ಜನರೇಷನ್ ಕಥೆ ಹೇಳಲಿದೆ ‘ಜಿಲ್ಕ’ : ಕವೀಶ್ ಶೆಟ್ಟಿ ನಿರ್ದೇಶನ

ಬೆಂಗಳೂರು, ಡಿ 25 – ಮುಂಗಾರು ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಕವೀಶ್ ಶೆಟ್ಟಿ ಈಗ ಜಿಲ್ಕ ಸಿನಿಮಾದ ಮೂಲಕ ನಿರ್ದೇಶಕ ಹಾಗೂ ನಾಯಕನಾಗಿಯೂ ಎಂಟ್ರಿ ಕೊಡ್ತಿದ್ದಾರೆ

ವಿಷೇಷ ಅಂದ್ರೆ ಈ ಸಿನಿಮಾದಲ್ಲಿ ಕವೀಶ್ ಶೆಟ್ಟಿ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕಾಗಿ ಮೂರು ಬಾರಿ ಬಾಡಿ ವೇಟ್ ಚೇಂಜ್ ಮಾಡ್ಕೊಂಡಿದ್ದಾರೆ

ಸ್ಕೂಲ್ ಡೇಸ್ ಹುಡ್ಗ, ಕಾಲೇಜ್ ಹುಡ್ಗ ಹಾಗೂ ಪ್ರಬುದ್ಧ ಯಂಗ್ ಮ್ಯಾನ್ ಆಗಿ ಟ್ರಿಪಲ್ ಶೇಡ್ ನಲ್ಲಿ ಕಾಣಿಸಿಕೊಳ್ತಿದ್ದು, ಕರೆಂಟ್ ಜನರೇಷನ್ ಕಥೆಯನ್ನ ಜಿಲ್ಕ ಸಿನಿಮಾದ ಮೂಲಕ ಜಾಲಿಯಾಗಿ ತೋರಿಸೋಕೆ ರೆಡಿಯಾಗಿದ್ದಾರೆ ಸ್ಕೂಲ್ ವಿದ್ಯಾರ್ಥಿ ಪಾತ್ರಕ್ಕಾಗಿ 51 ಕೆಜಿ,ಕಾಲೇಜು ವಿದ್ಯಾರ್ಥಿ ಪಾತ್ರಕ್ಕಾಗಿ 68 ಕೆಜಿ, ಕಾಲೇಜು ನಂತರದ ಪಾತ್ರಕ್ಕಾಗಿ 78 ಕೆಜಿ ಹೆಚ್ಚಿಸಿಕೊಂಡಿದ್ದಾರೆ.

ಕನ್ನಡ, ಮರಾಠಿ, ಹಿಂದಿ ಮೂರು ಭಾಷೆಯಲ್ಲೂ ಜಿಲ್ಕ ಬರಲಿದ್ದು, ಮೂರು ಭಾಷೆಯಲ್ಲೂ ರೀಶೂಟ್ ಮಾಡಿದೆ ಚಿತ್ರತಂಡ. ಬಹಳಷ್ಟು ಹೋಮ್ ವರ್ಕ್ ಮಾಡ್ಕೊಂಡು ಸ್ಟ್ರಗಲ್ ಮಾಡ್ಕೊಂಡು ಜಿಲ್ಕ ಮೂಲಕ ಜನರೇಷನ್ ಝಲಕ್ ಕೊಡೋಕೆ ಕವೀಶ್ ಶೆಟ್ಟಿ ತಯಾರಾಗಿದ್ದಾರೆ. ಇನ್ನು ಪ್ರಿಯಾಂಕ ಹೆಗ್ಡೆ ಹಾಗೂ ಲಕ್ಷ್ಯ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.

