ಜನತಾ ನ್ಯಾಯಾಲಯದಿಂದ ತುರ್ತು ನ್ಯಾಯ-ನ್ಯಾ. ಕಬ್ಬೂರ

ಮುಂಡಗೋಡ, ಜು 17- ರಾಷ್ಟ್ರೀಯ ಜನತಾ ನ್ಯಾಯಾಲಯವು ಜನರಿಗೆ ತುರ್ತು ನ್ಯಾಯ ಒದಗಿಸುತ್ತದೆ. ಇದರಿಂದ ಸಾಮಾನ್ಯ ಜನರಿಗೆ, ಬಡವರಿಗೆ, ಬೇಗ ನ್ಯಾಯ ದೊರಕಿಸಲು ಸದ್ರಿ ರಾಷ್ಟ್ರೀಯ ಜನತಾ ನ್ಯಾಯಾಲಯ ಸಹಾಯಕವಾಗಿದೆ ಎಂದು ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾದೀಶ ಈರನಗೌಡ ಕಬ್ಬೂರ ಹೇಳಿದರು
ಅವರು  ಇಲ್ಲಿಯ ಸಿವಿಲ್ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ ಇವರ ನಿರ್ದೇಶನದಂತೆ ಮುಂಡಗೋಡ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ರಾಷ್ಟ್ರೀಯ ಜನತಾ ನ್ಯಾಯಾಲಯ ಹಮ್ಮಿಕೊಳ್ಳುವ ಮೂಲಕ ವ್ಯಾಜ್ಯ ಪೂರ್ವ ಪ್ರಕರಣಗಳು, ಹಾಗೂ ನ್ಯಾಯಾಲಯದಲ್ಲಿ  ಬಾಕಿ ಇರುವ ಪ್ರಕರಣಗಳನ್ನು ರಾಜಿಗಾಗಿ ತೆಗೆದುಕೊಳ್ಳುವ ಮೂಲಕ ಮಾತನಾಡಿದರು. ಸಾರ್ವಜನಿಕರು ಮುಂದಿನ ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ರಾಷ್ಟ್ರೀಯ ಜನತಾ ನ್ಯಾಯಾಲಯದ ಪೂರ್ತಿ ಪ್ರಮಾಣದ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ಇದೇ ವೇಳೆ ಎನ್‍ಆಯ್ ಆಕ್ಟ್‍ನ-15 ಪ್ರಕರಣಗಳು, ಎಕ್ಸಿಕ್ಯೂಸನ್ ಪಿಟಿಷನ್‍ನ-26 ಪ್ರಕರಣಗಳು, ಮೂಲ ದಾವಾದ-01 ಪ್ರಕರಣ, ಜನನ-ಮರಣದ-01 ಪ್ರಕರಣ, ಡಿ.ವಿ. ಕಾಯ್ದೆಯ-02 ಪ್ರಕರಣಗಳು ಸೇರಿದಂತೆ ಒಟ್ಟು 45 ಪ್ರಕರಣಗಳನ್ನು ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಎಂ. ಎಸ್. ಬಿಜಾಪೂರ, ಹಾಗೂ ಸಿ. ಎಸ್. ಗಾಣಿಗೇರ, ರಾಪ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಸಂಧಾನಕಾರರಾಗಿ ಉಪಸ್ಥಿತರಿದ್ದರು

Leave a Comment