ಜಯೇಶ್‌ಭಾಯ್ ಜೋರ್‌ದಾರ್’ ಪಾತ್ರದಲ್ಲಿ ರಣವೀರ್!

ಬಾಲಿವುಡ್‌ನಲ್ಲಿ ನಟ ರಣವೀರ್ ಸಿಂಗ್ ವಿಭಿನ್ನ ಪಾತ್ರಗಳಿಂದಲೇ ಹೆಸರುವಾಸಿ, ಅವರ ನಟನಾ ಶೈಲಿ ಹಾಗೂ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇತ್ತೀಚೆಗೆ ಕನ್ನಡತಿ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ವರಸಿದ ರಣವೀರ್ ಖ್ಯಾತಿ ಇನ್ನಷ್ಟು ಹೊಸ ಟ್ರೆಂಡ್ ಹುಟ್ಟು ಹಾಕಿದ್ದು ಸುಳ್ಳಲ್ಲ. ಇದೀಗ ರಣವೀರ್ ಹೊಸ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜುಗೊಂಡಿದ್ದಾರೆ. ಗುಜರಾತಿ ವ್ಯಕ್ತಿಯಾಗಿ ಪಾತ್ರ ವಹಿಸಲು ರಣವೀರ್ ತಮ್ಮನ್ನು ತಾವು ಪರಿವರ್ತಿಸಿಕೊಳ್ಳಲಿದ್ದಾರೆ. ಮೊದಲ ಚಲನಚಿತ್ರವನ್ನು ನಿರ್ದೇಶಿಸಲಿರುವ ಲೇಖಕ ಮತ್ತು ನಿರ್ದೇಶಕರಾದ ದಿವ್ಯಾಂಗ್ ಠಕ್ಕರ್ ಅವರು ‘ಪವಾಡದಂತಹ ಚಿತ್ರಕಥೆ’ಯನ್ನು ಈ ಚಿತ್ರಕ್ಕಾಗಿ ರಚಿಸಿದ್ದಾರೆ.

ಯಶ್‌ರಾಜ್ ಫಿಲ್ಸ್ಂ ಬ್ಯಾನರ್ ಅಡಿ ತಯಾರಾಗುವ ಚಿತ್ರಕ್ಕೆ ರಣವೀರ್ ಕೂಡ ಕೈಜೋಡಿಸಿರುವುದು ವಿಶೇಷ. ಗುಜರಾತ್ ಹಿನ್ನಲೆ ಹೊಂದಿರುವ ಮನರಂಜನಾತ್ಮಕ ಹಾಸ್ಯಮಯ ಚಿತ್ರದಲ್ಲಿ ರಣವೀರ್ ಸಿಂಗ್ ಅವರನ್ನು ಈ ಮೊದಲ ಬಾರಿ ನಿರ್ದೇಶಕರಾಗಿರುವ ದಿವ್ಯಾಂಗ್ ನಿರ್ದೇಶಿಸಲಿದ್ದಾರೆ. ಈ ಚಲನಚಿತ್ರವನ್ನು ಯಶ್‌ರಾಜ್ ಫಿಲಮ್ಸ್‌ನಲ್ಲಿಯೇ ಬೆಳೆದ ನಿರ್ಮಾಪಕ ಮನೀಶ್ ಶರ್ಮಾ ನಿರ್ಮಿಸುತ್ತಿದ್ದು ಅವರೇ ದಿವ್ಯಾಂಗ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಪ್ರಸಕ್ತ ವರ್ಷದ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ.

