ಜನಸಂಖ್ಯಾ ಸ್ಫೋಟದ ಸಂದೇಶ ತಲುಪಿಸಬೇಕು

ಚಿತ್ರದುರ್ಗ.ಜು.12; ಬಹಳಷ್ಟು ವಿದ್ಯಾರ್ಥಿನಿಯರುಗಳಿಗೆ ಜನಸಂಖ್ಯೆಯಿಂದ ಆಗುವ ಅನಾಹುತಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಅದನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸಿಕೊಡಲು ವಿಶ್ವ ಜನಸಂಖ್ಯಾ ದಿನಾಚರಣೆ ಸೂಕ್ತವಾದ ಸಮÀಯ, ಇಂತಹ ಆಚರಣೆಗಳನ್ನು ಪ್ರತಿ ಶಾಲೆಗಳಲ್ಲೂ ಆಚರಿಸುತ್ತಾ, ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕು ಎಂದು ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಬಾಲಕಿÀಯರ ಪದವಿ ಪೂರ್ವ ಕಾಲೇಜು ಮತ್ತು ಸಂತ ಜೋಸೆಫರ ವಿದ್ಯಾಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆÀಯ ಪ್ರಯುಕ್ತ “ಹೆಣ್ಣು ಮಕ್ಕಳಿಗೆ ಜನಸಂಖ್ಯಾ ಸ್ಪೋಟದ ಬಗ್ಗೆ ಜಾಗೃತಿ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಜನಸಂಖ್ಯಾ ಸ್ಫೋಟದಿಂದ ಆಹಾರದ ಸಮಸ್ಯೆ, ನೀರಿನ ಸಮಸ್ಯೆ, ಉದ್ಯೋಗದ ಸಮಸ್ಯೆ, ಆರೋಗ್ಯದ ಸಮಸ್ಯೆ, ವಸತಿ ಸಮಸ್ಯೆ, ಹೆಚ್ಚಾಗುತ್ತಾ ಬರುತ್ತದೆ ಎಂಬುದನ್ನು ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡಿಕೊಡಬೇಕು. ಪಾಠದಲ್ಲಿ ಬಂದಂತ ವಿಚಾರಗಳನ್ನು ವಿದ್ಯಾರ್ಥಿಗಳು ಮರೆÀಯುವ ಸಂಭವವುಂಟು, ಇಂತಹ ಆಚರಣೆಗಳಿಂದ ಅವುಗಳನ್ನು ಮರು ನೆನಪಿಗೆ ತರಲು ಅನುಕೂಲಕರವಾಗುತ್ತದೆ. ಯುವಜನಾಂಗ ನಿರುದ್ಯೋಗ ಸಮಸ್ಯೆಯಿಂದ ಬಳಸುತ್ತಿರುವುದಕ್ಕೆ ಜನಸಂಖ್ಯೆ ಮುಖ್ಯ ಕಾರಣವಾಗುತ್ತಿದೆ. ವಿದ್ಯಾವಂತ ಯುವಕರಲ್ಲಿ ನಿರುದ್ಯೋಗ ಸಮಸ್ಯೆ ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದ್ದು, ಅವರ ಮಾನಸಿಕ ಅಸ್ವಸ್ಥೆಗೆ ಕಾರಣವಾಗುತ್ತಿದೆ. ಜನಸಂಖ್ಯಾ ಸ್ಫೋಟದಿಂದ ಅಗುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು. ಸರ್ಕಾರದ ಹಲವಾರು ಯೋಜನೆಗಳು ಜನಸಂಖ್ಯಾ ಸ್ಫೋಟದಿಂದ ಜನರಿಗೆ ಸರಿÀಯಾದ ಪರಿಹಾರವನ್ನು ತಲುಪಿಸಲು ತೊಂದರೆÀಯಾಗುತ್ತಿದೆ. ಎಲ್ಲಾ ಆಯೋಜನೆಗಳು ಸಹ ಜನಸಂಖ್ಯೆಯಲ್ಲಿ ಕರಗಿ ನೀರಾಗುತ್ತಿವೆ ಎಂದರು.
ಜನಸಂಖ್ಯಾ ಸ್ಫೋಟದಿಂದ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಉಂಟಾಗಿ, ಜನರು ನೀರಿಗಾಗಿ, ಆಹಾರಕ್ಕಾಗಿ, ಬಡಿದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬಡತನ ಹೆಚ್ಚಿ, ಶ್ರೀಮಂತರು ಮತ್ತು ಬಡವರ ಮಧ್ಯೆ ಅಗಾಧವಾದ ಕಂದರ ನಿರ್ಮಾಣವಾಗುತ್ತಿದೆ, ಜನಸಂಖ್ಯಾ ಸ್ಫೋಟದ ಜೊತೆಗೆ ಗುಡಿ ಕೈಗಾರಿಕೆಗಳ ನಾಶ ಇನ್ನೊಂದಿಷ್ಟು ಸಮಸ್ಯೆಗಳಿಗೆ ನಾಂದಿÀಯಾಗಿದೆ. ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿ ಹೊಂದಲು ಕಾರಣ ಅವು ತಮ್ಮ ಜನಸಂಖ್ಯೆÀಯನ್ನು ನಿÀಯಂತ್ರಣದಲ್ಲಿ ಇಟ್ಟುಕೊಂಡಿದ್ದೆ ಮುಖ್ಯವಾಗಿದೆ. ಬಡ ದೇಶಗಳು ಸಹ ತಮ್ಮ ಜನಸಂಖ್ಯೆÀಯನ್ನು ನಿÀಯಂತ್ರಣಕ್ಕೆ ತಂದುಕೊಳ್ಳಬೇಕಾಗಿದೆ. ಗ್ರಾಮೀಣ ಜನರಲ್ಲೂ ಸಹ ಜನಸಂಖ್ಯೆಯ ಬಗ್ಗೆ ಅರಿವನ್ನು ಮೂಡಿಸಬೇಕಾಗಿದೆ. ಅಲ್ಲಿರುವ ಬಡತನ, ನಿರುದ್ಯೋಗ ಸಮಸ್ಯೆ, ಶೋಷಣೆ, ಅಸಮಾನತೆÀಯನ್ನು, ನಿವಾರಿಸಲು ಸಹಾÀಯಕವಾಗುತ್ತದೆ ಎಂದರು.
ಎಲ್ಲ ಸಾಮಾಜಿಕ ಆರ್ಥಿಕ ಶೈಕ್ಷಣ ಕ ಪರಿಸರದ ಸಮಸ್ಯೆಗಳಿಗೆ ಜನಸಂಖ್ಯೆಯೇ ಮುಖ್ಯ ಕಾರಣವಾಗುತ್ತಿದೆ. ಜನಸಂಖ್ಯಾ ಕಾರಣವನ್ನು ಬದಿಗಿಟ್ಟು, ನಾವು ಬೇರೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಪ್ರಮುಖವಾದ ಜನಸಂಖ್ಯಾ ಸಮಸ್ಯೆÀಯನ್ನು, ಶೀಘ್ರವಾಗಿ ಪರಿಹರಿಸುತ್ತಾ ಬರಬೇಕಾಗಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಧರ್ಮಗುರುಗಳ ಸºಕಾರÀ ಅಗತ್ಯವಾಗಿ ಬೇಕಾಗಿದೆ. ಜಾತಿÀಯ ಹೆಸರಿನಲ್ಲಿ, ಧರ್ಮದ ಹೆಸರಿನಲಿ,್ಲ ಪಂಗಡದ ಹೆಸರಿನಲ್ಲಿ, ಜನಸಂಖ್ಯೆÀಯನ್ನು ನಿÀಯಂತ್ರಿಸುವುದು ಸುಲಭವಾಗುವುದು ಸುಲಭವಾಗುವುದು. ಧಾರ್ಮಿಕ ಮುಖಂಡರ ಸಹಭಾಗಿತ್ವದಲ್ಲಿ ಜನಸಂಖ್ಯೆ ನಿಯಂತ್ರಣ ಸುಲಭ. ಜನರು ಆಧ್ಯಾತ್ಮಿಕವಾಗಿ ಕೆಲವು ನಂಬಿಕೆಗಳೊಂದಿಗೆ ಜನಸಂಖ್ಯೆಯನ್ನು