ಜನರಂಗ ನಾಟಕೋತ್ಸವ 26 ರಂದು

ಕಲಬುರಗಿ ಆ 24: ಜನರಂಗ ತಂಡದಿಂದ ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಆಗಸ್ಟ್ 26 ರಂದು ಸಂಜೆ 6.30 ಕ್ಕೆ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ರಸಗಂಗಾಧರ ನಾಟಕ ಪ್ರದರ್ಶನ ನಡೆಯಲಿದೆ ಎಂದು ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಪಿ.ಎಂ ಮಣ್ಣೂರ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಡಾ. ವಿಕ್ರಮವಿಸಾಜಿ ಅವರು  ರಚಿಸಿದ ಈ ನಾಟಕವನ್ನು ಶಂಕರಯ್ಯ ಘಂಟಿ ಅವರು ನಿರ್ದೇಶಿಸಿದ್ದಾರೆ. ಕಾರ್ಯಕ್ರಮವನ್ನು ಸಿಯುಕೆ ಕುಲಪತಿ ಪ್ರೊ ಎಚ್ ಎಂ ಮಹೇಶ್ವರಯ್ಯ ಅವರು ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಅವರು ಆಗಮಿಸಲಿದ್ದು, ರಾಜ್ಯ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ವಿ.ಜಿ ಅಂದಾನಿ ಅವರು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಂಕರಯ್ಯ ಘಂಟಿ ಉಪಸ್ಥಿತರಿದ್ದರು

Leave a Comment