ಛಪಕ್’ ವಿವಾದ; ಅರ್ಜಿಯ ತೀರ್ಪು ಕಾಯ್ದಿರಿಸಿದ  ದೆಹಲಿ ನ್ಯಾಯಾಲಯ

 ನವದೆಹಲಿ, ಜ 9 – ದೀಪಿಕಾ ಪಡುಕೋಣೆ ಅಭಿನಯದ ‘ಛಪಕ್ ‘ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ತೀರ್ಪನ್ನು ದೆಹಲಿಯ ಪಟಿಯಾಲ ನ್ಯಾಯಾಲಯ ಕಾಯ್ದಿರಿಸಿದೆ.

ಅರ್ಜಿದಾರರಾದ ಅಪರ್ಣಾ ಭಟ್ ಅವರು,  ತಾವು ಹಲವು ವರ್ಷಗಳ ಕಾಲ ಆಸಿಡ್ ದಾಳಿಯ ಸಂತ್ರಸ್ತೆ ಲಕ್ಷ್ಮೀ ಅಗರ್ ವಾಲ್ ಪರ ವಾದ ಮಂಡಿಸಿದ್ದೆ. ಆದರೆ, ನಿರ್ದೇಶಕರು ಚಿತ್ರದಲ್ಲಿ ತಮಗೆ ಯಾವುದೇ ಕ್ರೆಡಿಟ್ ನೀಡಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಇದಕ್ಕೆ ಪರಿಹಾರವಾಗಿ ತಮಗೆ ಯಾವುದೇ ಹಣ ಬೇಕಿಲ್ಲ. ಬದಲಿಗೆ ಚಿತ್ರದಲ್ಲಿ ತಮಗೆ ಹೆಸರು ಉಲ್ಲೇಖಿಸುವಂತೆ ನಿರ್ದೇಶಕರಿಗೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದಾರೆ. ತೀರ್ಪು ಇಂದು ಸಂಜೆಯೊಳಗೆ ಹೊರಬೀಳುವ ಸಾಧ್ಯತೆಯಿದೆ.

2005ರಲ್ಲಿ 15 ವರ್ಷದ ಲಕ್ಷ್ಮೀ ಮೇಲೆ ಭಗ್ನಪ್ರೇಮಿಯೊಬ್ಬ ಆ್ಯಸಿಡ್ ದಾಳಿ ನಡೆಸಿದ್ದನು. ಆಕೆ ನಂತರ ಏಳು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಇದಾದ ನಂತರ ಆಕೆ ಆ್ಯಸಿಡ್ ಸಂತ್ರಸ್ತರ ಪರವಾಗಿ ಕೆಲಸ ಮಾಡಲು ಆರಂಭಿಸಿ, ಇದನ್ನು ತಡೆಯುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಿದ್ದಾಳೆ.

ಈಕೆಯ ಜೀವನಕಥೆಯನ್ನು ಆಧರಿಸಿದ ಚಿತ್ರ “ಛಪಕ್” ಅನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದು, ಶುಕ್ರವಾರ ತೆರೆಗೆ ಬರಲಿದೆ.

 

Leave a Comment