‘ಜಾಗತಿಕ ಮನ್ನಣೆ ಪಡೆದಿದ್ದ ವಾಜಪೇಯಿ ವ್ಯಕ್ತಿತ್ವ’

ಪುತ್ತೂರು: ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ತನ್ನ ಅಜಾತಶತ್ರು ವ್ಯಕ್ತಿತ್ವದಿಂದ ಜಾಗತಿಕ ಮನ್ನಣೆ ಮಡೆದಿದ್ದು, ಭಾರತದೊಂದಿಗಿನ ಅಂತಾರಾಷ್ಟ್ರೀಯ ಸಂಬಂಧವನ್ನು ವೃದ್ಧಿಸಲು ಶ್ರಮಿಸಿದ್ದರು. ಇವರ ಪಾರದರ್ಶಕ ಮತ್ತು ಪ್ರಾಮಾಣಿಕ ರಾಜಕಾರಣ ಎಲ್ಲರಿಗೂ ಆದರ್ಶವಾಗಿತ್ತು. ಅಟಲ್ಜೀ ವಿಶ್ವ ಕಂಡ ಮೇರು ವ್ಯಕ್ತಿತ್ವವಾಗಿದ್ದರು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶುಕ್ರವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತದ ಉದ್ದಗಲಕ್ಕೂ ಚತುಷ್ಪಥ ರಸ್ತೆಗಳ ನಿರ್ಮಾಣಕ್ಕೆ ಪ್ರಧಾನಿಯಾಗಿ ವಿಶೇಷ ಕೊಡುಗೆ ನೀಡಿದ್ದ ಅಟಲ್ಜೀಯವರು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಅಡುಗೆ ಅನಿಲ ಸಂಪರ್ಕ, ಗ್ರಾಮೀಣ ವಿದ್ಯುದ್ದೀಕರಣದಂತಹ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸಲ್ಲುತ್ತದೆ. ಬಿಜೆಪಿಯ ಸ್ಥಾಪಕ ಅಧ್ಯಕ್ಷರಾಗಿ ಅಟಲ್ಜೀ ಮಾಡಿದ ಕೆಲಸ ಇಂದು ಪಕ್ಷ ದೇಶವ್ಯಾಪಿ ಅಧಿಕಾರಕ್ಕೆ ಬರಲು ಕಾರಣವಾಯಿತು ಎಂದು ಮಠಂದೂರು ಹೇಳಿದರು.
ಸಭೆಯಲ್ಲಿ ಬಿಜೆಪಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಮಂಡಲ ಬಿಜೆಪಿ ಅಧ್ಯಕ್ಷ ಕೆ. ಜೀವಂಧರ್ ಜೈನ್, ಪ್ರಮುಖರಾದ ಡಿ. ಶಂಭು ಭಟ್, ಪುಯಿಲ ಕೇಶವ ಗೌಡ, ರಾಮದಾಸ್ ಹಾರಾಡಿ, ಗೋಪಾಲಕೃಷ್ಣ ಹೇರಳೆ, ಗೌರಿ ಬನ್ನೂರು, ವಿದ್ಯಾ ಆರ್ ಗೌರಿ, ಅಶೋಕ್ ಹಾರಾಡಿ, ಎಸ್. ಅಪ್ಪಯ್ಯ ಮಣಿಯಾಣಿ, ಭಾಮಿ ಜಗದೀಶ್ ಶೆಣೈ, ದಿನೇಶ್ ಜೈನ್, ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರಸಭಾ ಮಾಜಿ ಉಪಾಧ್ಯಕ್ಷ ಬಿ. ವಿಶ್ವನಾಥ ಗೌಡ, ನಾಗೇಂದ್ರ ಬಾಳಿಗಾ, ಗಣೇಶ್ ಬಾಳಿಗ, ಚಂದ್ರಶೇಖರ ರಾವ್ ಬಪ್ಪಳಿಗೆ, ಬಂಗಾರಡ್ಕ ವಿಶ್ವೇಶ್ವರ ಭಟ್, ಎಸ್. ಶಿವರಂಜನ್ ಮತ್ತಿತರರು ಉಪಸ್ಥಿತರಿದ್ದರು.

Leave a Comment