ಜಗಳೂರು ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ; ಡಿ.ವಿ.ನಾಗಪ್ಪ

ಜಗಳೂರು.ಆ.9; ಪಟ್ಟಣದ 18 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಟಿ.ಗುರುಸಿದ್ದನಗೌಡರು ಈ ಹಿಂದೆ ಮಾಡಿದ್ದ ಅಭಿವೃದ್ಧಿ ಕಾರ್ಯಗಳು, ಸಂಸದ ಜಿ.ಎಂ.ಸಿದ್ದೇಶ್ವರ್ ಸಹಕಾರ, ಐದು ವರ್ಷದ ಕಾಂಗ್ರೇಸ್ ಪಕ್ಷದ ಆಡಳಿತ ವೈಪಲ್ಯವೇ ಬಿಜೆಪಿ ವರದಾನ ಆಗಲಿದೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ವಿ.ನಾಗಪ್ಪ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಅಧಿಕಾರ ಇದ್ದ ಸಂದರ್ಭದಲ್ಲಿ ಪಟ್ಟಣಕ್ಕೆ ಸೂಳೆಕೆರೆ ನೀರು, ದ್ವಿಮುಖ ರಸ್ತೆ, ಬಸ್‍ನಿಲ್ದಾಣ , ಪಟ್ಟಣದ ವಾರ್ಡುಗಳಲ್ಲಿ ರಸ್ತೆ ನಿರ್ಮಾಣ, ಹಾಗೂ ಒಳಚರಂಡಿ ವ್ಯವಸ್ಥೆಗೆ 2012-13 ಸಾಲಿನಲ್ಲಿ ಸರ್ವೆಹಾಕುವ ಮೂಲಕ ಹಣ ಮೀಸಲಿಟ್ಟು ಜಮೀನು ಖರೀದಿ ಮಾಡಲಾಗಿತ್ತು.ಆದರೆ ಕಾಂಗ್ರೇಸ್ ಶಾಸಕರು ಆಡಳಿತದಲ್ಲಿದ್ದ ವೇಳೆ ಪಟ್ಟಣ ಪಂಚಾಯಿತಿಯವರು ಇದ್ದರೂ ಸಹ ಟೌನ್‍ನಲ್ಲಿ ಸಮರ್ಪಕವಾಗಿ ಕುಡಿಯುವ ನೀರು ವಿತರಣೆ ಮಾಡದೇ ಅಸಡ್ಡೆ ಭಾವನೆ ತೋರಿದ ಕಾಂಗ್ರೇಸ್‍ಗೆ ಸರಿಯಾದ ಪಾಠ ಕಲಿಸಲಿದ್ದಾರೆ. ಈ ಚುನಾವಣೆಯಲ್ಲಿ ಅಭಿವೃದ್ಧಿಗೆ ಬಿಜೆಪಿಗೆ ಜನ ಬೆಂಬಲಿಸಲಿದ್ದಾರೆ ಎಂದರು.ನಾಳೆ ಸಭೆ: ತಾಲ್ಲೂಕು ಪ್ರಧಾನಕಾರ್ಯದರ್ಶಿ ಜೆ.ವಿ.ನಾಗರಾಜು ಮಾತನಾಡಿ ಆ.10 ರಂದು ಪಟ್ಟಣದ ವಾಲ್ಮಿಕಿ ಸಮುದಾಯ ಭವನದಲ್ಲಿ ಪಟ್ಟಣದ ಆಕಾಂಕ್ಷಿಗಳು, ಪ್ರಮುಖರು ,ಬಿಜೆಪಿ ಕಾರ್ಯಕರ್ತರ ಸಭೆ ಶಾಸಕ ಎಸ್.ವಿ.ರಾಮಚಂದ್ರ ಸಮ್ಮುಖದಲ್ಲಿ ನಡೆಯಲಿದೆ. ಬಿಜೆಪಿ ಆಕಾಂಕ್ಷಿಗಳು ಪ್ರತಿವಾರ್ಡನಲ್ಲೂ ಒಂದೊಂದು ಕ್ಷೇತ್ರಕ್ಕೆ ಐದಾರು ಅಭ್ಯರ್ಥಿಗಳು ಅರ್ಜಿಗಳನ್ನು ಪಡೆದಿದ್ದಾರೆ. ನಾಳೆ ನಡೆಯುವ ಸಭೆಯಲ್ಲಿಯೂ ಸಹ ಅರ್ಜಿಗಳನ್ನು ಪಡೆಯಬಹುದು. ಈ ಬಾರಿಯ ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಬರಲಿದೆ ಎಂದು ಭವಿಷ್ಯ ನುಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಆರ್.ತಿಪ್ಪೇಸ್ವಾಮಿ ಮಾತನಾಡಿ ಕಾಂಗ್ರೇಸ್ ಶಾಸಕರಿದ್ದು ,ಕಾಂಗ್ರೇಸ್ ಆಡಳಿತದಲ್ಲಿದ್ದರೂ ಸಹ 20 ದಿನಕ್ಕೊಬ್ಬ ಅಧ್ಯಕ್ಷರು ,ಉಪಾಧ್ಯಕ್ಷರ ನೇಮಕ ಮಾಡುವ ಮೂಲಕ ಕಿತ್ತಾಟ , ಐದು ವರ್ಷದಲ್ಲಿ ನಾಲ್ಕು ಮುಖ್ಯಾಧಿಕಾರಿಗಳ ಬದಲಾವಣೆ, ಏಳೆಂಟು ತಿಂಗಳಿಗೊಮ್ಮೆ ಸಾಮಾನ್ಯ ಸಭೆ, ಟೆಂಡರ್ ಆದರೂ ಕೆಲಸಗಳು ಮುಗಿಯದೇ ವಿಳಂಬಧೋರಣೆ, ಕಾಮಗಾರಿಗಳ ಅವ್ಯವಹಾರ, ಪಟ್ಟಣಕ್ಕೆ ಸರಿಯಾಗಿ ನೀರು ವಿತರಣೆ ಮಾಡದೇ ನಿರ್ಲಕ್ಷೆ. ಕೆರೆಯಂಗಳದ ಜಾಗವೆಂದು ಇಲ್ಲಿನ ನಿವಾಸಿಗಳ ಮನೆ ದ್ವಂಸಗೊಳಿಸಿ ಒಕ್ಕಲೆಬ್ಬಿಸಿ ಮನೆ ನೀಡುತ್ತೇವೆ ಎಂದು ಬೀದಿಗೆ ನಿಲ್ಲಿಸಿ ಇಲ್ಲಿನ ಜನತೆ ಮಾಡಿರುವ ದ್ರೋಹವನ್ನು ಜನರು ಮರೆತಿಲ್ಲ. ಕಾಂಗ್ರೇಸ್ ಪಕ್ಷಕ್ಕೆ ಪಟ್ಟಣದ ಜನತೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹುಲಿಕುಂಟಿ ಶ್ರೇಷ್ಠಿ ಹಾಜರಿದ್ದರು.

Leave a Comment