ಜನರ ಸುರಕ್ಷತೆಗೆ ಆದ್ಯತೆ

ಹರಿಹರ.ಜ.11; ಜನರ ಸುರಕ್ಷತೆಗೆ ಒತ್ತು ರಾತ್ರಿ ಪಾಳೆದಲ್ಲಿ ಗಸ್ತು ತಿರುಗುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೆಂದು ವೃತ್ತ ನಿರೀಕ್ಷಕ ಸಿದ್ದಪ್ಪ ಈರಣ್ಣ ಗುರುನಾಥ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಾನೂನಿನ ಅರಿವು ಮೂಡಿಸುವ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜೂಜು ಮಟ್ಕಾ ಇಸ್ಪೀಟು ಮರಳು ಮಾಫಿಯ ಅನಧಿಕೃತ ಮದ್ಯ ಮಾರಾಟ ಇತರೆ ಅಪರಾಧ ಚಟುವಟಿಕೆಗಳ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಜನರ ಸುರಕ್ಷತೆ ಬಗ್ಗೆ ಹೆಚ್ಚು ಗಮನ ನೀಡುತ್ತೇನೆ. ಹೋಟೆಲ್ ಮತ್ತು ಲಾಡ್ಜ್ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಮಹಿಳೆಯರು ಸಾರ್ವಜನಿಕರು ಯಾವುದೇ ಅಪರಾಧ ಕೃತ್ಯಗಳು ಜರುಗಿದ ಸಂದರ್ಭದಲ್ಲಿ ಪೆÇಲೀಸರಿಗೆ ತಿಳಿಸಬೇಕು.
ಮಹಿಳೆಯರು ಮನೆಯಿಂದ ಹೊರಗಡೆ ಹೋಗಬೇಕಾದರೆ ಅಕ್ಕಪಕ್ಕದ ಮನೆಯವರಿಗೆ ತಿಳಿಸಬೇಕು, ವಾಯು ವಿಹಾರಕ್ಕೆ ಹೋದಾಗ ಮೈಮೇಲೆ ಚಿನ್ನಾಭರಣಗಳನ್ನು ಹಾಕಿಕೊಂಡು ತೆರಳಬೇಡಿ, ಮನೆ ಹತ್ತಿರ ಒಡವೆಗಳನ್ನು ಪಾಲಿಶ್ ಮಾಡಿಕೊಡಲು ಅಪರಿಚಿತರು ಬಂದಾಗ ಅವರಿಗೆ ಅವಕಾಶ ಮಾಡಿಕೊಡಬೇಡಿ. ಮಹಿಳೆಯರು ಮೋಸ ಹೋಗದೆ ಜಾಗೃತರಾಗಿರಬೇಕೆಂದರು. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮನೆಯಲ್ಲಿ ಅಕ್ರಮ ಮದ್ಯ ಮರಾಟ ಮಾಡುವುದರಿಂದ ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ಕುಟುಂಬಗಳು ತೊಂದರೆಗೀಡಾಗುತ್ತಿದ್ದಾರೆ. ಓಸಿ ಜೂಜಾಟ ,ಕ್ರಿಕೆಟ್ ಬೆಟ್ಟಿಂಗಿಗೆ ವಿದ್ಯಾರ್ಥಿಗಳು ಯುವಕರು ಬಲಿಯಾಗುತ್ತಿದ್ದಾರೆ ಎಂದು ಆಶಾ ಕಾರ್ಯಕರ್ತೆಯರು ಸಮಸ್ಯೆಗಳನ್ನು ತೋಡಿಕೊಂಡರು.
ಸಮಸ್ಯೆಗಳನ್ನು ಆಲಿಸಿದ ಸಿಪಿಐ ಮಾತನಾಡಿ ಈಗಾಗಲೇ ಗ್ರಾಮೀಣ ಮತ್ತು ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಗಲು ಮತ್ತು ರಾತ್ರಿ ವೇಳೆ ಗಸ್ತು ವಾಹನ ಸಂಚರಿಸುತ್ತಿವೆ. ಸಾರ್ವಜನಿಕರು ಜನಸ್ನೇಹಿ ಪೆÇಲೀಸ್ ಆಗಿ ಇಲಾಖೆಯೊಂದಿಗೆ ಸಹಕರಿಸಿ ಅಪರಾಧ ಪ್ರಕರಣಗಳನ್ನು ತಡೆಗಟ್ಟೋಣ ಊರಿನಲ್ಲಿ ಶಾಂತಿ ಸೌಹಾರ್ದದಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡೋಣ ಎಂದರು.
ಈ ಸಂಧರ್ಭದಲ್ಲಿ ಪಿಎಸ್‍ಐ ಶ್ರೀಧರ್ ಕೆ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave a Comment