ಜನಾಶೀರ್ವಾದದಿಂದ ಕ್ಷೇತ್ರದ ಅಭಿವೃದ್ಧಿಗೆ ಬದ್ಧ-ಹೆಬ್ಬಾರ

ಮುಂಡಗೋಡ,ನ15:ತಾಲೂಕಿನ ಜನರು ತನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ಋಣಿಯಾಗಿದ್ದೇನೆ. ಬಿಜೆಪಿ ರಾಜ್ಯ ಮುಖಂಡರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಗುರುವಾರ ಸಂಜೆ ಬೆಂಗಳೂರಿನಿಂದ ಪಟ್ಟಣಕ್ಕೆ ಆಗಮಿಸಿದ ಅವರನ್ನು ಬಿಜೆಪಿ ಮುಖಂಡರು ಹಾಗೂ ಹೆಬ್ಬಾರ್ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.ನಂತರ ಶಿವಾಜಿ ಸರ್ಕಲ್‍ನಲ್ಲಿಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದಅವರು, ಮುಂಡಗೋಡ ತಾಲೂಕಿನ ಜನರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲ ನೀಡಿದ್ದಾರೆ.ಅದನ್ನು ತನ್ನ ರಾಜಕೀಯ ಜೀವನದ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಮಾಡಿದೆ.ಈ ತಾಲೂಕಿನ ಎರಡನೇ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ಅನುಮತಿ ನೀಡಿದೆ.ತಾಲೂಕಿನ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಮಾಡಿಕೊಡಲು ಬದ್ಧನಾಗಿದ್ದೇನೆಎಂದರು.
ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. ಬಿಜೆಪಿ ಪಕ್ಷವು ಬಿ ಪಾರಂ ಸಹ ನೀಡಿದೆ.ಕುಮಾರ ಬಂಗಾರಪ್ಪ, ಬಸವರಾಜ ಬೊಮ್ಮಾಯಿ, ಅನಂತಕುಮಾರ ಹೆಗಡೆ, ಕೋಟ ಶ್ರೀನಿವಾಸ, ಪ್ರಹ್ಲಾದ ಜೋಶಿ ಸಹಿತ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.ಬಿಜೆಪಿ ಪಕ್ಷಕ್ಕೆಜನರು ಆಶೀರ್ವಾದ ಮಾಡಬೇಕು.ಮತ್ತೊಮ್ಮೆತಮ್ಮ ಸೇವೆಯನ್ನು ಮಾಡಲು ಸಹಕಾರ ನೀಡಬೇಕುಎಂದು ಮನವಿ ಮಾಡಿದರು.
ಬಿಜೆಪಿ ತಾಲೂಕಾಧ್ಯಕ್ಷ ಗುಡ್ಡಪ್ಪಕಾತೂರ, ಫಣಿರಾಜ ಹದಳಗಿ, ನಾಗಭೂಷಣ ಹಾವಣಗಿ, ಅಶೋಕ ಚಲವಾದಿ, ಬಸವರಾಜ ಓಶಿಮಠ, ಉಮೇಶ ಬಿಜಾಪುರ, ನಾಗರಾಜಕುನ್ನೂರ, ವಿನಾಯಕರಾಯ್ಕರ್, ತುಕಾರಾಮ ಇಂಗಳೆ, ಉದಯ ಪಾಲೇಕರ್, ಕೆ.ರಾಜು ವಡಗಟ್ಟಾ, ವಿಠ್ಠಲ ಬಾಳಂಬೀಡ, ರಾಜು ಗುಬ್ಬಕ್ಕನವರ್‍ಉಪಸ್ಥಿತರಿದ್ದರು.

Leave a Comment