ಜಲ ಜಾಗೃತಿ ಸಮಾವೇಶ 8 ರಂದು

ಕಲಬುರಗಿ ಡಿ 3: ನಗರದ ಶರಣಬಸವ ಶತಮಾನೋತ್ಸವ ಭವನದಲ್ಲಿ ಡಿಸೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ಜಲ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ.

ರಾಜಸ್ಥಾನ ರಾಜ್ಯ ಆಳ್ವಾರದ ಖ್ಯಾತ ಜಲತಜ್ಞ ರಾಜೇಂದ್ರ ಸಿಂಗ್ ಮತ್ತು ಹೈದರಾಬಾದದ ತೆಲಂಗಾಣ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶರಾವ್ ಮತ್ತು ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ನಿರ್ದೇಶಕ ರಾಜೇಂದ್ರ ಪೋದ್ದಾರ ಅತಿಥಿಗಳಾಗಿ ಆಗಮಿಸುವರು.

ಶರಣಬಸವ ವಿಶ್ವವಿದ್ಯಾಲಯ,ಗುಲಬರ್ಗವಿವಿ ರಾಷ್ಟ್ರೀಯ ಸೇವಾಯೋಜನೆ ಕೋಶ, ಕಲಬುರಗಿ ಜಲಸಮಿತಿಗಳ ಒಕ್ಕೂಟ,ಕಲಬುರಗಿ ಥ್ರೀಜೆ ಕ್ಲಬ್ ಅಳಂದ ಮತ್ತು ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮಾಲ್ಯಮಾಪನ ಕುಲಸಚಿವ     ಡಾ.ಲಿಂಗರಾಜ ಶಾಸ್ತ್ರೀ,ಕಲಬುರಗಿ ಜಲಸಮಿತಿಗಳ ಒಕ್ಕೂಟದ ಸದಸ್ಯರಾದ ನೀಲಾ ಕೆ, ಡಾ.ಸಂಪತ್ ರಾವ್ ಮತ್ತು ಗುವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜಕ ಡಾ. ರಮೇಶ ಲಂಡನಕರ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಲ ಜಾಗೃತಿ ಸಮಾವೇಶವನ್ನು ಶರಣಬಸವ ವಿವಿ ಕುಲಪತಿ ಡಾ. ನಿರಂಜನ ನಿಷ್ಠಿ ಉದ್ಘಾಟಿಸುವರು.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಗೌರವ ಅತಿಥಿಗಳಾಗಿ ಆಗಮಿಸುವರು.ಶರಣಬಸವ ವಿವಿ ಕುಲಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಜಲ ಪ್ರತಿಜ್ಞೆ ಬೋಧಿಸಿ ಆಶೀರ್ವಚನ ನೀಡುವರು ಎಂದು ವಿವರಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಶೇ 6 ರಷ್ಟು ಮಾತ್ರ ಅರಣ್ಯ ಇದ್ದು , ಅದರಲ್ಲಿ ಶೇ 5 ರಷ್ಟು ಅರಣ್ಯ ಪ್ರದೇಶ ಚಿಂಚೋಳಿ ತಾಲೂಕಿಗೆ ಸೀಮಿತವಾಗಿದೆ.ಕಲಬುರಗಿ ನಗರದಲ್ಲಿ ಜಲಮೂಲಗಳು ಬತ್ತಿ ಹೋಗುತ್ತಿದ್ದು ಆತಂಕದ ವಿಷಯವಾಗಿದೆ.ಈ ಹಿನ್ನೆಲೆಯಲ್ಲಿ  ಜಲತಜ್ಞರೊಂದಿಗೆ ಚರ್ಚಿಸಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜಲ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದರು..

Leave a Comment