ಜಡೇಜಾ ಬದಲಿಗೆ ಅಕ್ಷರ್ ಪಟೇಲ್

ಕೊಲಂಬೋ, ಆ. ೯- ಶ್ರೀಲಂಕಾದ ಪಲ್ಯೆಕೆಲೆ ಎಂಬಲ್ಲಿ ಆ. 12 ರಿಂದ ಆರಂಭವಾಗಲಿರುವ 3ನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವಿಶ್ವದ ನಂ. 1 ಆಲ್ ರೌಂಡರ್ ರವೀಂದ್ರ ಜಡೇಜಾ ಬದಲಿಗೆ ಮತ್ತೊಬ್ಬ ಆಲ್ ರೌಂಡರ್ ಅಕ್ಷರ್ ಪಟೇಲ್ ಆಡಲಿದ್ದಾರೆ.

20 ವರ್ಷ ಎಡಗೈ ಸಾಂಪ್ರದಾಯಿಕ ಬೌಲರ್ ಅಕ್ಷರ್ ಈವರೆಗೆ ಭಾರತದ ಪರ 30 ಏಕದಿನ ಪಂದ್ಯ ಮತ್ತು 7 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ.

ಬ್ಯಾಟ್ಸ್‌ಮನ್ ಕ್ರೀಸ್ ಒಳಗಿದ್ದರು. ಅವರತ್ತ ಚೆಂಡೆಸೆದ ತಪ್ಪಿಗಾಗಿ ಜಡೇಜಾ ಅವರಿಗೆ ಒಂದು ಪಂದ್ಯದ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಅವರು ಪಲ್ಯೆಕೆಲೆ ಪಂದ್ಯದಲ್ಲಿ ಆಡುವಂತಿಲ್ಲ.

ಜಡೇಜಾ ತಮ್ಮ ತಪ್ಪನ್ನು ಒಪ್ಪಿಕೊಂಡು ಶಿಕ್ಷೆ ಸ್ವೀಕರಿಸಿದ್ದಾರೆ.

ಹೀಗಾಗಿ ಈಗ ಭಾರತದ ತಂಡದಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯರಹಾನೆ, ರೋಹಿತ್ ಶರ್ಮ, ಆರ್. ಅಶ್ವಿನ್, ಅಕ್ಷರ್ ಪಟೇಲ್, ವೃದ್ಧಿಮಾನ್ ಸಾಹಾ, ಇಶಾಂತ್ ಶರ್ಮ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಅಭಿನವ್ ಮುಕುಂದ್ ಇದ್ದಾರೆ.

Leave a Comment