಳ್ಳಗಳಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹಗೊಂಡು ಈ ನೀರು ಮನೆಗಳಿಗೆ ಬಸಿದು, ಜನರು ವಾಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ತಂದೊಡ್ಡುತ್ತದೆ.
@12bc =  ಕೃಷ್ಣಾ ನದಿ ನೀರಿನ ಪ್ರವಾಹ ಹೆಚ್ಚಳ
ಕೃಷ್ಣಾ ನದಿಯ ಮೇಲ್ಭಾಗದಲ್ಲಿ ಭಾರೀ ಪ್ರಮಾಣದ ಮಳೆಯೇ ಕಾರಣ. ಕೃಷ್ಣಾ ನದಿಯಲ್ಲಿ ನೀರಿನ ಪ್ರವಾಹ ತೀವ್ರಗೊಳ್ಳುತ್ತದೆ. ಇಂದು ಸಂಜೆವರೆಗೂ 1.60 ಲಕ್ಷ ಕ್ಯೂಸೆಕ್ ನೀರು ಪ್ರವಹಿಸುವ ಅಂದಾಜು ಮಾಡಲಾಗಿದೆ. ಈಗಾಗಲೇ ನದಿಯಲ್ಲಿ 1.16 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿವೆ. ಮೇಲ್ಭಾಗದಲ್ಲಿ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಿದರೇ, ನೀರಿನ ಮಟ್ಟ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಗಳಿಗೆ ಈಗಾಗಲೇ ಎಚ್ಚರಿಕೆ ನೀಡಸಲಾಗಿದೆ.
ಗ್ರಾಮಗಳಲ್ಲಿ ಡಂಗೂರ ಸಾರಿ ಪ್ರವಾಹದ ಬಗ್ಗೆ ಎಚ್ಚರ ನೀಡಲಾಗುತ್ತದೆ. 3 ಲಕ್ಷದವರೆಗೂ ಕೃಷ್ಣಾ ನದಿ ಪಾತ್ರದ ಜನರಿಗೆ ಯಾವುದೇ ಆತಂಕ ಇಲ್ಲದಿರುವುದರಿಂದ ಅಧಿಕಾರಿಗಳು ನೀರಿನ ಪ್ರವಾಹದ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ಪಡೆದು ನದಿ ಪಾತ್ರದ ಜನರಿಗೆ ಎಚ್ಚರಿಸುತ್ತಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಮಳೆ ಸುರಿಯುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚುವ ಬಗ್ಗೆ ನಿರೀಕ್ಷೆ ಹೊಂದಲಾಗಿದೆ.
ಜಿಲ್ಲೆಯಲ್ಲಿ ಮುಂಜಾನೆಯಿಂದ ಸುರಿಯುತ್ತಿರುವ ಮಳೆಗೆ ತೆಗ್ಗು ಪ್ರದೇಶಗಳ ಜನ ಜೀವ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಪ್ರತಿ ಸಲ ಮಳೆ ಬಂದರೇ ನಗರ ಪ್ರದೇಶದಲ್ಲಿ ಕೊಳಚೆ ರಸ್ತೆಗಳಿಗೆ ಹರಿಯುವ ಸಮಸ್ಯೆ ಸಾಮಾನ್ಯವಾಗಿದ್ದರೂ, ಇದನ್ನು ಪರಿಹರಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ.

Leave a Comment