ಕವೀಶ್ ಶೆಟ್ಟಿ, ಕಿಶೋರ್ ಖೂಬ್ ಹಾಗು ಸ್ನೇಹಿತರೊಂದಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸದ್ಯ ಪೋಸ್ಟರ್ ಮೂಲಕ ಪ್ರೊಮೋಷನ್ ಶುರು ಮಾಡಿಕೊಂಡಿದೆ ಚಿತ್ರತಂಡ. ಪೋಸ್ಟರ್ ಗಳಲ್ಲಿಯೇ ಅಟ್ರ್ಯಾಕ್ಷನ್ ಕ್ರಿಯೇಟ್ ಮಾಡಿರೋ ಕವೀಶ್ ಶೆಟ್ಟಿ ಸದ್ಯದಲ್ಲೇ ಜಿಲ್ಕ‌ ಮೂಲಕ ಥಿಯೇಟರ್ ನಲ್ಲಿ ಝಲಕ್ ತೋರಿಸಲಿದ್ದಾರೆ

ಕವೀಶ್ ಶೆಟ್ಟಿ ಪ್ರೊಡಕ್ಷನ್ಸ್‍ ನಿರ್ಮಿಸುತ್ತಿರುವ ಚಿತ್ರಕ್ಕೆ ಉದಯ ಶೆಟ್ಟಿ, ಕಿಶೋರ್ ಖುಭ್, ಚಂದಾನಿ, ತೇಹಾ ಸಿಂಗ್ ಸೈನಿ, ಮನೀಶ್ ನಾಗ್‍ ದೇವ್‍ ಬಂಡವಾಳ ಹೂಡಿದ್ದಾರೆ  ಪ್ರಾಂಶು ಜಾ ಸಂಗೀತ ಹಾಗೂ ಗಿರಿ ಮಹೇಶ್ ಸಂಕಲನವಿದೆ

-:ಸಮಸ್ಯೆಗಳಿಗೆ ಬೆದರದ ಕವೀಶ್:-

ಹೈಸ್ಕೂಲ್‍ನಲ್ಲಿದ್ದಾಗಲೇ ಚಿತ್ರರಂಗದಲ್ಲಿ ಬೆಳೆಯುವ ಕನಸು ಕಾಣುತ್ತಿದ್ದ ಕವೀಶ್ ಶೆಟ್ಟಿಯವರ ಚಿತ್ರರಂಗದ ಎಂಟ್ರಿ ಸರಾಗವಾಗೇನೂ ಇರಲಿಲ್ಲ  ಮನೆಯ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರಲಿಲ್ಲ   ಪ್ರೌಢಶಾಲಾ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿ, ಹೋಟೆಲ್‍ ಒಂದರಲ್ಲಿ ಮಾಣಿಯಾಗಿ, ರಾತ್ರಿ ಅಲ್ಲಿನ ಮಹಡಿ ಮೆಟ್ಟಿಲುಗಳ ಮೇಲೆ ಮಲಗಿ ಕಾಲಕಳೆದಿದ್ದಾರೆ ಅಷ್ಟೇ ಅಲ್ಲದೆ ರಾತ್ರಿ ಕಾಲೇಜಿನಲ್ಲಿ ಓದಿ, ನಂತರ ಮುಂಬೈ ವಿವಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡದ್ದು, ರೋಚಕ ಬೆಳವಣಿಗೆ

ಮುಂಬೈನ ಪ್ರಖ್ಯಾತ ಸಂಸ್ಥೆಯಲ್ಲಿ ಫಿಲಂ ಮೇಕಿಂಗ್ ತರಬೇತಿ ಪಡೆದು, ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಶಶಾಂಕ್ ಅವರ ಜತೆ, ಮುಂಗಾರು ಮಳೆ-2 ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ

‘ಜಿಲ್ಕ’ ಶೀರ್ಷಿಕೆ ಏಕೆ?

‘ಜಿಲ್ಕ’ ಕನ್ನಡ ಪದವಲ್ಲ.  ಸೋಮಾಲಿಯಾ ಭಾಷೆ ಯಾಗಿದ್ದು, ಪೀಳಿಗೆ ಎಂಬ ಅರ್ಥವನ್ನು ಹೊಂದಿದೆ.  ಜಿಲ್ಕ ಹೆಸರು ತುಂಬಾ ಕ್ಯಾಚಿಯಾಗಿದ್ದರಿಂದ ಅದನ್ನೇ ಬಳಸಿಕೊಂಡೆ ಎಂದು ಕವೀಶ್ ಶೆಟ್ಟಿ ಹೇಳಿಕೊಂಡಿದ್ದಾರೆ.

Leave a Comment