ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿ ಮಾಲಿಕ್ ಪ್ರಮಾಣ

ಶ್ರೀನಗರ, ಆ. ೨೩- ಜಮ್ಮು- ಕಾಶ್ಮೀರದ ರಾಜ್ಯಪಾಲರಾಗಿ ಸತ್ಯಪಾಲ್ ಮಾಲಿಕ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಜಮ್ಮು- ಕಾಶ್ಮೀರದ 13ನೇ ರಾಜ್ಯಪಾಲರಾಗಿ ನೇಮಕವಾಗಿರುವ ಅವರಿಗೆ ರಾಜಭವನದಲ್ಲಿ ಇಂದು ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಜಮ್ಮು- ಕಾಶ್ಮೀರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೀತಾ ನಿಕಲ್ ಪ್ರಮಾಣ ವಚನ ಬೋಧಿಸಿದರು.
ಈ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಮೆಹಬೂಬ್ ಮುಫ್ತಿ ಸೇರಿದಂತೆ 40 ಮಂದಿ ಗಣ್ಯರು ಭಾಗವಹಿಸಿದ್ದರು.
15 ವರ್ಷಗಳ ಕಾಲ ಜಮ್ಮು- ಕಾಶ್ಮೀರರ ರಾಜ್ಯಪಾಲರಾಗಿ ಅತಿದೀರ್ಘ ಆಡಳಿತ ನಡೆಸಿದ್ದ ಎನ್.ಎನ್. ವೋರಾ ಅವರ ತೆರವಾದ ಸ್ಥಾನಕ್ಕೆ ಮಾಲಿಕ್ ನೇಮಕವಾಗಿದ್ದಾರೆ. ಮಾಲಿಕ್ ಅವರು ಬಿಹಾರದ ಮಾಜಿ ರಾಜ್ಯಪಾಲರಾಗಿದ್ದಾರೆ.

Leave a Comment