ಜಗತ್ತಿನ ಅತಿ ದೊಡ್ಡ ಸುರಂಗ: ಒಂದಕ್ಕಿಂತ ಒಂದು ದೊಡ್ಡದು ಕಠಿಣ ಹಾದಿಯ ದುರ್ಗಮ ನೋಟ

ಜಗತ್ತಿನ ವಿವಿದೆಡೆ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ನಾನಾ ಮಾರ್ಗಗಳನ್ನು ಬಳಸಲಾಗುತ್ತಿದೆ. ವಿಮಾನ, ರಸ್ತೆ, ಜಲ ಸಾರಿಗೆ ಯಷ್ಟೇ ಪ್ರಮುಖವಾದದು, ಸುರಂಗ ಮಾರ್ಗ.

chutukui5

ದುರ್ಗಮ ಹಾದಿಯಲ್ಲಿ ನೂರಾರು ಅಡಿ ಭೂಮಿಯ ಆಳದಲ್ಲಿ ಸುರಂಗ ಮಾಡಿ ಅದರಲ್ಲಿ ಸರಕು ಮತ್ತು ಸಾಗಣೆಯ ವಾಹನ ಸಂಚಾರ ಮಾಡುವುದು ಸುಲಭದ ಕೆಲಸವಲ್ಲ. ಕಠಿಣವಾದ ಹಾದಿಯಲ್ಲಿ, ಬೆಟ್ಟ ಗುಡ್ಡಗಳನ್ನು ಅಗೆದು ಕಿಂಚಿತ್ತೂ ತೊಂದರೆಯಾಗದಂತೆ ಸುರಂಗ ಮಾರ್ಗ ನಿರ್ಮಿಸಲಾಗಿದೆ.
ಜಗತ್ತಿನ ಅಂತಹ ಅತಿದೊಡ್ಡ ಸುರಂಗಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಲೆರ್ಡರಲ್ ಸುರಂಗ ನಾರ್ವೆಯಲ್ಲಿರುವ ಈ ಸುರಂಗ ಮಾರ್ಗ ಲೆರ್ಡರಲ್ ಮತ್ತು ಓರ್ಲಾಂಡ್ ನಡುವೆ ಸಂಪರ್ಕ ಕಲ್ಪಿಸಲಾಗಿದೆ. ೧೭೫ ರಿಂದ ೨೦೦ ಕಿ.ಮೀ. ಉದ್ದದ ಮಾರ್ಗ ಈ ಸುರಂಗ ದಿಂದ ಬಲು ಈಸಿಯಾಗಿದೆ.

chutuku4

ಲೋಚ್‌ಬರ್ಗ್ ಬೇಸ್  ಸ್ವಿಟ್ಜರ್ಲ್ಯಾಂಡ್ ನಲ್ಲಿರುವ ಈ ಸುರಂಗ ೩೪.೬ ಕಿ.ಮೀ ಉದ್ದವಿದ್ದು ರೈಲುಗಾಗಿ ನಿರ್ಮಾಣ ಮಾಡಲಾಗಿದೆ. ಭೂಮಿಯಿಂದ ೪೦೦ ಮೀಟರ್ ಅಂದರೆ ಸರಿ ಸುಮಾರು ೧೩೧೨ ಅಡಿ ಆಳದಲ್ಲಿ ಈ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ.

ಚಾನೆಲ್ ಸುರಂಗ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ಸಂಪರ್ಕ ಕಲ್ಪಿಸುವ ಈ ಸುರಂಗ ಜಗತ್ತಿನಲ್ಲಿಯೇ ಇಂಜಿನಿಯರ್‌ಗಳಿಗೆ ಸವಾಲಾದ ಸುರಂಗ ನಿರ್ಮಾಣ ಕಾರ್ಯಗಳಲ್ಲಿ ಒಂದು. ಹೈ ಸ್ಪೀಡ್ ರೈಲು ಮಾರ್ಗಕ್ಕಾಗಿ ಈ ಸುರಂಗವನ್ನು ನಿರ್ಮಾಣ ಮಾಡಲಾಗಿದೆ. ೫೦.೫ ಕಿ.ಮೀ ಉದ್ದವಿದೆ.

chutuku3

ಸೈಕನ್ ಸುರಂಗ ಜಪಾನ್ ನಲ್ಲಿರುವ ೫೩.೯ ಕಿ.ಮೀ. ಸುರಂಗ ಅತಿದೊಡ್ಡ ಸುರಂಗಗಳಲ್ಲಿ ಒಂದು. ಹೊನ್ಷು ದ್ವೀಪ ಮತ್ತು ಹೊಕೈಡೊ ದ್ವೀಪದ ನಡುವೆ ಈ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ.

chutuku2

ಗೊಥಾರ್ಡ್ ಬೇಸ್ ಸ್ವಿಟ್ಜರ್ಲ್ಯಾಂಡ್ ನಲ್ಲಿರುವ ಈ ಸುರಂಗ ಮಾರ್ಗದಲ್ಲಿ ಬಹು ಉಪಯೋಗದ ಮಾರ್ಗಗಳಲ್ಲಿ ಒಂದಾಗಿದೆ. ರೈಲು ಸೇವೆಯ ಜೊತೆಗೆ ಸರಕು ಸೇವೆಯ ಮಾರ್ಗವನ್ನು ಒಳಗೊಂಡಿದೆ.

Leave a Comment