ಜಮೀರ್ ರಾಜೀನಾಮೆ ಕೇಳುವುದು ಅಸಮಂಜಸ: ಸತೀಶ್

ಬೆಳಗಾವಿ, ಜೂ 16: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದವರು ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಸರ್ಕಾರದ ಮೇಲೆ ಹಾಗೂ ಸಚಿವ ಜಮೀರ್ ಅಹ್ಮದ್ ಅವರ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ. ಜಮೀರ್ ಅಹ್ಮದ್ ಅವರು ಐಎಂಎ ಜೊತೆಗೆ ಶಾಮೀಲಾಗಿದ್ದಾರೆ ಎಂದು ಆರೋಪ ಮಾಡುತ್ತಿರುವುದ ಸರಿ ಅಲ್ಲ ಎಂದರು.
ಜಮೀರ್ ಅವರ ಮೇಲೆ ಆರೋಪವಿದೆ. ಆದರೆ ಸಾಬೀತಾಗಿಲ್ಲ. ಹಾಗಂತ ಅವರನ್ನು ರಾಜೀನಾಮೆ ಕೊಡಿ ಎಂದು ಹೇಳುವುದು ಅಸಮಂಜಸ ಎಂದ ಅವರು ಬಿಜೆಪಿಯವರು ಎಲ್ಲವನ್ನೂ ವಿರೋಧ ಮಾಡುವ ಪ್ರವೃತ್ತಿಯುಳ್ಳವರು ಎಂದು ಕಿಡಿ ಕಾರಿದರು.
ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನ್ಸೂರ್ ಖಾನ್‍ನನ್ನು ಬಂಧಿಸುವುದು ದೊಡ್ಡದಲ್ಲ. ಸರ್ಕಾರ ಸೂಕ್ತ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಆರೋಪಿಯನ್ನು ಪತ್ತೆ ಹಚ್ಚುತ್ತಾರೆ ಎಂದು ಅವರು ನುಡಿದರು.

Leave a Comment