ಜಲಾಶಯದ ನೀರು ಹಳ್ಳಕ್ಕೆ

ಮುಂಡಗೋಡ ಜು,12;- ತಾಲೂಕಿನ ಚಿಗಳ್ಳಿ ಜಲಾಶಯದಿಂದ ಜಮೀನುಗಳಿಗೆ ನೀರು ಬೀಡುವ ಮುಖ್ಯದ್ವಾರದ (ಗೇಟ್) ನ್ನು ಬೇಸಿಗೆಯಲ್ಲಿಯೇ ತೆರೆಯಲಾಗಿತ್ತು, ಆದರೆ ಮಳೆಗಾಲದ ಸಮಯದಲ್ಲಿ ಜಲಾಶಯದ ನೀರು ಬಿಡುವ ಗೇಟ್ ಮುಚ್ಚದಿರುವುದರಿಂದ ಜಲಾಶಯದಲ್ಲಿನ ನೀರು ಹಳ್ಳದ ಪಾಲಾಗುತ್ತಿದೆ.
ಕಳೆ 15 ದಿನಳಿಂದ ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದು, ತಾಲೂಕಿನ ಸಣ್ಣ-ಪುಟ್ಟ ಕೆರೆ ಕಟ್ಟೆಗಳು ತುಂಬಿದ್ದು, ಜಲಾಶಯಗಳಿಗೂ ನೀರು ಶೇಖರಣೆಗೊಳ್ಳುತ್ತಿರುವ ವೇಳೆಯಲ್ಲಿ ಸಂಬಂಧ ಪಟ್ಟ  ಇಲಾಖೆಯ ಅಧಿಕಾರಿಗಳ ಬೇಜವಾಬ್ಧಾರಿತನದಿಂದ ಜಲಾಶಯದಲ್ಲಿನ ನೀರು ಹರಿದು ಹೋಗುತ್ತಿದೆ.
ಈ ಬಗ್ಗೆ ತಹಶೀಲ್ದಾರರಿಗೂ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕು ತಂದರು ಇದುವರೆಗೂ ಯಾವುದೇ ಕ್ರಮ ಜರುಗಿಸದೆ, ಕೈಚಲ್ಲಿ ಕುಳಿತು ಜಾಣಕುರುಡರಂತೆ ವರ್ತಿಸುತ್ತಿರುವುದು ಕಂಡು ಬಂದಿದ್ದು, ಈ  ಬಗ್ಗೆ ಆ ಭಾಗದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment