ಜಖಾತಿ ಹಣ ವಸೂಲಿಗಾಗಿ ವೃದ್ದನ ಮೇಲೆ ದಬ್ಬಾಳಿಕೆ

ದಾವಣಗೆರೆ.ಅ.9; ಜಖಾತಿ ಹಣ ನೀಡದಿದ್ದಕ್ಕೆ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದ ವೃದ್ದನ ತಕ್ಕಡಿ ತೆಗೆದುಕೊಂಡು ಹೋದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ನಗರದ ಕೆ ಆರ್ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರಗಳ ಹಾಗೂ ರೈತರು ತಮ್ಮ ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಮಾರಾಟ ಮಾಡಲು ಬರುತ್ತಾರೆ. ಅಂತವರ ಬಳಿ ಪಾಲಿಕೆ ವತಿಯಿಂದ ನೆಲದ ಶುಲ್ಕವನ್ನು ಪಡೆಯಲು ಟೆಂಡರ್ ಪಡೆಯಲಾಗಿದೆ. ಆದರೆ ಕೆಲ ಟೆಂಡರ್‍ದಾರರು ವ್ಯಾಪಾರಸ್ಥರ ಹಾಗೂ ರೈತರ ಮೇಲೆ ದರ್ಪ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  ಯುವಕರ ಗುಂಪೊಂದು ವ್ಯಾಪಾರ ಮಾಡುತ್ತಿದ್ದ ವೃದ್ದನೊಬ್ಬನ ಮೇಲೆ ದರ್ಪ ತೋರಿದ್ದು.. ವ್ಯಾಪಾರ ಇನ್ನು ಆಗಿಲ್ಲ ಅಮೇಲೆ ಜಖಾತಿ ಹಣ ನೀಡುತ್ತೇವೆ ಎಂದು ಪರಿಪರಿಯಾಗಿ ಕೇಳಿಕೊಂಡರು ತಕ್ಕಡಿಯನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ವೃದ್ದ ನಿಸ್ಸಾಹಯಕತನದಿಂದ ಹಣವನ್ನು ನೀಡಿ ಕಳಿಸಿದ್ದಾರೆ.. ಜಕಾತಿ ಶುಲ್ಕವನ್ನು ವ್ಯಾಪಾರವಾದ ನಂತರ ಪಡೆಯಬೇಕು.. ಅದನ್ನು ಬಿಟ್ಟು ವ್ಯಾಪಾರಕ್ಕಿಂತ ಮೊದಲೇ ಹಣ ವಸೂಲಿ ಮಾಡಲು ಯುವಕರ ಗುಂಪು ದರ್ಪ ಮೆರೆದಿದ್ದಾರೆ… ಇನ್ನು ಯುವಕರ ದಬ್ಬಾಳಿಕೆಯ ದೃಶ್ಯ ಮೊಬೈಲ್ ಕ್ಯಾಮರಾ ದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ…

Leave a Comment