ಜಗತ್ ಕಿಲಾಡಿ ಜಾಗೃತಿ

ಪ್ರಕಾಶ್

ಆಸೆಯೇ ದು:ಖ:ಕ್ಕೆ ಮೂಲ ಎನ್ನುವ ಗಾಧೆ ಯಾವಾಗಲು ಪ್ರಸ್ತುತ ದುರಾಸೆಗೆ ಮೋಸ ಹೋಗುವವರು ಮೋಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಮೋಸ ಚಂಚನೆ ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಕೆಲವು ಸಂದರ್ಭಗಳಲ್ಲಿ ಊಹಿಸಲು ಆಸಾಧ್ಯ ಯಾವುದೇ ರೀತಿಯ ಮೋಸವಾದರೂ ಅದರ ಹಿಂದೆ ದುರಾಸೆ ಇರುವುದಂತೂ ಸುಳ್ಳಲ್ಲ ಇಂತಹುದೆ ಪರಿಕಲ್ಪನೆ ಹೊಂದಿರುವ ’ಜಗತ್‌ಕಿಲಾಡಿ’ ಚಿತ್ರವು ಬಿಡುಗಡೆಯಾಗಲು ಸಜ್ಜಾಗಿದೆ.

jagath-kiladi_125

ಹದಿನೈದು  ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ನಿರಂಜನ್‌ಶೆಟ್ಟಿಕುಮಾರ್, ಕತೆಯಲ್ಲಿ ಸುಚೇಂದ್ರಪ್ರಸಾದ್, ರಂಗಾಯಣರಘು ನಾಯಕರುಗಳಾಗಿ, ವಿಲನ್ ಆಗಿ ನನ್ನ ಮುಖಾಂತರ ಚಿತ್ರವು  ತೆರೆದುಕೊಳ್ಳುತ್ತದೆ.

ನಿರ್ಮಾಪಕ ಲಯನ್ ಆರ್.ರಮೇಶ್‌ಬಾಬು ಅವರ ಗೆಳಯರೊಬ್ಬರು ಆನೇಕಲ್‌ದಲ್ಲಿ ಬೆಳ್ಳಿ ನಾಣ್ಯದ ಮೂಟೆ ಕೊಡುವುದಾಗಿ ನಂಬಿಸಿ ವಂಚನೆಗೊಳಗಾಗಿದ್ದರು ಇದೇ ರೀತಿಯ ವಂಚನೆ ನಡೆದ ಕತೆಯನ್ನೊಳಗೊಂಡ ಚಿತ್ರವು ತಮಿಳಿನಲ್ಲಿ ಬಂದಿತ್ತು.ರೈಸ್ ಪುಲ್ಲಿಂಗ್ ವ್ಯವಹಾರದ ಕುರಿತ ಕತೆಯು ಇಲ್ಲಿ ನಡೆದಂತೆ ಇರುವುದರಿಂದ ಕನ್ನಡಕ್ಕೆ ಸೂಟ್ ಆಗುತ್ತಿರುವ ಕಾರಣ ಹಣ ಹೊಡಿದ್ದು ಅಲ್ಲದೆ ನ್ಯಾಯಧೀಶರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ನಿರ್ಮಾಪಕ ಲಯನ್ ಆರ್.ರಮೇಶ್‌ಬಾಬು.

jagath-kiladi_136ಎಲ್ಲಿಯವರೆಗೆ ವಂಚನೆಗೆ  ಒಳಗಾಗುವವವರು ಇರುತ್ತಾರೋ ಅಲ್ಲಿಯವರೆಗೆ ಮೋಸಗಾರರು ಇದ್ದೇ ಇರುತ್ತಾರೆ ಇದರ ಬಗ್ಗೆ ಜನ ಸದಾ ಎಚ್ಚರಿಕೆಯಿಂದ ಇರಬೇಕೆಂದು ಜಾಗೃತಿ ಮೂಡಿಸುವ ಪ್ರಯತ್ನವನ್ನು ಜಗತ್ ಕಿಲಾಡಿ ಚಿತ್ರದಲ್ಲಿ ಮಾಡಲಾಗಿದೆ ಎಂದರು ನಿರ್ದೇಶಕ ಆರವ್.ಬಿ.ಧೀರೇಂದ್ರ. ಹದಿನೈದು  ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ನಿರಂಜನ್‌ಕುಮಾರ್ ಶೆಟ್ಟಿ, ಕತೆಯಲ್ಲಿ ಸುಚೇಂದ್ರಪ್ರಸಾದ್, ರಂಗಾಯಣರಘು ನಾಯಕರುಗಳಾಗಿ, ವಿಲನ್ ಆಗಿ ನನ್ನ ಮುಖಾಂತರ ಚಿತ್ರವು  ತೆರೆದುಕೊಳ್ಳುತ್ತದೆ.

ಪ್ರತಿಯೊಬ್ಬರು ಅವರ ಮಟ್ಟದಲ್ಲಿ ಕಿಲಾಡಿಗಳು ಆಗಿರುತ್ತಾರೆ. ಎಲ್ಲರಿಗೂ ಚೆಳ್ಳೆಹಣ್ಣು ತಿನ್ನಿಸುವವನಿಗೆ ಜಗತ್ ಕಿಲಾಡಿ ಅಂತ ಕರೆಯುತ್ತಾರೆ ಅದೇ ಚಿತ್ರದಲ್ಲಿದೆ.

ಸಂಗೀತ ನಿರ್ದೇಶಕ  ಗಿರಿಧರ್ ದಿವಾನ್ ಮತ್ತು  ನಾಯಕನ ಗುರುಗಳಾದ ವಿ.ಮನೋಹರ್ ಆಗಮಿಸಿ ಚಿತ್ರದ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿ  ಚಲದಲ್ಲಿ  ತ್ರಿವಿಕ್ರಮರೆಂದು ಶಿಷ್ಯನ ಸಾಧನೆಯನ್ನು ಕೊಂಡಾಡಿದರು.ರಿಯಲ್‌ನಲ್ಲಿ ಮೋಸ ಹೋಗಿರುವ ರವಿಚೇತನ್‌ಗೆ ರೀಲ್‌ನಲ್ಲಿ ಮೋಸ ಮಾಡುವ ಪಾತ್ರ ಸಿಕ್ಕಿದ್ದರಿಂದ ಸೇಡು ತೀರಿಸಿಕೊಂಡರಂತೆ.

ಮೂಲ  ಸಿನಿಮಾವನ್ನು  ಮೂರು ಬಾರಿ ವೀಕ್ಷಿಸಿ, ಇದರಲ್ಲಿ  ನಟಿಸಬಾರದೆಂದು  ತೀರ್ಮಾನಿಸಿ ನಂತರ ಒಳ್ಳೆ  ಪಾತ್ರ ಇರುವುದರಿಂದ ಒಂದು ಕೈ ನೋಡಿಬಿಡುವ ಎಂದು ಧೈರ್ಯ ಮಾಡಿ ಕ್ಯಾಮರ ಮುಂದೆ ನಿಂತೆ ಎಂದರು ನಾಯಕಿ ಅಮಿತಾಕುಲಾಲ್. ಅಂದಹಾಗೆ ಚಿತ್ರವು ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

Leave a Comment