ಜನಧನ ಖಾತೆದಾರರಿಗೆ 500 ರೂ.

 

ಕಲಬುರಗಿ,ಏ.3- ಕೊರೊನಾ ಸಾಂಕ್ರಾಮಿಕ ಸೋಂಕು ಶರವೇಗದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ 500 ರೂ.ನೀಡುವುದಾಗಿ ಘೋಷಣೆ ಮಾಡಿದ ಜನಧನ ಹಣವನ್ನು ವಿತರಿಸಲಾಗುತ್ತಿದೆ

ಇಲ್ಲಿನ ಕೆನರಾ ಬ್ಯಾಂಕ್ ಸಿಬ್ಬಂದಿ ಇಂದು ಜನಧನ ಖಾತೆದಾರರಿಗೆ ತಲಾ 500 ರೂಪಾಯಿಗಳನ್ನು ವಿತರಿಸಿದರು. ಕೆನರಾ ಬ್ಯಾಂಕ್ ನಲ್ಲಿ 8 ಗ್ರಾಮಗಳ 852 ಜನ ಜನಧನ ಖಾತೆದಾರರಿದ್ದು, ಈ 852 ಖಾತೆಗಳಿಗೆ ತಲಾ 500 ರೂಪಾಯಿಯಂತೆ 4.26 ಲಕ್ಷ ರೂಪಾಯಿಗಳನ್ನು ವಿತರಿಸಲಾಯಿತು ಎಂದು ಕೆನರಾ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ಎಜಿಎಂ ಹೆಚ್.ಕೆ.ಗಂಗಾಧರ ತಿಳಿಸಿದರು. ಸುಪರ್ ಮಾರ್ಕೆಟ್ ಬ್ರ್ಯಾಂಚ್ ನ ಚೀಪ್ ಮ್ಯಾನೇಜರ್ ವಿ.ಶ್ಯಾಮ್ ಬಾಬು, ಮ್ಯಾನೇಜರ್ ಸತೀಶ್ ಆರ್.ಚವ್ಹಾಣ ಇದ್ದರು.

Leave a Comment