ಜರ್ಕ್ ಯಾರ ಜೀವನವನ್ನು ಬಿಟ್ಟಿಲ್ಲ…

ಸಮಾಜಕ್ಕಾಗಿ ಉತ್ತಮ ಸಂದೇಶವಿಟ್ಟು ಚಿತ್ರ ಮಾಡುವ ವಿಚಾರದಲ್ಲಿ ನಿರ್ದೆಶಕ ಜಯತೀರ್ಥ ತಮಗೆ ಸ್ಫೂರ್ತಿ ಎನ್ನುವ  ಮಹಾಂತೇಶ ಮದಕರಿ ನಿರ್ದೇಶಿಸುತ್ತಿರುವ ಜರ್ಕ್ ಚಿತ್ರವನ್ನು ಅವರ ಸ್ನೇಹಿತರ ತಂಡ ನಿರ್ಮಿಸುತ್ತಿದೆ. ಚಿತ್ರರಂಗದಲ್ಲಿ ವಿಭಿನ್ನವಾಗಿ ಸಾಧಿಸಿ ತೋರಿಸಬೇಕೇನ್ನುವ ಹಲವಾರು ವರ್ಷಗಳ ಅವರ ಕನಸಿಗೆ ಜರ್ಕ್ ಮುನ್ನುಡಿಯಾಗುತ್ತಿದೆಯಂತೆ.

ಮದಕರಿ ಮೂಲತಃ ರಂಗಭೂಮಿಯವರಾಗಿದ್ದು ೨೦೦೩ರಿಂದ ಮೂರು ವರ್ಷ ಚಿತ್ರರಂಗದಲ್ಲಿ ದುಡ್ಡಿಲ್ಲದೆ ಕೆಲಸ ಮಾಡಿದ್ದರಂತೆ. ಆದರೆ ಆ ರೀತಿಯಲ್ಲಿ ಮುಂದುವರಿಯಲು ಆಗದೆ ಜೀವನಕ್ಕಾಗಿ ಸಾರಿಗೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡು ದುಡಿಮದಿದ್ದಾರೆ. ನಂತರ ಸಿನೆಮಾ ಗೀಳು ಬಿಟ್ಟಿಲ್ಲ ಈ ಕಾರಣದಿಂದಾಗಿಯೆ ಈಗ ಬೆಂಗಳೂರಿನ ಮೆಟ್ರೋದಲ್ಲಿ ಕೆಲಸಕ್ಕೆ ಸೇರಿಕೊಂಡು ಸ್ನೇಹಿತರ ಜೊತೆಗೆ ಸಿನೆಮಾಕ್ಕೆ ಕೈಹಾಕಿದ್ದಾರೆ.

ಸುಮಾರು ಇಪ್ಪತ್ತು ಕನ್ನಡದ ಶೀರ್ಷಿಕೆಗಳನ್ನು ಕೊಟ್ಟಿದ್ದರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಜರ್ಕ್‌ಗೆ ಅನುಮತಿ ಸಿಕ್ಕಿರುವ ಕಾರಣಕ್ಕಾಗಿ ಇಂಗ್ಲಿಷ್ ಹೆಸರಿದೆ ಎಂದು ಹೇಳಿಕೊಂಡರು. ಪ್ರತಿಯೊಬ್ಬರ ಜೀವನದ ಪಯಣದಲ್ಲಿ ಜರ್ಕ್ ಉಂಟಾಗುತ್ತದೆ ರಸ್ತೆ ಉಬ್ಬುಗಳೆನ್ನುವ ಹುಲಿ, ಹೆಬ್ಬುಲಿಗಳು ಎದುರಾದಾಗ ಹೇಗೆ ಪಾರಾಗಬೇಕೆನ್ನುವುದನ್ನೇ ಚಿತ್ರವಾಗಿಸುದಾಗಿ ವಿಭಿನ್ನ ಕಲ್ಪನೆಯನ್ನು ಮಾತಿನಲ್ಲಿಯೂ ಕಟ್ಟಿಕೊಟ್ಟರು.

ಕೆಎಎಸ್ ಮಾಡಲು ಬೆಂಗಳೂರಿಗೆ ಬರುವ ಹುಡುಗ ಪಾತ್ರಧಾಮರಿಯಾಗಿರುವ ಕೃಷ್ಣರಾಜ್‌ಗೆ ಇದು ಮೊದಲ ಚಿತ್ರ. ಸಚಿನ್ ಈ ಮೊದಲು ಎರಡು ಚಿತ್ರಗಳಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಮನೆ ಮಾಲೀಕನ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪದ್ಮಾಶ್ರೀ ಸಳವಾಗಿರುವ ಹುಡುಗಿಯಾಗಿ ಸಮಾಜಕ್ಕೆ ಎಚ್ಚರಿಗೆ ತಿಳಿಸುತ್ತಾ ಹೋಗುತ್ತಾರಂತೆ. ಕೊಡಗಿನವರು ಮತ್ತು ಭರತನಾಟ್ಯ ಕಲಾವಿದೆಯಾಗಿರುವ ಆಶಾ ಬಂಡಾರಿ ಈ ಮೊದಲು ಪಡವಾರಳ್ಳಿ ಪಾಂಡವರು ಚಿತ್ರದಲ್ಲಿ ನಟಿಸಿದ್ದು, ಆಡಿಷನ್ ಮೂಲಕ ಆಯ್ಕೆಯಾಗಿ ಜರ್ಕ್‌ನಲ್ಲಿ ನಟಿಸುತ್ತಿರುವುದಕ್ಕೆ ಖುಷಿ
ಇದೆಯಂತೆ. ಈ ನಾಲ್ಕು ಪಾತ್ರಗಳನ್ನೇ ಪ್ರಮುಖವಾಗಿಟ್ಟುಕೊಂಡು ಜರ್ಕ್ ಹೆಣೆಯಲಾಗುತ್ತಿದೆ.

Leave a Comment