ಜಯೇಶ್‌ಭಾಯ್ ದೊಡ್ಡ ಹೃದಯವಂತ ಚಲನಚಿತ್ರವಾಗಿದೆ. ತನ್ನ ಚಿಂತನೆ ಮತ್ತು ಜನಾಕರ್ಷಣೆಯಲ್ಲಿ, ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ಮತ್ತು ವಿಸ್ತಾರವಾದ ಶ್ರೇಣಿಯ ಸಿನಿಮಾಪ್ರಿಯರನ್ನು ಆಕರ್ಷಿಸುವಂತಹ ಚಿತ್ರ ಇದಾಗಲಿದೆ. ನನಗಾಗಿ ಯಶ್‌ರಾಜ್ ಫಿಲಮ್ಸ್ ಹುಡುಕಿ ತೆಗೆದ ಪವಾಡದಂತಹ ಚಿತ್ರಕಥೆ ಇದಾಗಿದೆ. ಈ ಚಿತ್ರಕಥೆ ರಚನೆಯಲ್ಲಿನ ಬುದ್ಧಿವಂತ ಪ್ರತಿಭೆಯೇ ಈ ಚಲನಚಿತ್ರಕ್ಕೆ ತಕ್ಷಣ ಒಪ್ಪಿಗೆ ನೀಡಲು ನನ್ನನ್ನು ಒತ್ತಾಯಿಸಿತ್ತು. ಹಾಸ್ಯಮಯ ಮತ್ತು ಮನಕಲುಕುವ ಜಯೇಶ್‌ಭಾಯ್ ಇದುವರೆಗೆ ನಾನು ನೋಡಿರುವ ಅತ್ಯಂತ ಉತ್ತಮ ಮತ್ತು ಉನ್ನತಮಟ್ಟದ ಚಿತ್ರಕಥೆಯಾಗಿದೆ.

ರಣವೀರ್ ಸಿಂಗ್
ಬಾಲಿವುಡ್ ನಟ

ರಣವೀರ್ ಸೂಪರ್‌ಸ್ಟಾರ್ ಆಗಿ ಛಾಪು ಹೊತ್ತಿದ್ದಾರೆ. ಅವರು ಸತತವಾಗಿ ದೇಶದಲ್ಲಿ ಅಗ್ರ ಚಲನಚಿತ್ರ ತಯಾರಕರೊಂದಿಗೆ ಸಹಭಾಗಿಯಾಗುತ್ತಿದ್ದಾರೆ. ಸಂಜಯ್‌ಲೀಲಾ ಬನ್ಸಾಲಿಯಿಂದ ಹಿಡಿದು ರೋಹಿತ್ ಶೆಟ್ಟಿವರೆಗೆ, ಜೋಯಾ ಅಕ್ತರ್ ಮತ್ತು ಕಬೀರ್‌ಖಾನ್‌ನಿಂದ ಹಿಡಿದು ಕರಣ್ ಜೋಹರ್ ಅವರ ಹೊರಗೆ ಚಲನಚಿತ್ರೋದ್ಯಮದಲ್ಲಿ ಅತ್ಯಂತ ದೊಡ್ಡ ಚಿತ್ರ ತಯಾರಕರಿಗೆ ರಣವೀರ್ ನೆಚ್ಚಿನವರಾಗಿರುತ್ತಾರೆ.
ಚಲನಚಿತ್ರ ಯೋಜನೆಗಳನ್ನು ಆರಿಸಿಕೊಳ್ಳುವಲ್ಲಿ ಅವರು ಅಸಾಧಾರಣ ಚಿತ್ರಕಥೆ ಕುರಿತ ಸಂವೇದನೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿಯಂತಹ ಖಳನಾಯಕನ ಪಾತ್ರವನ್ನು ಪದ್ಮಾವತ್‌ನಂತಹ ಚಲನಚಿತ್ರದಲ್ಲಿ ನಿರ್ವಹಿಸಿ ಜಗತ್ತಿನಲ್ಲಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದರು. ನಂತರ ವಿಶೇಷ ವಸ್ತುವಿಷಯ ಹೊಂದಿದ್ದ ಗಲ್ಲಿ ಬಾಯ್ ಕೂಡ ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿತ್ತು.

