ಜಯಪ್ರಕಾಶ ಹುಟ್ಟು ಹಬ್ಬ : ತಟ್ಟೆ ವಿತರಣೆ

ರಾಯಚೂರು.ಜ.22- ದಿ.ಕೆ.ಜಯಪ್ರಕಾಶ ನಾಯಕ ರವರ 40 ನೇ ಹುಟ್ಟು ಹಬ್ಬದ ಅಂಗವಾಗಿ ಇಡಪನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಸ್ತೂರಿ ಬಾ ಬಾಲಕಿಯರ ಶಾಲೆ, ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಸ್ಸಿ, ಎಸ್ಟಿ ಬಡಾವಣೆ ಶಾಲೆಗಳಲ್ಲಿ
ಜೆ.ಪಿ.ಫೌಂಡೇಶನ್ ಅಧ್ಯಕ್ಷರಾದ ಕೆ.ಚಂದ್ರಶೇಖರ ನಾಯಕ ರವರಿಂದ ಎಲ್ಲಾ ಮಕ್ಕಳಿಗೆ ಊಟದ ತಟ್ಟೆಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೇಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷರಾದ ಕೆ.ದೊಡ್ಡ ನರಸಿಂಹ ನಾಯಕ, ತಿಮ್ಮಪ್ಪ, ಗೂರಯ್ಯ, ಶಂಕರ, ಹೇಮರೆಡ್ಡಿ, ಸುಬುಧ, ನರಸಿಂಹ, ಯಲ್ಲಪ್ಪ, ನಾಗಪ್ಪ, ಮೂಕರಯ್ಯ, ಅಂಜಿನೇಯ, ಸುರೇಶ್, ಶಶಿಧರ, ಅಮರೇಶ, ಸೂರಿ, ರಾಮಯ್ಯ, ಮಾಲದೊಡ್ಡಿ ರಾಮಾಂಜನೆಯ, ಜೆ.ರಾಮಪ್ಪ ನಾಯಕ ಮಲಿಯಬಾದ, ರಾಜು ನಾಯಕ, ನರಸಿಂಹ ನಾಯಕ ಗುಂಜಳ್ಳಿ, ಭೀಮಣ್ಣ, ನರಸಿಂಹ, ಮಹೆಬೂಬ್, ಗುರು, ಲಕ್ಷ್ಮಿಕಾಂತ ನಾಯಕ, ಬಂದೇನವಾಜ್ ಹಾಗೂ ವಿಶ್ವನಾಥ ಪಾಟೀಲ್ ಅಲ್ಕೂರುರವರು ಭಾಗವಹಿಸಿದ್ದರು.

Leave a Comment