ಜಮೀನು ಕೆಲಸ ಮಾಡುತ್ತಿದ್ದವರ ಮೇಲೆ ಕರಡಿ ದಾಳಿ; ಒಬ್ಬ ಸಾವು

 ಚಿತ್ರದುರ್ಗ,ಸೆ. 13: ಗ್ರಾಮಕ್ಕೆ ನುಗ್ಗಿದ ಕರಡಿಯೊಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರ ಮೇಲೆ ದಾಳಿ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದಳವಾಯಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ರಮೇಶ್, ಉಮೇಶ್, ಶಶಿ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು. ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬುಕ್ಕಸಾಗರದ ರಾಜಣ್ಣ (50) ಸಾವನ್ನಪ್ಪಿದ್ದಾರೆ.

ಇದಲ್ಲದೆ ದಳವಾಯಿಕಟ್ಟೆ ಗ್ರಾಮದಲ್ಲಿ ಕರಡಿ ಓಡಾಡುತ್ತಿದ್ದು, ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ. ಈ ಹಿಂದೆ ಚಿತ್ರದುರ್ಗ ತಿಮ್ಮಣ್ಣ ನಾಯಕನ ಕೆರೆ ಹಾಗೂ ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೆ ಚಿರತೆಗಳು ಕಾಣಿಸಿಕೊಂಡಿದ್ದವು. ಇದೀಗ ಕರಡಿ ಸರದಿಯಾಗಿದೆ. ಆಹಾರಕ್ಕಾಗಿ ಕಾಡಿನಿಂದ ನಾಡಿನ ಕಡೆ ಪ್ರಾಣಿಗಳು ಮುಖ ಮಾಡುತ್ತಿರುವುದರಿಂದ ಜನರು ಭಯದಲ್ಲಿ ಬದುಕುವಂತಾಗಿದೆ.

Leave a Comment