ಈ ಕುರಿತು ಮಾತನಾಡಿದ ರಣವೀರ್ ಸಿಂಗ್ ಅವರು, ನಮ್ಮ ದೇಶದ ಅತ್ಯುತ್ತಮ ಚಲನಚಿತ್ರ ತಯಾರಕರೊಂದಿಗೆ ಸಹಭಾಗಿತ್ವ ಹೊಂದುವಲ್ಲಿ ನಾನು ಅಪಾರ ಅದೃಷ್ಟಶಾಲಿಯಾಗಿದ್ದೇನೆ. ಅವರ ಸಿನಿಮಾ ದೃಷ್ಟಿಕೋನವನ್ನು ಬಿಂಬಿಸಲು ನನ್ನನ್ನು ಆರಿಸಿದ್ದು ಮತ್ತು ನನ್ನ ಕಲೆಯಲ್ಲಿ ಅವರು ನಂಬಿಕೆ ಇಟ್ಟಿದ್ದಕ್ಕೆ ಅವರಿಗೆ ವಿನಮ್ರತೆಯೊಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಬೃಹತ್ ಸಿನಿಮಾ ಶಕ್ತಿಗಳು ತಮ್ಮ ನಂಬಿಕೆಯಲ್ಲಿ ನನ್ನಲ್ಲಿ ಇಟ್ಟಿದ್ದರಿಂದಲೇ ನಾನು ಇಷ್ಟೊಂದು ಸಾಧಿಸಲು ಸಾಧ್ಯವಾಗಿದೆ. ದಿವ್ಯಾಂಗ್‌ರಂತಹ ಅತ್ಯಂತ ಬುದ್ಧಿವಂತ, ಲೇಖಕ ಮತ್ತು ನಿರ್ದೇಶಕರ ದೃಷ್ಟಿಕೋನವನ್ನು ಹೃತ್ಪೂರ್ವಕವಾಗಿ ಬೆಂಬಲಿಸಲು ಇದರಿಂದಲೇ ಸಾಧ್ಯವಾಗಿದೆ. ಭಾರತದ ೧೯೮೩ರ ವಿಶ್ವಕಪ್ ಕ್ರಿಕೆಟ್ ಗೆಲುವನ್ನು ಕುರಿತ ೮೩ ಚಲನಚಿತ್ರದ ಬಳಿಕ ಜಯೇಶ್‌ಭಾಯ್ ಜೋರ್‌ದಾರ್ ನನ್ನ ಮುಂದಿನ ಬಿಡುಗಡೆಯ ಚಿತ್ರವಾಗಲಿದೆ” ಎಂದರು.

ಮನೀಶ್ ಅವರು ಮಾತನಾಡಿ, “ನಿರ್ಮಾಪಕರಿಗೆ ಮತ್ತು ಚಲನಚಿತ್ರ ತಯಾರಕರಿಗೆ ಚಿತ್ರಕಥೆ ಅತ್ಯಂತ ಮುಖ್ಯವಾಗಿರುತ್ತದೆ. ದಿವ್ಯಾಂಗ್ ಅವರ ಚಿತ್ರಕಥೆ ಸಮತೋಲನದ ಅದ್ಭುತ ನಿದರ್ಶನವಾಗಿದೆ. ಅವರೇ ಈ ಯೋಜನೆ ನೇತೃತ್ವ ವಹಿಸುವುದರ ಬಗ್ಗೆ ನಾವೆಲ್ಲ ಉತ್ಸಾಹಿತರಾಗಿದ್ದೇವೆ. ರಣವೀರ್ ಅವರು ಈ ಚಿತ್ರದಲ್ಲಿ ನಟಿಸುತ್ತಿರುವುದರೊಂದಿಗೆ ಇದು ನಿಜಕ್ಕೂ ರೋಮಾಂಚಕ ಯೋಜನೆಯಾಗಿದೆ. ಒಂದು ದಶಕದ ಹಿಂದೆ ನಾವು ಒಟ್ಟಾಗಿ ನಮ್ಮ ಪ್ರಯಾಣ ಆರಂಭಿಸಿದ್ದೆವು. ಹೊಸಬರಾಗಿ ನಮ್ಮ ಮೇಲೆ ಯಶ್‌ರಾಜ್ ಫಿಲ್ಮ್ಸ್ ಅಂದು ನಂಬಿಕೆ ಇಟ್ಟಿತ್ತು. ಇಂದು ಕೂಡ ಆ ನಂಬಿಕೆ ಮುಂದುವರೆಯಲಿದೆ ಎಂದರು.

Leave a Comment