ಜವಳಿ ಉದ್ಯಮಿ ನಿವಾಸ – ಬಟ್ಟೆಅಂಗಡಿಗಳಲ್ಲಿ ಐಟಿ ರೇಡ್

ದಾವಣಗೆರೆ, ಮಾ, 14 – ನಗರದಲ್ಲಿ ಐಟಿ ಅಧಿಕಾರಿಗಳ ದಾಳಿ ಮುಂದುವರೆದಿದೆ. ಇಂದು ನಗರದ ಖ್ಯಾತ ಜವಳಿ ಉದ್ಯಮಿ ಬಿ.ಸಿ.ಶಿವಕುಮಾರ್ ಮಾಲೀಕತ್ವದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಅಂಗಡಿಗಳಲ್ಲಿ ಹಾಗೂ ನಿವಾಸದಲ್ಲಿ ಬೆಂಗಳೂರು ಹಾಗೂ ದಾವಣಗೆರೆಯ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಕಳೆದ 15 ದಿನಗಳಿಂದಲೂ ದಾವಣಗೆರೆಯಲ್ಲಿ ವಿವಿಧ ಉದ್ಯಮಿಗಳ ನಿವಾಸದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮುಂಜಾನೆ ಉದ್ಯಮಿ ಬಿ.ಸಿ.ಶಿವಕುಮಾರ್ ಅವರ ಮಾಲೀಕತ್ವದ ನಗರದ ಹಳೇ ಭಾಗದಲ್ಲಿರುವ ಅಂಗಡಿ, ಎವಿಕೆ ಕಾಲೇಜು ರಸ್ತೆ ಹಾಗೂ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಅಂಗಡಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೂ ಮುಖ್ಯ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಏಕಕಾಲಕ್ಕೆ ಆರು ಕಡೆಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇಂದು ಸಂಜೆ ಹಾಗೂ ನಾಳೆಯವರೆಗೂ ಪರಿಶೀಲನಾ ಕಾರ್ಯ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

Leave a Comment