ಜಂಗಮಶೆಟ್ಟಿ ರಂಗಪ್ರಶಸ್ತಿ ಪ್ರದಾನ 18 ರಂದು

ನಮ್ಮ ಪ್ರತಿನಿಧಿಯಿಂದ)

ಕಲಬುರಗಿ ಜು 11: ರಂಗ ಸಂಗಮ ಕಲಾವೇದಿಕೆ ಕೊಡಮಾಡುವ  ಎಸ್ ಬಿ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 18 ರಂದು ಬೆಳಿಗ್ಗೆ 10.30 ಕ್ಕೆ ನಗರದ ಜಿಲ್ಲಾ ಕೋರ್ಟ್ ಬಳಿ ಇರುವ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯಲಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಎಲ್ ಬಿ ಕೆ ಆಲ್ದಾಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಾಲಿನ ಎಸ್ ಬಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ವೃತ್ತಿರಂಗ ಭೂಮಿಯ ಹಿರಿಯ ಕಲಾವಿದೆ ಸರಸ್ವತಿ ( ಜುಲೇಖಾ ಬೇಗಂ) ಅವರನ್ನು ಆಯ್ಕೆ ಮಾಡಲಾಗಿದೆ.ಕೊಪ್ಪಳ ಮೂಲದ ಜುಲೇಖಾ ಬೇಗಂ ಅವರು ಸದ್ಯ ಮೈಸೂರಿನಲ್ಲಿ ವಾಸವಾಗಿದ್ದಾರೆ.

ಖ್ಯಾತ ಚಲನಚಿತ್ರ ನಿರ್ದೇಶಕ ಟಿ ಎಸ್ ನಾಗಾಭರಣ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಸಂಸ್ಕøತ ವಿವಿ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶ  ಆಗಮಿಸುವರು. ಡಾ ಅಪ್ಪಗೆರೆ ಸೋಮಶೇಖರ ಪ್ರಶಸ್ತಿ ಪುರಸ್ಕøತರ ಕುರಿತು ,ಶಿವರಂಜನ್ ಸತ್ಯಂಪೇಟೆ ಎಸ್ ಬಿ ಜಂಗಮಶೆಟ್ಟಿ ಅವರ ಕುರಿತು ಮಾತನಾಡುವರು. ಹಿರಿಯ ಸಾಹಿತಿಗಳಾದ ಪ್ರೊ ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸುವರು. ಡಾ ಛಾಯಾ ಭರತನೂರ ಹಾಗೂ ಸಂಗಡಿಗರಿಂದ ಗೀತಗಾಯನ ಪ್ರಸ್ತುತ ಪಡಿಸುವರು.ಸಂಜೆ 6 ಕ್ಕೆ ಸಾಗರದ ಸ್ಪಂದನ ತಂಡದ ಎಂವಿ ಪ್ರತಿಭಾ ಅವರಿಂದ ಊರ್ಮಿಳಾ ಎಂಬ ಏಕವ್ಯಕ್ತಿ ರಂಗ ಪ್ರಯೋಗವಿದೆ ಎಂದು ವಿವರಿಸಿದರು

ಸುದ್ದಿಗೋಷ್ಠಿಯಲ್ಲಿ ಡಾ ಸುಜಾತಾ ಜಂಗಮಶೆಟ್ಟಿ,ಗವೀಶ ಹಿರೇಮಠ, ಬಿ.ಎಚ್ ನಿರಗುಡಿ ಇದ್ದರು.

Leave a Comment