ಜಪಾನ್; ತುರ್ತು ಭೂಸ್ಪರ್ಶ ಮಾಡಿದ ಬೋಯಿಂಗ್ 737

ಟೋಕಿಯೋ, ನ 13 -ಜಪಾನ್ ನ ಪುಕ್ಯುಯೋಕಾ ವಿಮಾನನಿಲ್ದಾಣದಲ್ಲಿ ಸ್ಕೈಮಾರ್ಕ್ ಸಂಸ್ಥೆಯ ಬೋಯಿಂದ 737 ವಿಮಾನ ಕೆಲ ತಾಂತ್ರಿಕ ಕಾರಣಗಳಿಂದ ತುರ್ತು ಭೂಸ್ಪರ್ಶ ಮಾಡಿತು.

ಇಲ್ಲಿನ ವಿಮಾನ ನಿಲ್ದಾಣದಿಂದ ಓಕಿನಾವ ಕಡೆಗೆ ಪಯಣ ಆರಂಭಿಸಿದ್ದ ವಿಮಾನದ ಇಂಜಿನ್ ವಿಫಲಗೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಿತು. ಪರಿಣಾಮವಾಗಿ ಕೆಲ ಕಾಲ ರನ್ ವೇ ಅನ್ನು ಮುಚ್ಚಲಾಗಿತ್ತಾದರೂ, ಇತರ ವಿಮಾನ ಸಂಚಾರಕ್ಕೆ ತೊಂದರೆಯಾಗಲಿಲ್ಲ. ವಿಮಾನದಲ್ಲಿ ಸುಮಾರು 139 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಅಲ್ಲಿನ ಭೂ, ಮೂಲಭೂತ ಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ಅಮೆರಿಕದ ಟ್ವಿನ್ ಜೆಟ್ ಬೋಯಿಂಗ್ ವಿಮಾನ 1967ರಿಂದ ಸೇವೆಯಲ್ಲಿದ್ದು, ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನ ಸಂಸ್ಥೆಯಾಗಿದೆ. ಇದರ ಹೊಸ ಆವೃತ್ತಿಗಳಾದ ಬೋಯಿಂಗ್ 737 ಮತ್ತು 737 ಮ್ಯಾಕ್ಸ್ ಅನ್ನು ನಂತರ ಪರಿಚಯಿಸಲಾಯಿತು.

ಬೋಯಿಂಗ್ 737 ಈಗಾಗಲೇ ಹಲವು ಬಾರಿ ತೊಂದರೆಗೆ ಸಿಲುಕಿದೆ. 2018ರ ಅಕ್ಟೋಬರ್ ನಲ್ಲಿ ಇಂಡೋನೇಷಿಯಾದಲ್ಲಿ ವಿಮಾನ ಪಥನವಾಗಿತ್ತು, ನಂತರ ಮಾರ್ಚ್ ನಲ್ಲಿ ಇತಿಯೋಪಿಯಾದಲ್ಲಿ ಮತ್ತೊಂದು ವಿಮಾನ ಪತನವಾಗಿತ್ತು. ಇದರಲ್ಲಿ 346 ಜನರು ಮೃತಪಟ್ಟಿದ್ದರು.  ಈ ಅಪಘಾತಗಳ ಹಿಂದೆ ಮ್ಯಾನ್ಯೂರಿಂಗ್ ಕ್ಯಾರೆಕ್ಟರಿಸ್ಟಿಕ್ಸ್ ಆಗ್ ಮೆಂಟೇಷನ್ ಸಿಸ್ಟಮ್ (ಎಂಸಿಎಸಿ) ಕಾರಣವಿರಬಹುದು ಎಂದು ತನಿಖೆಯಲ್ಲಿ ಪತ್ತೆಯಾಗಿತ್ತು.

ಈ ಎರಡು ಮಾರಣಾಂತಿಕ ಪತನದ ನಂತರ ವಿಶ್ವದ ಬಹುತೇಕ ರಾಷ್ಟ್ರಗಳು ಬೋಯಿಂಗ್ 737 ಮೇಲೆ ನಿಷೇಧ ಹೇರಿದ್ದವು. ಈಗ ಬೋಯಿಂಗ್ ವಿಮಾನದ ಸುರಕ್ಷೆ ಮತ್ತು ಪೈಲೆಟ್ ಗಳ ತರಬೇತಿಗೆ ಸುಧಾರಿತ ಯೋಜನೆಗಳನ್ನು ಹಮ್ಮಿಕೊಂಡಿದೆ.

Leave a Comment