ಜನರ ಮನಸ್ಸಿನಲ್ಲಿ ಉಳಿಯುವ ಚಿತ್ರ ಮಾಡುವಾಸೆ…

ಸರಳ ಸಜ್ಜನಿಕೆಗೆ ಪ್ರತಿರೂಪದಂತಿರುವ ಹಿರಿಯ ನಟ, ರ್ದೇಶಕ ರಮೇಶ್ ಅರವಿಂದ್,ಸದಾ ವಿವಾದದಿಂದ ದೂರ,.ತಾವಾಯಿತು ತಮ್ಮಕೆಲಸವಾಯಿತು ಎಂದು ಕಾಯಕದಲ್ಲಿ ನಂಬಿಕೆಯಿಟ್ಟ ಕರ್ಮಯೋಗಿ. ಸದಾ ಕೆಲಸ ಕೆಲಸ, ಪ್ರತಿ ದಿನ ಹೊಸದನ್ನು ಕಲಿಯುತ್ತಲೇ ಅದನ್ನು ಮತ್ತೊಬ್ಬರಿಗೆ ಹೇಳಿಕೊಡುವ ಕಲೆ ಕರಗತ ಮಾಡಿಕೊಂಡ ಉದಾರಿ ಮತ್ತು ಚಾಣಕ್ಯ.

film-ramesh-arvind_117೨೦೧೮ ರಮೇಶ್ ಅವರಿಂದ್ ಪಾಲಿಗೆ ಬ್ಯುಸಿಯೆಸ್ಟ್ ವರ್ಷ.ದ್ವಿಭಾಷಾಯಲ್ಲಿ ಚಿತ್ರ ನಿರ್ದೇಶನ,ನಟನೆ,ರಿಯಾಲಿಟಿ ಶೋ ಹೀಗೆ ಲು ಸಾಲು ಚಿತ್ರಗಳು, ಅದೇ ವಿಶ್ವಾಸ ಮತ್ತು ನಿರೀಕ್ಷೆಯೊಂದಿಗೆ ೨೦೧೯ರ ವರ್ಷದಲ್ಲಿ ಮತ್ತಷ್ಟು ದುಪ್ಪಟ್ಟು ಬ್ಯುಸಿಯಾಗುವ ಎಲ್ಲಾ ಸಾಧ್ಯತೆಗಳಿಗೆ. ಅದಕ್ಕೆ ಮುನ್ನುಡಿ ಬರೆಯುವಂತೆ ಬಹುನಿರೀಕ್ಷಿತ ಚಿತ್ರ ಬಟರ್‌ಫ್ಲೈ”ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿದೆ.ಇದರ ಬೆನ್ನಲ್ಲೇನಟನೆ, ನಿರ್ದೇಶನ, ರಿಯಾಲಿಟೀ ಶೋ ಹೀಗೆ ದಿನನಿತ್ಯದ ಕೆಲಸಗಳ ಪಟ್ಟಿ ಬೆಳೆಯುತ್ತಲೇ ಇದೆ.

’ಬಟರ್‌ಫ್ಲೈ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಳೆದ ಬಾರಿ ಮಾಧ್ಯಮದ ಮುಂದೆ ಹಾಜರಾಗಿದ್ದ ರಮೇಶ್ ಅರವಿಂದ್ ಮತ್ತೆ ಮಾಧ್ಯಮ ಮುಂದೆ ಕಾಣಿಸಿಕೊಂಡಿರಲಿಲ್ಲ.ಹೀಗಾಗಿ ಎಲ್ಲರೊಂದಿಗೆ ಮುಕ್ತವಾಗಿ ಮಾತು ಹಂಚಿಕೊಳ್ಳು,ಚಿತ್ರರಂಗದ ಆಗು ಹೋಗುಗಳ ಬಗ್ಗೆ ಮಾತನಾಡಲು ಅನೌಪಚಾರಿಕ ಪತ್ರಿಕಾಗೋಷ್ಠಿ ಕರೆದಿದ್ದರು. ಅಲ್ಲಿಚಿತ್ರರಂಗದ ಕನಸುಗಳ ಬಗ್ಗೆ ಲೋಕಾಭಿರಾಮವಾಗಿ ಮಾತುಗಳ ವಿನಿಮಯ ಮಾಡಿಕೊಂಡರು.

