ಜನಮನ ಸೆಳೆದ ಜನಪದ ನೃತ್ಯ ಸಾಂಸ್ಕøತಿಕ ಸ್ಪರ್ಧೆಗಳು

ಧಾರವಾಡ (ಕರ್ನಾಟಕ ವಾರ್ತೆ)ಫೆ.29: ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ಭಾಗವಾಗಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಪು ಸಭಾಭವನದಲ್ಲಿ ನಡೆದ ಜನಪದ ನೃತ್ಯ ಸ್ಪರ್ಧೆಗಳು ಜನಮನ ಸೆಳೆದವು.
ಪ್ರಾಥಮಿಕ ಶಿಕ್ಷಕರ ಫೆಡರೇಶನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಸ್ಪರ್ಧೆಗಳಲ್ಲಿ ಸೋಲು-ಗೆಲುವು ಇರುತ್ತದೆ. ಕೇವಲ ಗೆಲುವನ್ನೆ  ಸರ್ಕಾರಿ ನೌಕರರು ನೆಚ್ಚಿಕೊಳ್ಳಬಾರದು. ಸ್ಪರ್ಧಿಸುವುದು ಮುಖ್ಯವಾಗಿರುತ್ತದೆ ಎಂದರು.
ಸರ್ಕಾರಿ ನೌಕರರು ಉತ್ತಮ ಪ್ರದರ್ಶನ ನೀಡುವ ಮೂಲಕ ಇಂದು ನಡೆಯುತ್ತಿರುವ ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿ ಮುಂದೆ ನಡೆಯುವ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ನೀಡಿ, ರಾಜ್ಯದ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.
ಹಾಸನ ಜಿಲ್ಲೆಯ ಸರ್ಕಾರಿ ನೌಕರರ ತಂಡವು ಉಘೇ ಉಘೇ ಮಾದೇಶ್ವರ ಹಾಡಿನ ಬೀಸು ಕಂಸಾಳೆ  ನೃತ್ಯವನ್ನು ಪ್ರದರ್ಶಿಸುವ ಮೂಲಕ ನೋಡುಗರನ್ನು ಸೆಳೆದರು. ಬೆಳಗಾವಿ ಜಿಲ್ಲೆಯ ಸರ್ಕಾರಿ ನೌಕರರ ತಂಡವು ಚನ್ನಪ್ಪ ಚನ್ನೇಗೌಡ ಕುಂಬರ ಮಾಡಿದ ಕೊಡನವ್ವ.. ಹಾಡಿಗೆ ಹೆಜ್ಜೆ ಹಾಕುವ ಮೂಲಕ ನೋಡುಗರ ಶಿಳ್ಳೆ, ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡರು.

Leave a Comment