ಜವಳಿ ರಫ್ತು: ಭಾರತದ ಗಣನೀಯ ಪ್ರಗತಿ

ಬೆಂಗಳೂರು, ಮಾ.೧೫-ಜವಳಿ ಉದ್ಯಮ ರಫ್ತು ವಹಿವಾಟಿನ ಜಾಗತಿಕ ಸ್ಪರ್ಧಾತ್ಮಕತೆಯಲ್ಲಿ ಭಾರತವು ಗಣನೀಯವಾಗಿ ಹೆಚ್ಚುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಹೇಳಿದರು.

ನಗರದಲ್ಲಿಂದು ಖಾಸಗಿ ಹೋಟೆಲ್ ನಲ್ಲಿ ಕೇಂದ್ರ ಮತ್ತು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಹಯೋಗದೊಂದಿಗೆ ಬಾಂಗ್ಲಾದೇಶ ಸಿದ್ದ ಉಡುಪು (ಜವಳಿ) ತಯಾರಕರು ಮತ್ತು ರಫ್ತುದಾರರ ಸಂಘ ಆಯೋಜಿಸಿದ್ದ, ’ ಜವಳಿ ಮಾರಾಟ ಮತ್ತು ಖರೀದಿ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜವಳಿ ಕ್ಷೇತ್ರದ ತಯಾರಿಕೆಯು ಸಾಮರ್ಥ್ಯ ಮತ್ತು ವೆಚ್ಚ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಇತರ ದೇಶಗಳ ಜತೆ ಪೈಪೋಟಿ ನಡೆಸಿ ಒಕ್ಕೂಟದ ಮಾರುಕಟ್ಟೆಗಳಲ್ಲಿ ಹೆಚ್ಚು ಪಾಲು ಪಡೆಯಲು ಅನುಕೂಲವಾಗಲಿದೆ ಎಂದರು.

15a4

ಕೃಷಿ ಕ್ಷೇತ್ರ ನಂತರ, ಅತಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಕಲ್ಪಿಸಿರುವ ಈ ಉದ್ಯಮ ವಲಯಕ್ಕೆ ಅಗತ್ಯವಾಗಿ ಬೇಕಾಗಿದ್ದ ಬಂಡವಾಳ ಹೂಡಿಕೆಯ ನೆರವಿನಿಂದ ಇನ್ನಷ್ಟು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ರಾಜಧಾನಿ ಬೆಂಗಳೂರು ಕೇವಲ ಐಟಿ ಕ್ಷೇತ್ರ ಮಾತ್ರವಲ್ಲದೆ, ಆಟೊ ಮೊಬೈಲ್, ಜವಳಿ ಉದ್ಯಮ, ಸೇರಿದಂತೆ ಹತ್ತು ಹಲವು ಉದ್ಯಮಗಳಿಗೆ ಜೀವ ತುಂಬಿದೆ.ಇನ್ನೂ, ಬಾಂಗ್ಲಾದೇಶದಲ್ಲೂ ಭಾರತದ ಸಿದ್ಧ ಉಡುಪುಗಳಿಗೆ ಅಧಿಕ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.

ಬಾಂಗ್ಲಾದೇಶದ ಜವಳಿ ಉದ್ಯಮದ ಪ್ರತಿನಿಧಿ ಸಿದ್ದೀಕ್ ಮಾತನಾಡಿ, ಜಾಗತಿಕ ಜವಳಿ ಕ್ಷೇತ್ರದಲ್ಲಿ ಬಾಂಗ್ಲಾದೇಶದ್ದು ಕೋಟ್ಯಾಂತರ ರೂಪಾಯಿ ವಹಿವಾಟಿನ ಉದ್ಯಮ. ಜವಳಿ ಮತ್ತು ಉಡುಪು ರಫ್ತುದಾರ ರಾಷ್ಟ್ರಗಳ ಪೈಕಿ ಬಾಂಗ್ಲಾವೂ ಸ್ಥಾನ ಪಡೆದಿದೆ. ಹಾಗೆಯೇ ವಿಶ್ವದ ಜವಳಿ ಉದ್ಯಮದಲ್ಲಿ ಭಾರತದ ಪಾಲು ಶೇ. ೨. ನಮ್ಮ ದೇಶದ ರಫ್ತು ವಹಿವಾಟಿನಲ್ಲಿ ಇದರ ಪಾಲು ಶೇ. ೮ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಬಾಂಗ್ಲಾದೇಶ ಗಾರ್ಮೆಂಟ್ ತಯಾರಕರು ಮತ್ತು ರಫ್ತುದಾರರ ಸಂಘದ ಮುಹಮ್ಮದ್ ನಾಸೀರ್, ವ್ಯವಸ್ಥಾಪಕ ನಿರ್ದೇಶಕ
ರೇಣು ಮಹೀಂದ್ರ ಸೇರಿದಂತೆ ಪ್ರಮುಖರಿದ್ದರು.

Leave a Comment