ಜನಪದ ಸಾಹಿತ್ಯದಲ್ಲಿ ಪ್ರಚಲಿತ ವಿದ್ಯಮಾನಗಳು ಉಪನ್ಯಾಸ ನಾಳೆ

ಧಾರವಾಡ ಸ.22-: ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪವು ನಾಳೆ ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಜನಪದ ಸಾಹಿತ್ಯದಲ್ಲಿ ಪ್ರಚಲಿತ ವಿದ್ಯಮಾನಗಳು’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ.
ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾಧಿಕಾರಿಗಳು ಡಾ. ಕೆ. ಪ್ರೇಮಕುಮಾರ ಉಪನ್ಯಾಸಕರಾಗಿ ಆಗಮಿಸುವರು. ಧಾರವಾಡ ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕರಾದ ಸಿ.ಯು. ಬೆಳ್ಳಕ್ಕಿ ಅಧ್ಯಕ್ಷತೆ ವಹಿಸುವರು.
ಸಾಹಿತಿಗಳು, ಕಲಾವಿದರು, ಕಲಾಪ್ರೇಮಿಗಳು, ತಾಯಂದಿರು, ವಿದ್ಯಾರ್ಥಿಗಳು, ಆಸಕ್ತರು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಹಾಗೂ ಸಾಹಿತ್ಯ ಮಂಟಪ ಸಂಚಾಲಕರಾದ ಚೈತ್ರಾ ಮೋಹನ ನಾಗಮ್ಮನವರ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Comment