ಜನ ನೋಡುವ ಚಿತ್ರಗಳಿಗೆ ಪ್ರಶಸ್ತಿಯೂ ಬರಬೇಕು

  •  ಚಿಕ್ಕನೆಟಕುಂಟೆ ಜಿ.ರಮೇಶ್

ಅವಾರ್ಡ್ ಸಿನಿಮಾ, ಕಮರ್ಷಿಯಲ್ ಸಿನಿಮಾ ಎನ್ನುವ ಬೇಧ ಭಾವವಿಲ್ಲ.ಜನರು ನೋಡುವ ಸಿನಿಮಾವನ್ನೂ ಕೊಡಬೇಕು.ಅಂತಹ ಸಿನಿಮಾಗಳಿಗೆ ಅವಾರ್ಡ್ ಬರಬೇಕು.” ಹೀಗಂತ ಹೇಳಿಕೊಂಡರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಇತ್ತೀಚೆಗಂತೂ ಕಮರ್ಷಿಯಲ್ ಸಿನಿಮಾದಷ್ಟೇ ಬ್ರಿಡ್ಜ್ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ.ದೊಡ್ಡಮಟ್ಟದಲ್ಲಿ ಹೆಸರು ಮಾಡುತ್ತಿವೆ.ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ಗಳು ಬಂದಿರುವುದರಿಂದ ವಿಶ್ವದ ಸಿನಿಮಾಗಳು ಬೆರಳ ತುದಿಯಲ್ಲಿವೆ. ಹೀಗಾಗಿ ಗುಣಮಟ್ಟದ ಚಿತ್ರಗಳನ್ನು ಜನ ನಿರೀಕ್ಷೆ ಮಾಡುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ’ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣದಲ್ಲಿ ಬುಸಿಯಾಗಿದ್ದಾರೆ. ಈ ನಡುವೆ ಸಂತೋಷ್ ಆನಂದ್ ರಾಮ್ ಅವರೊಂದಿಗೆ ಮತ್ತೊಂದು ಚಿತ್ರ ಮಾಡಲು ಸಮ್ಮತಿ ಸೂಚಿಸಿದ್ದಾರೆ. ಈ ಮಧ್ಯೆ ತಮ್ಮ ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ಚೊಚ್ಚಲ ನಿರ್ಮಾಣದ ’ಕವಲು ದಾರಿ’ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದ್ದು ಚಿತ್ರೀಕರಣದ ನಂತರದ ಕೆಲಸದಲ್ಲಿ ಬ್ಯುಸಿಯಾಗಿದೆ. ಎರಡನೇ ನಿರ್ಮಾಣದ ಚಿತ್ರ ’ಮಾಯಾ ಬಜಾರ್ ಚಿತ್ರೀಕರಣದ ಹಂತದಲ್ಲಿದೆ. ಇದರ ಮಧ್ಯೆ ಮತ್ತೊಂದು ಚಿತ್ರ ನಿರ್ಮಾಣ ಮಾಡುವ ಕುರಿತು ಚರ್ಚೆಯಲ್ಲಿ ನಿರತರಾಗಿದ್ದಾರೆ. ಇವುಗಳ ಮಧ್ಯೆ ಹೋಂ ಬ್ಯಾನರ್ ಮೂಲಕ ಚಿತ್ರದಲ್ಲಿ ಕಾಣಿಸಿಕೊಳ್ಳುವ ಇರಾದೆಯೂ ಅವರಿಗೆ.”

puneeth-rajkumar5

ಯಾವುದೇ ಭಾಷೆಯ ಚಿತ್ರ ನೋಡುವನಿಗೆ ಭಾಷೆ ಯಾವುದೇ ಆಗಿರಲಿ ಒಳ್ಳೆಯ ಸಿನಿಮಾ ಬೇಕು ಅಷ್ಟೇ. ವಿಶ್ವಮಟ್ಟಕ್ಕೆ ಬಂದಾಗ ವರ್ಲ್ಡ್ ಸಿನಿಮಾ ಮತ್ತು ಭಾರತೀಯ ಸಿನಿಮಾ ಅನ್ನುವುದು ಬರುತ್ತದೆ. ಹೀಗಾಗಿ ಒಳ್ಳೆಯ ಚಿತ್ರ ನೀಡುವುದು ನಮ್ಮ ಜವಬ್ದಾರಿ.

’ಗ್ರಾಮಾಯಣ’ ಚಿತ್ರದ ಟೀಸರ್ ಬಿಡುಗಡೆ ವೇಳೆ ಮಾತಿಗೆ ಸಿಕ್ಕ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಮುಂಬರುವ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡರು.ಈ ವೇಳೆ ಅವರು,ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ಚೊಚ್ಚಲ ಬಾರಿಗೆ ಮೂಡಿ ಬರುತ್ತಿರುವ ’ಕವಲು ದಾರಿ” ಚಿತ್ರದ ಟೀಸರ್ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ರೀತಿ ಪ್ರತಿಕ್ರಿಯೆ ಚಿತ್ರಕ್ಕೂ ವ್ಯಕ್ತವಾದರೂ ನಾವು ಮಾಡಿದ ಶ್ರಮ ಸಾರ್ಥಕ.

ಸದ್ಯ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಯಾವುದೇ ಟ್ರೆಂಡ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ,ನಿರ್ದೇಶಕ ಹೇಮಂತ್‌ಗೆ ಸ್ವಾತಂತ್ರ್ಯ ನೀಡಿದ್ದೇನೆ. ಜೊತೆಗೆ ಅನಂತ್ ನಾಗ್ ಸಾರ್, ರಿಷಿ ಉತ್ತಮವಾಗಿ ನಟಿಸಿದ್ದಾರೆ.ಅಕ್ಟೋಬರ್ ಕೊನೆ ಅಥವಾ ನವಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ.

