ಜಯಾಬಚ್ಚನ್ ಆಸ್ತಿ ರೂ. 1000 ಕೋಟಿ!

ನವದೆಹಲಿ, ಮಾ. ೧೩- ಸಮಾಜವಾದಿ ಪಕ್ಷದ ನಾಯಕ ಹಾಗೂ ಹಿಂದಿ ಚಿತ್ರರಂಗದ ಹಿರಿಯ ನಟಿ ಜಯಾಬಚ್ಚನ್ ತಮ್ಮ ಬಳಿ 1 ಸಾವಿರ ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಅತ್ಯಂತ ಶ್ರೀಮಂತ ಸಂಸದೆ ಎನಿಸಿಕೊಂಡಿದ್ದಾರೆ.
2014ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಬಿಜೆಪಿಯ ರವೀಂದ್ರ ಕಿಶೋರ್ ಸಿನ್ಹಾ 800 ಕೋಟಿ ರೂ.ಆಸ್ತಿ ಹೊಂದಿರುವುದಾಗಿ ರಾಜ್ಯಸಭಾ ಚುನಾವಣೆ ಸಮಾಜದ ಪಕ್ಷದಿಂದ ಜಯಾಬಚ್ಚನ್ ನಾಮಪತ್ರ ಸಲ್ಲಿಸುವ ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. 2012ರಲ್ಲಿ 493 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮ ಹಾಗೂ ಪತಿ ಅಮಿತಾಬ್‌ಗೆ ಸೇರಿದ 460 ಕೋಟಿ ರೂ. ಚಿರಾಸ್ತಿಗಳಿವೆ. ಇದು 2012ರಲ್ಲಿ ಹೊಂದಿದ್ದ 152 ಕೋಟಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಅದೇ ರೀತಿ 343 ಕೋಟಿ ರೂ. ಆಸ್ತಿ ಮೌಲ್ಯ 540 ಕೋಟಿ ರೂ.ಗೆ ಏರಿಕೆಯಾಗಿದೆ.
ಅಮಿತಾಬ್ ದಂಪತಿ 62 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ವಿವರ ನೀಡಲಾಗಿದ್ದು, ಅಮಿತಾಬ್‌ಗೆ ಸೇರಿದ 36 ಕೋಟಿ ರೂ. ಚಿನ್ನಾಭರಣಗಳು ಸೇರಿವೆ.
ಬಚ್ಚನ್ ಬಳಿ 12 ವಾಹನಗಳಿವೆ. ಈ ವಾಹನಗಳು 13 ಕೋಟಿ ರೂ.ಮೌಲ್ಯದ್ದಾಗಿದ್ದು, ರೊಯ್ಸ್ ರಾಯ್ಸ್, 3 ಮರ್ಸಿಡಿಸ್, ಪೋರ್ಷ್, ರೇಂಜ್ ರೋವರ್, ಟಾಟಾ ನ್ಯಾನೊ ಮತ್ತು ಒಂದು ಟ್ರ್ಯಾಕ್ಟರ್ ಸೇರಿದೆ.
ಅಮಿತಾಬ್ ಮತ್ತು ಜಯಾ 3.4 ಕೋಟಿ ರೂ. ಮೌಲ್ಯದ ದುಬಾರಿ ವಾಚ್‌ಗಳನ್ನು ಹೊಂದಿದ್ದು. ಇದರಲ್ಲಿ 51 ಲಕ್ಷ ರೂ. ಬೆಲೆಯ ವಾಚ್‌ಗಳು ಜಯಾರಿಗೆ ಸೇರಿದೆ. 9 ಲಕ್ಷ ರೂ. ಬೆಲೆಯ ಪೆನ್ ಕೂಡ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಫ್ರಾನ್ಸ್‌ನ ಬ್ರಿಗ್ನೋಗನ್ ಪ್ಲೇಜ್‌ನಲ್ಲಿ 3.175 ಚದರಡಿ ಜಾಗವನ್ನು ಹೊಂದಿದ್ದಾರೆ. ಇದರ ಜೊತೆ ನೊಯಿಡಾ. ಭೋಪಾಲ್, ಪುಣೆ, ಅಹ್ಮದಾಬಾದ್ ಮತ್ತು ಗಾಂಧಿನಗರಗಳಲ್ಲಿ ಆಸ್ತಿಪಾಸ್ತಿಗಳನ್ನು ಹೊಂದಿದ್ದಾರೆ.
ಲಖ್ನೌದ ಕಾಕೋರಿ ಪ್ರದೇಶದಲ್ಲಿ ಜಯಾ 2.2 ಕೋಟಿ ರೂ. ಮೌಲ್ಯದ 1.22 ಹೆಕ್ಟೇರ್ ಜಮೀನನ್ನು ಹೊಂದಿದ್ದಾರೆ. ಹಾಗೆಯೇ ಬಾರಾಬಂಕಿ ಜಿಲ್ಲೆಯ ದೌಲತಾಪುರದಲ್ಲಿ 5.7 ಕೋಟಿ ರೂ. ಮೌಲ್ಯದ 3 ಎಕರೆ ಪ್ಲಾಟ್ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ.

Leave a Comment