ಜಗಳೂರು; ಗ್ರಾಮೀಣ ಭಾಗಗಳಿಗೆ ಬಸ್ ಸೌಲಭ್ಯ

ಜಗಳೂರು.ಆ.25; ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ತಾಲ್ಲೂಕಿನ ಗ್ರಾಮೀಣ ಭಾಗಗಳ ಎಲ್ಲಾ ಹಳ್ಳಿಗಳಿಗೂ ಬಸ್ ಸೌಲಭ್ಯ ಹಾಗೂ ಪ್ರಸ್ತುತ ದಾವಣಗೆರೆ-ಜಗಳೂರು ಮಾರ್ಗದಲ್ಲಿ ಸಂಚರಿಸುತ್ತಿರುವ ಸರ್ಕಾರಿ ಬಸ್ ಗಳ ಸಿಬ್ಬಂದಿ ಮೇಲೆ ನೆಡೆಸುತ್ತಿರುವ ದೌರ್ಜನ್ಯ ತಡೆಗಟ್ಟುವಂತೆ ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟಗಳು ತಹಶೀಲ್ದಾರ್‍ಗೆ ಮನವಿಪತ್ರ ಸಲ್ಲಿಸಿದರು.

ಎಐ ಎಸ್ ಎಫ್,ಡಿವೈಎಸ್ ಎಫ್,ಎಸ್ ಎಫ್‍ಐ,ಡಿಎಸ್‍ಎಸ್, ಸೇರಿದಂತೆ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸ್ಥಳಿಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಪ್ರತಿಭಟನೆ ನೆಡೆಸದೆ ತಹಶೀಲ್ದಾರ್ ರವರಿಗೆ ಮನವಿಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಮಾತನಾಡಿ ತಾಲ್ಲೂಕಿನ ವಿದ್ಯಾರ್ಥಿಗಳು, ನೌಕರರು,ರೈತರು ,ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಯ ದಾವಣಗೆರೆ ವಿಭಾಗದಿಂದ 8 ಬಸ್ ಗಳನ್ನು ಪ್ರತಿದಿನ ದಾವಣಗೆರೆ-ಜಗಳೂರು ಮಾರ್ಗದಲ್ಲಿ ಓಡಿಸುತ್ತಿರುವುದು ಶ್ಲಾಘನೀಯ ಹಾಗೂ ಸ್ವಾಗತರ್ಹ ವಿಷಯವಾಗಿದೆ.

ತಾಲ್ಲೂಕಿನ ಗ್ರಾಮೀಣ ಭಾಗಗಳಿಗೂ ಗ್ರಾಮೀಣ ಬಸ್ ಸೇವೆ ಒದಗಿಸುವಂತೆ ಈ ಹಿಂದೆ ಹಲವು ಬಾರಿ ಪ್ರತಿಭಟನೆಗಳ ಮೂಲಕ ಹಲವು ವಿದ್ಯಾರ್ಥಿ ಪರ ಸಂಘಟನೆಗಳು ಹಕ್ಕೊತ್ತಾಯ ಸಲ್ಲಿಸಿದ್ದರೂ ಸಹ,ಈಗ ಕೇವಲ ಜಗಳೂರಿಗೆ ಮಾತ್ರ ಬಸ್ ವ್ಯವಸ್ಥೆ ಕಲ್ಪಿಸಲಾಗಿಸದೆ,ಕೂಡಲೇ ಗ್ರಾಮೀಣ ಪ್ರದೇಶಗಳಿಗೂ ಬಸ್ ಸೇವೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೇ ಪ್ರಸ್ತುತ ಜಗಳೂರು- ದಾವಣಗೆರೆ ಮಾರ್ಗದಲ್ಲಿ ಸಂಚರಿಸುತ್ತಿರುವ ಸರ್ಕಾರಿ ಬಸ್ ಸಿಬ್ಬಂದಿಗೆ, ಇಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಬ್ಬಾಳಿಕೆ ನೆಡೆಸುತ್ತಿದ್ದು,ಅಂತಹವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ದಂಡಾಧಿಕಾರಿಗಳಿಗೆ ಒತ್ತಾಯಿಸಿದರು.

ಎಐಎಸ್‍ಎಫ್ ಜಿಲ್ಲಾ ಅಧ್ಯಕ್ಷ ಮಾದಿಹಳ್ಳಿ ಮಂಜಪ್ಪ,ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಮಹಲಿಂಗಪ್ಪ,ಎಐಎಸ್‍ಎಫ್ ರಾಜ್ಯ ಖಜಾಂಚಿ ವೀಣಾ,ಪದವಿಧರ ಪರಿಷತ್ ಲಿಂಗರಾಜ್,ದಸಂಸ ಸತೀಶ್,ರಾಜಪ್ಪ,ಗೋಣಿಗೌತಮ್,ಸಿದ್ದೇಶ್, ತಿಪ್ಪೇಸ್ವಾಮಿ, ಅರುಣ್ ಕುಮಾರ್ ಮತ್ತಿತರರು ಹಾಜರಿದ್ದರು.

Leave a Comment