ಮತ್ತೊಂದು ನಿರ್ಮಾಣದ ’ಮಾಯಬಜಾರ್ ಚಿತ್ರೀಕರಣದ ಹಂತದಲ್ಲಿದೆ.ಮೂರನೇ ನಿರ್ಮಾಣದ ಚಿತ್ರದ ಬಗ್ಗೆ ಮಾತುಕತೆ ನಡೆದಿದೆ. ಈ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಆದ ತಕ್ಷಣ ವಿವರ ಮಾಹಿತಿ ಬಹಿರಂಗ ಪಡಿಸಿತ್ತೇನೆ. ಹಣಕಾಸಿನ ವಿಷಯದಲ್ಲಿ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಎಲ್ಲವನ್ನೂ ಪತ್ನಿ ಅಶ್ವಿನಿ ನೋಡಿಕೊಳ್ಳುತ್ತಿದ್ದಾರೆ. ಕೇಳಿದಕ್ಕೆ ’ಎಸ್ ಎನ್ನುವುದು ನನ್ನ ಕೆಲಸ. ಚಿತ್ರೀಕರಣದ ಬ್ಯುಸಿಯಲ್ಲಿದ್ದರಿಂದ ನಿರ್ಮಾಣದ ಚಿತ್ರದ ಸೆಟ್‌ಗೂ ಹೋಗಲು ಆಗಿಲ್ಲ.

puneeth_rajkumar2

“ಪಿಆರ್‌ಕೆ ಸಂಸ್ಥೆಯ ಮೂಲಕ ವರ್ಷಕ್ಕೆ ಮೂರು ಸಿನಿಮಾ ಮಾಡುವ ಆಸೆ ಇದೆ. ಕನಿಷ್ಟ ಎರಡು ಸಿನಿಮಾ ಗ್ಯಾರಂಟಿ. ಹೊಸಬರಿಗೆ ಅವಕಾಶ ನೀಡುವ  ಜೊತೆಗೆ ತಾವೂ ತಮ್ಮ ಸಂಸ್ಥೆಯಲ್ಲಿ ನಟಿಸುವ ಆಸೆ ಇದೆ.

– ಪುನೀತ್ ರಾಜ್‌ಕುಮಾರ್

ಪಿಆರ್‌ಕೆ ಸಂಸ್ಥೆಯ ಮೂಲಕ ವರ್ಷಕ್ಕೆ ಮೂರು ಸಿನಿಮಾ ಮಾಡುವ ಗುರಿ ಇದೆ. ಕಡೆ ಪಕ್ಷ ಎರಡು ಚಿತ್ರಗಳನ್ನು ನಿರ್ಮಾಣ ಮಾಡಲಾಗುವುದು. ಜೊತೆಗೆ ಹೋಂ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಕುರಿತೂ ಚರ್ಚೆ ನಡೆಯುತ್ತಿದೆ.

’ನಟ ಸಾರ್ವಭೌಮ’ ಚಿತ್ರಕ್ಕೆ ಇನ್ನೂ ೨೫ ದಿನ ಕೋಲ್ಕತ್ತಾ ಮತ್ತು ಬೆಂಗಳೂರಿನ ಚಿತ್ರೀಕರಣ ಬಾಕಿ ಇದೆ. ’ನಟ ಸಾರ್ವಭೌಮ’, ’ರಾಜಕುಮಾರ’ ಈ ರೀತಿಯ ಹೆಸರು ಇಟ್ಟಾಗ ಮುಜುಗರ ಜೊತೆಗೆ ಭಯವಾಗುತ್ತದೆ. ನಿರ್ಮಾಪಕರು ಮತ್ತು ನಿರ್ದೇಶಕರು ಇದೇ ಬೇಕು ಎಂದಾಗ ಬೇಡ ಎನ್ನಲು ಆಗುವುದಿಲ್ಲ.ನಟನಾಗಿ ಚಿತ್ರಕ್ಕೆ ಕೆಲಸ ಮಾಡುವುದು ನನ್ನ ಕೆಲಸ.

’ನಟ ಸಾವೌಭೌಮ’ ಚಿತ್ರದ ಚಿತ್ರೀಕರಣ ಮುಗಿದ ನಂತರ ಸಂತೋಷ್ ಆನಂದ್ ರಾಮ್ ನಿರ್ದೇಶನ ಚಿತ್ರ ಆರಂಭವಾಗಲಿದೆ.ಇನ್ನೂ ಯಾವಾಗ ಎನ್ನುವುದು ನಿರ್ಧಾರವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ’ಟಗರು’ ಬಿಟ್ಟರೆ ಸ್ಟಾರ್ ನಟರ ಸಿನಿಮಾ ಬಂದಿಲ್ಲ.ಆ ರೀತಿಯೂ ಆಗಬಾರದು. ನಿರಂತವಾಗಿ ಬರುತ್ತಿರಬೇಕು. ಇನ್ನೂ ಮುಂದೆ ಒಂದರ ಹಿಂದೆ ಒಂದು ಸಿನಿಮಾ ಬರುತ್ತವೆ.

ಈಗ ತಾನೆ ಟಿಟ್ವರ್ ಖಾತೆಗೆ ಎಂಟ್ರಿ ಪಡೆದಿರುವುದು ಖುಷಿಯಾಗಿದೆ. ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ರಮೇಶ್ ಅರವಿಂದ್ ಉತ್ತಮವಾಗಿ ನಡೆಸಿಕೊಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಪುನೀತ್ ರಾಜ್‌ಕುಮಾರ್.

Leave a Comment