ಜಡೇಜಾಗೆ ಶುಭಕೋರಿದ ಮೋದಿ..!

ನವದೆಹಲಿ, ಏ ೧೬- ಟೀಂ ಇಂಡಿಯಾದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಕುಟುಂಬದಲ್ಲಿ ಅತ್ತ ತಂದೆ ಹಾಗೂ ಸಹೋದರಿ ಕೈ ಹಿಡಿದರೇ, ಇತ್ತ ಪತ್ನಿ ಬಿಜೆಪಿ ಸೆರ್ಪಡೆಗೊಂಡು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಇದರ ನಡುವೆ ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಆಲ್ರೌಂಡರ್ ರವೀಂದ್ರ ಜಡೇಜಾಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ, ಶುಭಕೋರಿದ್ದಾರೆ.

ಮುಂದಿನ ವಿಶ್ವಕಪ್ ಪಂದ್ಯಾವಳಿಗಾಗಿ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದಿರುವ ರವೀಂದ್ರ ಜಡೇಜಗೆ ಶುಭವಾಗಲಿ ಎಂದು ಮೋದಿ ಟ್ವಿಟ್ ಮಾಡಿದ್ದಾರೆ. ನಿನ್ನೆಯಷ್ಟೇ ಜಡೇಜಾ ತಮ್ಮ ಟ್ವಿಟರ್‌ನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ನರೇಂದ್ರ ಮೋದಿ ಅವರನ್ನ ಬೆಂಬಲಿಸುವುದಾಗಿ ಟ್ವಿಟ್ ಮಾಡಿದ್ದರು.

ಕಳೆದ ತಿಂಗಳು ಜಡೇಜಾ ಪತ್ನಿ ರಿವಾ ಸೊಲಂಕಿ ಬಿಜೆಪಿ ಪಕ್ಷ ಸೇರಿದ್ದರು, ಇನ್ನು ಗುಜರಾತ್‌ನ ಜಾಮ್ ನಗರ ಜಿಲ್ಲೆಯ ಕಲವಾಡ್ ನಲ್ಲಿ ತಂದೆ ಅನಿರುದ್ಧ್ ಸಿನ್ಹ್ ಜಡೇಜಾ ಹಾಗೂ ಅವರ ಸಹೋದರಿ ನೈನಾಬಾ ಜಡೇಜಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪುತ್ರನ ವಿರುದ್ಧವಾಗಿ ನಿಂತಿದ್ದಾರೆ.

ವಿಶ್ವಕಪ್‌ಗಾಗಿ ಆಯ್ಕೆಗೊಂಡ ಕೆಲ ಗಂಟೆಗಳಲ್ಲಿ ಬಿಜೆಪಿಗೆ ಬೆಂಬಲಿಸಿ ಜಡೇಜ ಮಾಡಿ ಪೋಸ್ಟ್ ಮಾಡಿದ್ದಾರೆ. ದೇಶದಲ್ಲಿ ಈಗಾಗಲೇ ಲೋಕಸಭಾ ಚುನಾವಣೆ ನಡೆಯುತ್ತಿರುವುದರ ಮಧ್ಯೆ ಜಡೇಜಾ ಮಾಡಿರುವ ಪೋಸ್ಟ್ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

Leave a Comment