ಜಗಳೂರು ಪ.ಪಂ ಚುನಾವಣೆ; ಪ್ರಚಾರಕ್ಕೆ ತೆರೆ

ಜಗಳೂರು.ಆ.30; ತಾಲ್ಲೂಕು ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರದ ಅಂತಿಮ ದಿನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್ ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಮನೆ ಮನೆಗೆ ತೆರಳಿ ಮತದಾರರಲ್ಲಿ ಮತ ಕೇಳುವುದರ ಮೂಲಕ ಪ್ರಚಾರ ಕೈಗೊಂಡರು.
ಪಟ್ಟಣದ 11,12,13,14 ನೇವಾರ್ಡ್‍ಗಳಲ್ಲಿ ನೂರಾರು ಕಾರ್ಯಕರ್ತರ ಜೋತೆಯಲ್ಲಿ ಪ್ರಚಾರ ಮಾಡಿದರು
ಈ ಸಂದರ್ಭದಲ್ಲಿ ಅವರು ಮಾತನಾಡಿ ಈ ಬಾರಿ ಜಗಳೂರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ನಮ್ಮ ಪಕ್ಷ ಪಟ್ಟಣ ಪಂಚಾಯಿತಿ ಗದ್ದುಗೆ ಹಿಡಿಯುವ ಭರವಸೆ ಇದೆ. ಏಕೆಂದರೆ ನಮ್ಮ ಅವಧಿಯಲ್ಲಿ ಪಟ್ಟಣದ ಅಭಿವೃದ್ದಿಗೆ ಶ್ರಮಿಸಿದ್ದೇವೆ. ಜಗಳೂರು ಪಟ್ಟಣದಲ್ಲಿ ರಸ್ತೆಗಳ ಅಭಿವೃದ್ದಿ. ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕ್‍ಗಳ ನಿರ್ಮಾಣ, ನೂತನ ಪಟ್ಟಣ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ಅನುದಾನ ಜಗಳೂರು ಕೆರೆ ಏರಿಯ ದ್ವಿಮುಖ ರಸ್ತೆ ನಿರ್ಮಾಣ, ಪಟ್ಟಣದಲ್ಲಿ ರಸ್ತೆ ಅಗಲೀಕರಣ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇವೆ ಹಾಗಾಗಿ ನಮ್ಮ ಆಡಳಿತವನ್ನು ಮತದಾರು ಮೆಚ್ಚಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವುದರ ಮೂಲಕ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು,
ಬಹಿರಂಗ ಪ್ರಚಾರದಲ್ಲಿ ತಾಲ್ಲೂಕು ಕಾಂಗ್ರಸ್ ಘಟಕದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ ಪಾಲಯ್ಯ, ಕೆಪಿಸಿಸಿ ಸದಸ್ಯಸತೀಶ್ ರೆಡ್ಡಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕಲ್ಲೇಶ್ ರಾಜು ಪಟೇಲ್, ಶೇಖರಪ್ಪ, ಮುಖಂಡರುಗಳಾದ ತಿಮ್ಮರಾಯಪ್ಪ,ದೇವೆಂದ್ರಪ್ಪ,ತ್ಯಾಗರಾಜು, ಕಾನನಕಟ್ಟೆ ಪ್ರಭು, ಎಸ್ ಮಂಜುನಾಥ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Leave a Comment