ಪೆÇ್ರೀತ್ಸಾಹಿಸುತ್ತಾ ಬಂದಿದ್ದಾರೆ. ಮೂಢನಂಬಿಕೆಗಳು ಸಹ ಕೆಲವೊಮ್ಮೆ ಜನಸಂಖ್ಯೆÀಯ ಸ್ಫೋಟಕ್ಕೆ ಕಾರಣವಾಗಿದೆ. ವೈಜ್ಞಾನಿಕ ತಿಳಿವಳಿಕೆÀಯನ್ನು ಜನಸಾಮಾನ್ಯರ ತಳಮಟ್ಟಕ್ಕೆ ತಲುಪಿಸಿ, ಜನಸಂಖ್ಯೆಯನ್ನು ನಿÀಯಂತ್ರಣ ಗೊಳಿಸಬಹುದು. ಜನಸಂಖ್ಯಾ ನಿಯಂತ್ರಣ ಬರೀ ವೈದ್ಯಕೀÀಯ ರಂಗದವರ ಕಾರ್ಯವಲ್ಲ, ಇದಕ್ಕೆ ಎಲ್ಲರ ಸಹಕಾರ ಅಗತ್ಯ, ಜನಸಂಖ್ಯಾ ಸಮಸ್ಯೆಗಳಿಂದ ಆಗುತ್ತಿರುವ ತೊಂದರೆಗಳನ್ನು ಜನರಿಗೆ ಸರಿÀಯಾಗಿ ಮನದಟ್ಟು ಮಾಡಿಕೊಡುತ್ತಿಲ್ಲವಾದ್ದರಿಂದ, ಅದರ ದುಷ್ಪರಿಣಾಮ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಜನಸಂಖ್ಯೆ ನಿಯಂತ್ರಣದ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಜನರಿಗೆ ಸರಿಯಾದ ರೀತಿಯಲ್ಲಿ, ವೈವಿಧ್ಯಮÀಯವಾದ ಮಾರ್ಗಗಳ ಮುಖಾಂತರ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ಯುವ ಜನಾಂಗ ಜನಸಂಖ್ಯಾ ಸಮಸ್ಯೆಗಳಿಂದ ತತ್ತರಿಸುತ್ತಿದೆ, ತಮ್ಮ ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದೆ, ಅಸಹಾಯಕರಾಗಿದ್ದಾರೆ. ಜನಸಂಖ್ಯಾ ಸ್ಫೋಟದಿಂದ ಎಲ್ಲ ಅಭಿವೃದ್ಧಿ ಕಾರ್ಯಗಳು ಸಹ ನನೆಗುದಿಗೆ ಬಿದ್ದಿವೆ. ಆರ್ಥಿಕ ತೊಂದರೆ, ಹಣಕಾಸಿನ ಮುಗ್ಗಟ್ಟಿನಿಂದ ಸರಕಾರಗಳು ಅತಂತ್ರ ಸ್ಥಿತಿಗೆ ಬಂದು ನಿಲ್ಲುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀ ಸಜ್ಜನ್‍ರವರು, ಉಪನ್ಯಾಸಕರಾದ ಟಿ.ಟಿ. ತಿಪ್ಪೇಸ್ವಾಮಿ, ಸಿ.ಬಿ..ಶೈಲಜಾ, ಮಲ್ಲಪ್ಪ, ರಾಜು, ವಿದ್ಯಾ, ಕೃಷ್ಣಪ್ಪ.
ಸÀಂತ ಜೋಸೆಫರ ವಿದ್ಯಾ ಸಂಸ್ಥೆಯ ವ್ಯವಸ್ಥಾಪರಾದ ಸಿಸ್ಟರ್ ಗೋರಿಯ ದಾಸ್, ಪ್ರಾಂಶುಪಾಲರಾದ, ಸಿಸ್ಟರ್ ರಾಣ , ಸಿಸ್ಟರ್ ಸುಸೈ ರಾಣ , ಸಿಸ್ಟರ್ ಇರುದಯಾರಾಣ , ದೈಹಿಕ ಶಿಕ್ಷಕರಾದ ಗುರುರಾಜ್, ತಿಪ್ಪೇಸ್ವಾಮಿ, ದೀಕ್ಷಿತ್ ಇನ್ನಿತರರು ಉಪಸ್ಥಿತರಿದ್ದರು.

Leave a Comment