ಹತ್ತು,ಇಪ್ಪತ್ತು ವರ್ಷ ಕಳೆದರೂ ಜನರ ಮನಸ್ಸಿನಲ್ಲಿ ಉಳಿಯುವ ಸಿನಿಮಾ ಮಾಡಬೇಕೆನ್ನುವ ಆಸೆ ಇದೆ,ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಅಮೇರಿಕಾ ಅಮೇರಿಕಾ, ಅಮೃತ ವರ್ಷಿಣಿ, ಆಪ್ತಮಿತ್ರ,ರಾಮಶಾಮ ಭಾಮ ದಂತಹ ಚಿತ್ರಗಳನ್ನು ಮಾಡುವ ತುಡಿತವಿದೆ. ಇಂತಹ ಚಿತ್ರಗಳಿಗಾಗಿ ಹಂಲಿಸುತ್ತಿದ್ದೇನೆ.

ಕೆಲ ಚಿತ್ರಗಳು ಚಿತ್ರಮಂದಿರದಲ್ಲಿ ಉಳಿಯುವುದೇ ಇಲ್ಲ ಎನ್ನುವ ಆರೋಪ ಆಗಾಗ ಕೇಳಿ ಬರುತ್ತದೆ.ಚಿತ್ರಮಂದಿರದಲ್ಲಿಉಳಿಯುವುದಕ್ಕಿಂತ ಜನರ ಮನಸ್ಸಿನಲ್ಲಿ ಉಳಿಯುವ ಚಿತ್ರಗಳು ಹೆಚ್ಚು ದಿನ ಮತ್ತೆ ಮತ್ತೆ ಮೆಲುಕು ಹಾಕುವಂತಿರುತ್ತವೆ ಎಂದರು.

ಬಟರ್‌ಫ್ಲೈ ನಾಲ್ಕು ಭಾಷೆಗಳಲ್ಲಿ ಸಿದ್ದವಾಗಿದ್ದು,ಕನ್ನಡ ಮತ್ತು ತಮಿಳಿನಲ್ಲಿ ನಾನು ನಿರ್ದೇಶನ ಮಾಡಿದ್ದೇನೆ.ಫ್ರಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಇನ್ನು ಬಹುಭಾಷಾ ಚಿತ್ರ ಬೈರಾದೇವಿಯಲ್ಲಿ ನಟಿಸಿದ್ದೇನೆ. ಈ ನಡುವೆ ಆಕಾಶ್ ಶ್ರೀವಸ್ತ ಅವರ ಕುತೂಹಲಕಾರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ.

ಮುಂದಿನ ವರ್ಷ ನಿರ್ಮಾಣ ಸಂಸ್ಥೆ ಪುನಾರಂಭ,ನಿರ್ದೇಶನ, ನಟನೆ,ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವುದು ಈಗೆ ಪಟ್ಟಿ ಬೆಳೆಯುತ್ತಿದೆ.೨೦೧೮ ಅರ್ಥಪೂರ್ಣವಾಗಿತ್ತು ಎನ್ನುವ ಸಂತಸ ಹೊರಹಾಕಿದರು.

ಇತ್ತೀಚೆಗೆ ವಿವಿಧೆಡೆ ಶಾಲೆಗಳಿಗೆ ತೆರಳಿ, ಮಕ್ಕಳಿಗೆ ಬದುಕಿನ ಕಲೆಯ ಬಗ್ಗೆ ಹೇಳಿಕೊಡುತ್ತಿದ್ದು ಖುಷಿಕೊಟ್ಟಿದೆ. ಯಾವುದೇ ಕ್ಷೇತ್ರದಲ್ಲಿರಲಿ ಕಮಸು ಕಾಣಿ, ಆ ಕನಸನ್ನು ನನಸು ಮಾಡಲು ಅರ್ಹತೆ ಬೆಳೆಸಿಕೊಳ್ಳಿ, ಅದಕ್ಕಾಗಿ ಕಠಿಣ ಪರಿಶ್ರಮ ಪಡಿ, ಮನುಷ್ಯರು ಮನುಷ್ಯರ ಜೊತೆ ಜಗಳವಾಡುವ ಕಾಲ ಬದಲಾಗಿದೆ. ಹೀಗೇನಿದ್ದರೂ ಯಂತ್ರಗಳ ಜೊತೆ ಗುದ್ದಾಡಬೇಕು ಅದಕ್ಕಾಗಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಿ ಎನ್ನುವ ಸಲಹೆ ಅವರದು.

Leave a Comment