ಛಪಾಕ್ ಚಿತ್ರದ ಎಲ್ಲಾ ಟಿಕೆಟ್‌ಗಳನ್ನು ಬುಕ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

ಕಲಬುರಗಿ, ಜ 11 – ಬಾಲಿವುಡ್ ಡಿಂಪಲ್‌ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್ ಚಿತ್ರದ ಶನಿವಾರ ಮಧ್ಯಾಹ್ನ ಪ್ರದರ್ಶನದ ಎಲ್ಲಾ ಟಿಕೆಟ್ಗಳನ್ನು ಕಲಬುರಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬುಕ್ ಮಾಡುವ ಮೂಲಕ ದೀಪಿಕಾಗೆ ಬೆಂಬಲ ನೀಡಿದ್ದಾರೆ.
ಆ್ಯಸಿಡ್ ದಾಳಿ ಸಂತ್ರಸ್ತೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿರುವ ಛಪಾಕ್ ಚಿತ್ರ ಶುಕ್ರವಾರ ತೆರೆಕಂಡಿತ್ತು.
ಇತ್ತೀಚೆಗೆ ದೀಪಿಕಾ, ಜೆಎನ್ಯುನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಚಪಾಕ್ ಚಿತ್ರ ಬಹಿಷ್ಕರಿಸುವಂತೆ ಟ್ವಿಟರ್ನಲ್ಲಿ ಬಿಜೆಪಿಯವರು ಅಭಿಯಾನ ನಡೆಸಿದ್ದರು. ಇದಕ್ಕೂ ಪ್ರತ್ಯುತ್ತರವಾಗಿ ಯೂತ್ ಕಾಂಗ್ರೆಸ್, ನಗರದ ಮೀರಜ್ ಚಿತ್ರಮಂದಿರದಲ್ಲಿ ಛಪಾಕ್ ಸಿನಿಮಾದ ಮ್ಯಾಟ್ನಿ ಶೋನ ಎಲ್ಲಾ ಟಿಕೆಟ್ಗಳನ್ನು ಬುಕ್ ಮಾಡಿ ಚಿತ್ರಕ್ಕೆ ಬೆಂಬಲ ನೀಡಿದೆ.
ಈ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಏಕಕಾಲಕ್ಕೆ ಸಿನಿಮಾ ನೋಡುವ ಮೂಲಕ ಆ್ಯಸಿಡ್ ದಾಳಿ ಸಂತ್ರಸ್ತರ ಜೊತೆಗೆ ನಾವಿದ್ದೇವೆ ಎನ್ನುವ ಸಂದೇಶ ಸಾರುವುದು ನಮ್ಮ ಉದ್ದೇಶ. ಜೊತೆಗೆ ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆದೇಶ ಮಾಡಬಹುದು ಎಂದು ತಿಳಿದಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಹೋರಾಟ ಎಂದಿದ್ದಾರೆ.

Leave a Comment