ಜಂಬಣ್ಣ ಅಮರಚಿಂತರಿಗೆ ಮಡಿವಾಳ ಸಮಾಜದಿಂದ ಶ್ರದ್ಧಾಂಜಲಿ

ರಾಯಚೂರು.ಫೆ.17- ಈ ಭಾಗದ ಹಿರಿಯ ಸಾಹಿತಿ ಹಾಗೂ ಮಡಿವಾಳ ಸಮಾಜದ ಹಿರಿಯರಾದ ಜಂಬಣ್ಣ ಅಮರಚಿಂತ ಅವರಿಗೆ ಜಿಲ್ಲಾ ಮಡಿವಾಳ ಸಮಾಜದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದಿ.15 ರಂದು ಮಡಿವಾಳ ಸಮಾಜದ ಸಮುದಾಯ ಭವನದಲ್ಲಿ ಸಭೆ ನಡೆಸಿ ಶ್ರದ್ಧಾಂಜಲಿ ಕೋರಲಾಯಿತು. ಜಿಲ್ಲಾಧ್ಯಕ್ಷ ಜಿ.ಸುರೇಶ ಮಾತನಾಡಿ, ಜಂಬಣ್ಣ ಅಮರಚಿಂತ ಅವರು ಮಡಿವಾಳ ಸಮಾಜದ ಮಾರ್ಗದರ್ಶಕ ಮತ್ತು ಸಲಹೆಗಾರರಾಗಿದ್ದರು. ಸಮಾಜದ ಬಗ್ಗೆ ಅತ್ಯಂತ ಕಳಕಳಿಯುಳ್ಳವರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಸುವ ಮೂಲಕ ಸಮಾಜಕ್ಕೆ ಕೀರ್ತಿ ತಂದಿದ್ದರು.

ಸಾಹಿತ್ಯ ಲೋಕದಲ್ಲಿ ಇವರ ಸಾಧನೆ ಅಘಾದವಾಗಿದೆಂದು ಸ್ಮರಿಸಿದರು. ಇದೇ ರೀತಿ ಮುತ್ತಣ್ಣ ಅವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸುವ ಮೂಲಕ ಇಬ್ಬರಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಭೆಯಲ್ಲಿ ಹಿರಿಯ ಮುಖಂಡರಾದ ಜಿ.ಶಿವಮೂರ್ತಿ, ಟಿ.ಮಲ್ಲೇಶ, ಮಟಮಾರಿ ಹುಸೇನಪ್ಪ, ವೆಂಕಟೇಶ, ಹೆಚ್.ಶೇಖರ, ರಾಜಶೇಖರ ಅಮರಚಿಂತ ಅವರು ಮಾತನಾಡಿದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಈ.ಚಂದಪ್ಪ, ಎ.ಚಂದ್ರಶೇಖರ, ಜಿ.ವೆಂಕಟೇಶ, ನರಸಪ್ಪ ದುರ್ಗಪ್ಪ, ಜಿ.ಶಂಕರ, ಸೂಗಪ್ಪ, ಶಾಂತಕುಮಾರ, ಮುನಿಸ್ವಾಮಿ, ಬಸವರಾಜ ಗುಬ್ಬಲ್, ಆನಂದ, ಅಡಿವೆಪ್ಪ, ರಮೇಶ, ಕೊಟ್ರೆಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment