ಜಮ್ಮು , ಕಾಶ್ಮೀರ ವಿಭಜನೆ ಪ್ರಗತಿಗೆ ನಾಂದಿ: ಪ್ರಧಾನಿ

ನವದೆಹಲಿ ಆ. 12 – ಜಮ್ಮುಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆದು, ಎರಡು ಕೇಂದ್ರಾಡಳಿತ  ಪ್ರದೇಶವಾಗಿ ವಿಭಜನೆ ಮಾಡುವ ಕೇಂದ್ರದ ಕ್ರಮದಿಂದ  ರಾಜ್ಯದ ಜನತೆಗೆ ಹೆಚ್ಚಿನ ಅನುಕೂಲವಾಗಿ, ಪ್ರಗತಿಗೆ ನಾಂದಿ ಹಾಡಲಿದೆ ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರದ ಈ ಕ್ರಮದಿಂದ  ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಜನತೆಗೆ ಒಳಿತಾಗಲಿದೆ ಎಂದು ಅವರು ಹೇಳಿದ್ದಾರೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ರಾಜ್ಯದಲ್ಲಿ ಹೂಡಿಕೆ ವಲಯ  ಸುಧಾರಿಸಲಿದ್ದು  ಹೆಚ್ಚು  ಪ್ರಮಾಣದಲ್ಲಿ ಉದ್ಯೋಗ ದೊರಕಲಿದೆ ಮೇಲಾಗಿ ರಾಜ್ಯಕ್ಕೆ ಹೆಚ್ಚಿನ ಬಂಡವಾಳವೂ ಹರಿದು  ಬರಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಸಮವಿಧಾನದ 370 ವಿಧಿ ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರವು ರಾಜ್ಯದಲ್ಲಿ ಸ್ಥಿರತೆ  ಮಾರುಕಟ್ಟೆ ಪ್ರವೇಶದ ಅವಕಾಶ ಮುಕ್ತವಾಗಲಿದೆ ಎಂದು ಅವರು ಪ್ರಮುಖ ದಿನಪತ್ರಿಕೆಯೊಂದಕ್ಕೆ  ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ .

ಇದು ಹೂಡಿಕೆಗೆ  ಹೆಚ್ಚಿನ ಸಹಾಯ ಮಾಡಲಿದೆ  ವಿಶೇಷವಾಗಿ ಪ್ರವಾಸೋದ್ಯಮ, ಕೃಷಿ  , ಐಟಿ, ಆರೋಗ್ಯ ವಲಯದಲ್ಲಿ ಹೆಚ್ಚಿನ  ಬಂಡವಾಳವೂ ಹರಿಯಲಿದೆ  ಉದ್ಯಮ ಸ್ನೇಹಿ ವಾತವರಣಕ್ಕೂ ದಾರಿಯಾಗಲಿದೆ. ಜೊತೆಗೆ ಈ ಪ್ರದೇಶದ ಜನರ ಕೌಶಲ್ಯ, ಕಠಿಣ ಪರಿಶ್ರಮ ಮತ್ತು ಉತ್ಪನ್ನಗಳಿಗೆ ಉತ್ತಮ ಪ್ರತಿಫಲ, ಮಾರುಕಟ್ಟೆ ದೊರಕಲಿದೆ.

ಇಂದಿನ  ಜಗತ್ತಿನಲ್ಲಿ, ಆರ್ಥಿಕ ಬೆಳವಣಿಗೆ ಬಿಗುವಿನ  ವಾತಾವರಣದಲ್ಲಿ ಆಗಲು ಸಾಧ್ಯವಿಲ್ಲ. ಮುಕ್ತ ಮನಸ್ಸುಗಳು ಮತ್ತು ಮುಕ್ತ ಮಾರುಕಟ್ಟೆಗಳು ಈ ಪ್ರದೇಶದ ಯುವಕರು  ಪ್ರಗತಿಯ ಹಾದಿಯಲ್ಲಿ ಸಾಗುವಂತೆ ನೋಡಿಕೊಳ್ಳಲಿದೆ   ಹೊಸ ಕ್ರಮ ಹೂಡಿಕೆ, ನಾವೀನ್ಯತೆ ಮತ್ತು ರಾಜ್ಯದ ಆದಾಯ ಹೆಚ್ಚಳಕ್ಕೆ ಉತ್ತೇಜನ ನೀಡಲಿದೆ ಎಂದು  ಹೇಳಿದರು.

ಐಐಟಿ, ಐಐಎಂ, ಎಐಐಎಂಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದರಿಂದ ರಾಜ್ಯದ ಯುವಕರಿಗೆ  ಉತ್ತಮ ಶೈಕ್ಷಣಿಕ ಅವಕಾಶ ದೊರಕುವುದರ ಜೊತೆಗೆ  ಉತ್ತಮ ಉದ್ಯೋಗದ   ವಾತಾವರಣ ಸೃಷ್ಟಿಯಾಗಲಿದೆ  ಎಂದು ಅವರು ಹೇಳಿದರು.

ಕೇಂದ್ರದ  ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಹಲವಾರು ರಸ್ತೆ, ವಿಮಾನ ನಿಲ್ದಾಣ ಮತ್ತು ರೈಲು ಮಾರ್ಗ ಸೇರಿದಂತೆ ಮೂಲ ಸೌಲಭ್ಯ ಯೋಜನೆಗಳನ್ನು ಚುರುಕುಗೊಳಿಸಿದೆ, ಇದು ಅಂತಿಮವಾಗಿ ರಾಜ್ಯದಲ್ಲಿ ವ್ಯಾಪಾರ ವಹಿವಾಟಿಗೆ, ಪ್ರಗತಿಗೆ  ನಾಂದಿ ಹಾಡಲಿದೆ.  ಉತ್ತಮ ಸಂಪರ್ಕಗಳು ಮತ್ತು ಉತ್ತಮ ಹೂಡಿಕೆಯಿಂದ ಈ ಪ್ರದೇಶದ ಉತ್ಪನ್ನಗಳು ದೇಶ ಮತ್ತು ಪ್ರಪಂಚದಾದ್ಯಂತ ತಲುಪಲು ಸಹಾಯ ಮಾಡುತ್ತದೆ ಎಂದರು.

ವಿಶೇಷ ಸ್ಥಾನಮಾನದ 370 ನೇ  ವಿಧಿಯನ್ನು ವಾಪಸ್  ಪಡೆದಿದ್ದು ಇದಕ್ಕೆ ಸಂಸತ್ತಿನ ಅನುಮೋದನೆಯೂ  ದೊರಕಿದೆ.  ರಾಜ್ಯದಲ್ಲಿ ಎಂಟು ದಿನಗಳ ಕರ್ಫ್ಯೂ ನಂತರ, ಕಣಿವೆಯಲ್ಲಿ  ಶಾಂತಿ ಮರಳುತ್ತಿದೆ  ಎಂದು ಸೇನೆ ಹೇಳಿದೆ. ಇದೇ  ಸಮಯದಲ್ಲಿ ಪ್ರಧಾನಿ ಮೋದಿ ಅವರು ರಾಜ್ಯದ ಜನರಿಗೆ ಈದ್  ಶುಭಾಷಯ ಕೋರಿದ್ದಾರೆ .

Leave a Comment