ಜಗ್ಗೇಶ್ ಬುದ್ಧಿಮಾತಿಗೆ ತಲೆಬಾಗಿದ ದಚ್ಚು

ಬೆಂಗಳೂರು.ಆ 27. ಕುರುಕ್ಷೇತ್ರ ಸಿನಿಮಾದ ಭರ್ಜರಿ ಯಶಸ್ಸು ಹಾಗೂ ಸುಯೋಧನನ ಪಾತ್ರಕ್ಕೆ ಪ್ರೇಕ್ಷಕರು ನೀಡಿರುವ ಫುಲ್ ಮಾರ್ಕ್ಸ್ ನಿಂದ ಸಂತಸದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನವರಸ ನಾಯಕ ಜಗ್ಗೇಶ್ ಇತ್ತೀಚೆಗೆ ಶುಭ ಹಾರೈಕೆಯ ಜೊತೆಗೆ ಪ್ರೀತಿಪೂರ್ವಕ ಬುದ್ಧಿಮಾತುಗಳನ್ನು ಹೇಳಿದ್ದರು

 ಹೃದಯ ತುಂಬಿ ಬಂತು ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೇಯಿಂದ ನಿನ್ನ ಭುಜದಮೇಲೆ ಶಾಶ್ವತವಾಗಿ ಉಳಿಯಲಿ

 ಸಾಧ್ಯವಾದಷ್ಟು ಕನ್ನಡದ ಹಳೆ ಕಲಾವಿದರಿಗೆ ನಿನ್ನ ಚಿತ್ರದಲ್ಲಿ ಅವಕಾಶ ಕೊಟ್ಟು ಅವರ ಉದರತುಂಬಿಸುವ ಕಾರ್ಯಮಾಡು ಎಂದು ವಿನಂತಿ..ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು..love you..God bless” ಎಂದಿದ್ದರು

 ಜಗ್ಗೇಶ್ ಅವರ ಈ ಬುದ್ಧಿಮಾತನ್ನು ವಿನಯಪೂರ್ವಕವಾಗಿ ಸ್ವೀಕರಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ “ಹೃದಯಪೂರ್ವಕ ಧನ್ಯವಾದಗಳು ಅಣ್ಣ, ನಿಮ್ಮ ಮಾತಿಗೆ ಬದ್ಧ” ಎಂದು ಹೇಳಿದ್ದಾರೆ

  ಜಗ್ಗೇಶ್ ಅವರು ಕಿಚ್ಚ ಸುದೀಪ್ ಅವರಿಗೂ ಕಿವಿಮಾತು ಹೇಳಿದ್ದು, “ಕಾಯುತ್ತಿದೆ ಕರುನಾಡು ಪೈಲ್ವಾನನಿಗಾಗಿ. ನಿನ್ನ ಯತ್ನ ರಂಜಿಸಲಿ ಕನ್ನಡಿಗರ ಮನವ. ನಿಮ್ಮಗಳ ತಲೆಮಾರಿನಲ್ಲಿ ಶ್ರೀಮಂತವಾಗಲಿ ಕನ್ನಡ ಚಿತ್ರರಂಗ. ಜೊತೆಗೆ ಹಳೆತಲೆಮಾರಿನ ಹಿರಿಯ ಕಲಾವಿದರಿಗು ನಿಮ್ಮ ಜೊತೆ ಹೆಜ್ಜೆಹಾಕಿಸಿ ಅವರ ಉದರಕ್ಕೆ ಆಸರೆಯಾಗಿ ಎಂದು ವಿನಂತಿ  ಕೂಡಿಬಾಳಿದರೆ ಸ್ವರ್ಗ ಕಿವಿಮಾತು” ಎಂದು ಹೇಳಿದ್ದಾರೆ

  ಜಗ್ಗೇಶ್ ಅವರ ಈ ಕಿವಿಮಾತು ಸುದೀಪ್ ಹಾಗೂ ದರ್ಶನ್ ಗೆಳೆತನ ಮತ್ತೆ ಹಿಂದಿನಂತರಿಬೇಕು, ಇಬ್ಬರೂ ಒಂದಾಗಬೇಕು ಎಂಬ ಆಶಯವನ್ನು ಧ್ವನಿಸುತ್ತಿದ್ದ, ಗಾಂಧಿನಗರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ

Leave a Comment